ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಝೆನ್ ಕಥೆ: ಎರಡು ಪ್ರಶ್ನೆಗಳು ಮತ್ತು ಗುರು ಕೊಟ್ಟ ಉತ್ತರ

|
Google Oneindia Kannada News

ಒಬ್ಬ ಶಿಷ್ಯನಿಗೆ ವಿಪರೀತ ಸಿಟ್ಟು. ಅದನ್ನು ನಿಯಂತ್ರಿಸುವುದು ಹೇಗೆಂದು ಆತನಿಗೆ ತಿಳಿಯಲಿಲ್ಲ. ಝೆನ್ ಗುರುವಿನ ಬಳಿ ಹೋಗಿ ಅವರ ಸಲಹೆ ಕೇಳಿದ.

"ಗುರುಗಳೇ, ನನ್ನ ಸಿಟ್ಟು ಹತೋಟಿಗೆ ಬರುವುದಿಲ್ಲ. ಅದಕ್ಕೆ ಏನಾದರೂ ಉಪಾಯ ಹೇಳಿ"

"ಹೌದಾ. ಇದೊಂಥರ ವಿಚಿತ್ರವಾಗಿದೆಯಲ್ಲ! ಎಲ್ಲಿ ಒಮ್ಮೆ ನಿನ್ನ ಸಿಟ್ಟು ತೋರಿಸು, ಹೇಗಿದೆ ನೋಡೋಣ" ಎಂದರು ಗುರುಗಳು.

ಝೆನ್ ಕಥೆ: ಪ್ರಶ್ನೆಗಳೇ ಇಲ್ಲ ಎಂದಾದರೆ ಏನು ಕೇಳುತ್ತೀಯಾ?ಝೆನ್ ಕಥೆ: ಪ್ರಶ್ನೆಗಳೇ ಇಲ್ಲ ಎಂದಾದರೆ ಏನು ಕೇಳುತ್ತೀಯಾ?

"ಆದರೆ ಗುರುಗಳೇ, ನನಗೀಗ ಸಿಟ್ಟು ಬಂದಿಲ್ಲ. ಹೇಗೆ ತೋರಿಸೋದು?" ಎಂದು ಶಿಷ್ಯ ಕೇಳಿದ.

"ಹಾಗಾದ್ರೆ ಯಾವಾಗ ತೋರಿಸುತ್ತೀಯಾ?" ಎಂದು ಗುರು ಮರು ಪ್ರಶ್ನೆ ಹಾಕಿದರು.

 Zen Story How To Control The Anger

ಶಿಷ್ಯನಿಗೆ ಏನು ಹೇಳುವುದೆಂದು ತಿಳಿಯಲಿಲ್ಲ. "ಅಯ್ಯೋ ಅದು ಹೇಗೆಂದು ಹೇಳಲು ಆಗುವುದಿಲ್ಲ. ಇದ್ದಕ್ಕಿದ್ದಂತೆ ಯಾವಾಗಲೋ ಬಂದುಬಿಡುತ್ತದೆ" ಎಂದ.

"ಹಾಗಾದರೆ ಆ ಸಿಟ್ಟು ನಿನ್ನ ಸ್ವಂತದ್ದಲ್ಲ. ನಿನ್ನ ಸ್ವಂತದ್ದೇ ಆಗಿದ್ದರೆ ನಾವು ಕೇಳಿದಾಗಲೆಲ್ಲ ತೋರಿಸಬಹುದಾಗಿತ್ತು. ಅದು ಹುಟ್ಟಿನಿಂದಲೂ ಬಂದಿದ್ದಲ್ಲ, ಅಪ್ಪ ಅಮ್ಮ ಕೊಟ್ಟಿದ್ದು ಕೂಡ ಅಲ್ಲ. ಸಿಟ್ಟು ನಿನ್ನದು ಅಲ್ಲ ಎಂದ ಮೇಲೆ ನಿನ್ನ ಹತೋಟಿಗೆ ಹೇಗೆ ಬರಲು ಸಾಧ್ಯ?" ಎಂದು ಗುರು ಕೇಳಿದರು. ಶಿಷ್ಯನಿಗೆ ಉತ್ತರ ಸಿಕ್ಕಿತು.

ಝೆನ್ ಕಥೆ: ವಾಯುವಿಹಾರ ಮತ್ತು ಧೂಮಪಾನಝೆನ್ ಕಥೆ: ವಾಯುವಿಹಾರ ಮತ್ತು ಧೂಮಪಾನ

****

ಮತ್ತೊಂದು ಕಥೆ: ಅತ್ಯಮೂಲ್ಯ ವಸ್ತು ಯಾವುದು?

ಜಗತ್ತಿನ ಅತ್ಯಮೂಲ್ಯವಾದ ವಸ್ತು ಯಾವುದು ಇರಬಹುದು ಎಂಬ ಜಿಜ್ಞಾಸೆ ಶಿಷ್ಯನೊಬ್ಬನನ್ನು ಕಾಡತೊಡಗಿತು.

ಕೊನೆಗೆ ಝೆನ್ ಗುರು ಸೋಝನ್ ಬಳಿ ಹೋಗಿ ಕೇಳಿದ, "ಈ ಜಗತ್ತಿನಲ್ಲಿ ಅತ್ಯಮೂಲ್ಯವಾದ ವಸ್ತು ಯಾವುದು?"

"ಸತ್ತ ಬೆಕ್ಕಿನ ತಲೆ" ಎಂದು ಪ್ರತಿಕ್ರಿಯಿಸಿದ ಸೋಝನ್.

"ಸತ್ತ ಬೆಕ್ಕಿನ ತಲೆ ಹೇಗೆ ಅತ್ಯಮೂಲ್ಯವಾದ ವಸ್ತುವಾಗುತ್ತದೆ?" ಎಂದು ಕುತೂಹಲದಿಂದ ಕೇಳಿದ.

"ಸತ್ತ ಬೆಕ್ಕಿನ ತಲೆಯ ಬೆಲೆ ಎಷ್ಟೆಂದು ಯಾರಿಗಾದರೂ ಹೇಳಲು ಸಾಧ್ಯವೇ?" ಮರುಪ್ರಶ್ನೆ ಹಾಕಿದ ಸೋಝನ್.

(ಸಂಗ್ರಹ)

English summary
Zen Story of the day: A monk asked his master that he can't control anger. How to solve this problem?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X