ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಝೆನ್ ಕಥೆ: ಯುವ ಸನ್ಯಾಸಿಯ ಸಮಸ್ಯೆಗೆ ಗುರು ಕೊಟ್ಟ ಪರಿಹಾರ!

|
Google Oneindia Kannada News

ಒಬ್ಬ ಯುವ ಝೆನ್ ಸನ್ಯಾಸಿ ಝೆನ್ ಅನ್ನು ಬಹಳ ಗಂಭೀರವಾಗಿ ಅಭ್ಯಾಸ ಮಾಡುತ್ತಿದ್ದ. ಆತನ ಮುಖದಲ್ಲಿ ಎಂದೂ ನಗು ಕಾಣಿಸುತ್ತಲೇ ಇರುತ್ತಿರಲಿಲ್ಲ. ಮುಖ ಯಾವಾಗಲೂ ಬಿಗಿದುಕೊಂಡೇ ಇರುತ್ತಿತ್ತು. ನಗುವ ಪ್ರಯತ್ನವನ್ನೇ ಮಾಡುತ್ತಿರಲಿಲ್ಲ. ಅಷ್ಟರಮಟ್ಟಿಗೆ ಆತ ಗಂಭೀರನಾಗಿದ್ದ.

ಹಾಗೆ ಆತ ಒಮ್ಮೆ ಅಧ್ಯಯನ ಮಾಡುವಾಗ ಯಾವುದೋ ಒಂದು ಸಂಗತಿ ಆತನಿಗೆ ಅರ್ಥವಾಗಲಿಲ್ಲ. ಸಾಕಷ್ಟು ಪ್ರಯತ್ನ ನಡೆಸಿ, ಯೋಚಿಸಿ ಕೊನೆಗೆ ತನ್ನಿಂದ ಸಾಧ್ಯವಿಲ್ಲ ಎಂದು ಸೋತು ಗುರುವಿನ ಬಳಿ ಹೋದ.

ಝೆನ್ ಕಥೆ: ಪ್ರಶ್ನೆಗಳೇ ಇಲ್ಲ ಎಂದಾದರೆ ಏನು ಕೇಳುತ್ತೀಯಾ?ಝೆನ್ ಕಥೆ: ಪ್ರಶ್ನೆಗಳೇ ಇಲ್ಲ ಎಂದಾದರೆ ಏನು ಕೇಳುತ್ತೀಯಾ?

"ಗುರುಗಳೇ, ನನಗೆ ಇದು ಅರ್ಥವಾಗುತ್ತಿಲ್ಲ. ದಯವಿಟ್ಟು ವಿವರಿಸಿ ಅರ್ಥಮಾಡಿಸಿ" ಎಂದು ಗಂಟು ಮುಖದೊಂದಿಗೆ ನಿಂತ.

Zen Stories Young Monk Who Used To Be Serious Always Without Smile

ಶಿಷ್ಯನ ಸಮಸ್ಯೆ ಕೇಳಿದ ಗುರು ಜೋರಾಗಿ ನಗಲಾರಂಭಿಸಿದ. ಆದರೆ ಶಿಷ್ಯನ ಮುಖ ಮತ್ತಷ್ಟು ಬಿಗಿದುಕೊಂಡಿತು. ಶಿಷ್ಯನ ಮುಖ ನೋಡಿ ಗುರು ಇನ್ನೂ ಜೋರಾಗಿ ನಗತೊಡಗಿದ. ಗುರು ನಕ್ಕಷ್ಟೂ ಶಿಷ್ಯನ ಮುಖ ಇನ್ನಷ್ಟು ಗಂಭೀರವಾಗಿ ಮುದುಡಿಹೋಯಿತು. ಗುರು ಅಲ್ಲಿಂದ ಹೊರಟು ಹೋದ.

ಶಿಷ್ಯನಿಗೆ ಅದೇನೆಂದು ಗೊತ್ತಾಗಲಿಲ್ಲ. ಗುರು ಆ ರೀತಿ ನಗಲು ಕಾರಣವೇನು ಎಂದು ಯೋಚಿಸುತ್ತಾ ಕುಳಿತ. ಇದರಿಂದ ಊಟ ಸೇರಲಿಲ್ಲ. ನಿದ್ರೆ ಬರಲಿಲ್ಲ. ಅಧ್ಯಯನದೆಡೆಗೂ ಮನಸ್ಸು ನಿಲ್ಲಲಿಲ್ಲ.

ಝೆನ್ ಕಥೆ: ವಾಯುವಿಹಾರ ಮತ್ತು ಧೂಮಪಾನಝೆನ್ ಕಥೆ: ವಾಯುವಿಹಾರ ಮತ್ತು ಧೂಮಪಾನ

ಹೀಗೇ ಮೂರು ದಿನ ಕಳೆಯಿತು. ಕೊನೆಗೂ ಆತ ಧೈರ್ಯ ಮಾಡಿ ಗುರುವಿನ ಬಳಿ ಹೋದ. "ಗುರುಗಳೇ, ಮೊನ್ನೆ ನನ್ನ ಪ್ರಶ್ನೆಗೆ ನೀವು ನಕ್ಕಿದ್ದೇಕೆ?" ಎಂದು ಕೇಳಿದ.

"ಮತ್ತಿನ್ನೇನು ಮಾಡೋದು? ಒಬ್ಬ ಜೋಕರ್‌ಗೆ ಇರುವಂತಹ ಗುಣ ಕೂಡ ನಿನ್ನಲ್ಲಿ ಇಲ್ಲ. ನೀನೇನು ಝೆನ್ ಕಲಿಯುತ್ತೀಯ?" ಎಂದ ಗುರು.

ಶಿಷ್ಯನಿಗೆ ದಿಗಿಲಾಯಿತು. ಇದೇನು ಗುರು ಹೇಳುತ್ತಿರುವುದು? "ಯಾಕೆ ಗುರುಗಳೇ!?" ಎಂದು ಕೇಳಿದ.

ಝೆನ್ ಕಥೆ: ಮೀನಿಗೆ ಜೀವ ಕೊಡುವ ಕೆಲಸಝೆನ್ ಕಥೆ: ಮೀನಿಗೆ ಜೀವ ಕೊಡುವ ಕೆಲಸ

"ಮತ್ತಿನ್ನೇನು? ಯಾರಾದರೂ ನಗುತ್ತಿದ್ದರೆ ನಮ್ಮ ಮುಖದಲ್ಲೂ ನಗು ಮೂಡಬೇಕು. ಅವರು ನಗುತ್ತಿದ್ದಾರೆ ಎಂದು ನಾವೂ ಖುಷಿ ಪಡಬೇಕು. ಅದರ ಬದಲು ಮುಖ ಗಂಟು ಹಾಕಿಕೊಳ್ಳುವುದೇಕೆ?" ಎಂದು ಕೇಳಿದ ಗುರು.

ಅದನ್ನು ಕೇಳಿ ಶಿಷ್ಯ ನಗತೊಡಗಿದ. ಗುರು ಕೂಡ ಅವನ ಜೊತೆ ಸೇರಿ ಮತ್ತಷ್ಟು ಜೋರಾಗಿ ನಕ್ಕ. ನಗು ಆಶ್ರಮದಲ್ಲೆಲ್ಲಾ ಮಾರ್ದನಿಸಿತು.

(ಸಂಗ್ರಹ)

English summary
Zen Story of the day: A young monk was very serious in his studies. He not even smiles any time. He went to his master with a problem. Master has started laughing at him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X