ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಝೆನ್ ಕಥೆ: ಬದುಕಿನ ಅರ್ಥ ಕಂಡುಕೊಳ್ಳುವ ಮಾರ್ಗ ಯಾವುದು?

|
Google Oneindia Kannada News

ಒಂದೂರಲ್ಲಿ ಒಬ್ಬ ತತ್ವಜ್ಞಾನಿ ಇದ್ದ. ಆತನಿಗೆ ಕಲಿಕೆಯ ಆಸಕ್ತಿ ಹೆಚ್ಚು. ಬಹಳ ಪುಸ್ತಕಗಳನ್ನು ಶ್ರದ್ಧೆಯಿಂದ ಓದುತ್ತಿದ್ದ. ಆದರೆ ಅವನಲ್ಲಿ ಕೆಲವು ಪ್ರಶ್ನೆಗಳಿದ್ದವು. ಅವನಿಗೆ ಬದುಕಿನ ನಿಜವಾದ ಅರ್ಥವೇನು ಎಂದು ತಿಳಿಯಬೇಕು ಎನಿಸಿತು. ಅದಕ್ಕಾಗಿ ಅದಕ್ಕೆ ಸಂಬಂಧಿಸಿದ ಇನ್ನಷ್ಟು ಪುಸ್ತಕಗಳನ್ನು ತಂದು ಓದಿದ. ಆದರೆ ಅವನಿಗೆ ತನ್ನ ಅನುಮಾನಕ್ಕೆ ಸಮಾಧಾನ ನೀಡುವ ಯಾವುದೇ ಉತ್ತರ ಸಿಗಲಿಲ್ಲ.

ಕೊನೆಗೆ ತತ್ವಜ್ಞಾನಿ ಝೆನ್ ಗುರುಗಳನ್ನು ಭೇಟಿಮಾಡಿದ. ಅವರ ಬಳಿ ತನ್ನ ಅನುಮಾನವನ್ನು ಹೇಳಿಕೊಂಡ. 'ನನಗೆ ಬದುಕಿನ ಅರ್ಥ ತಿಳಿಯಬೇಕು, ಜ್ಞಾನೋದಯ ಆಗಬೇಕು ಏನು ಮಾಡಲಿ?' ಎಂದು ಕೇಳಿದ.

ಪ್ರೀತಿಯ ಸಂಭ್ರಮ ಧ್ಯಾನದ ಅರಿವಿಗಿಂತ ದೊಡ್ಡದುಪ್ರೀತಿಯ ಸಂಭ್ರಮ ಧ್ಯಾನದ ಅರಿವಿಗಿಂತ ದೊಡ್ಡದು

'ಝೆನ್ ಬಗ್ಗೆ ತಿಳಿ, ಬದುಕಿನ ಅರ್ಥ ತಿಳಿಯುತ್ತದೆ' ಎಂದರು ಆ ಝೆನ್ ಗುರುಗಳು. ಹೇಗೂ ಪುಸ್ತಕದ ಅಭಿಮಾನಿಯಾಗಿದ್ದ ಆತ ಅನೇಕ ಝೆನ್ ಪುಸ್ತಕಗಳನ್ನು ಓದಿದನು. ಬಳಿಕ ಝೆನ್ ಧರ್ಮದ ಅನುಯಾಯಿಯಾದ. ಹೀಗೆ ವರ್ಷಗಳು ಉರುಳಿದವು. ಒಂದು ದಿನ ಅವನಿಗೆ ತಾನು ಹುಡುಕುತ್ತಿದ್ದ ಪ್ರಶ್ನೆಗೆ ಉತ್ತರ ದೊರೆಯಿತು. ಬದುಕಿನ ಕುರಿತು ಸ್ಪಷ್ಟ ತಿಳಿವಳಿಕೆ ಬಂತು.

Zen Stories What Is The True Meaning Of Life?

ಅವನು ಮನೆಗೆ ಹಿಂತಿರುಗಿದಾಗ ಮೊದಲು ಮಾಡಿದ ಕೆಲಸವೆಂದರೆ ತಾನು ಈವರೆಗೆ ಓದಿದ ಎಲ್ಲಾ ಪುಸ್ತಕಗಳನ್ನು ತಂದು ಅಂಗಳದಲ್ಲಿ ರಾಶಿ ಹಾಕಿ, ಆ ಪುಸ್ತಕಗಳಿಗೆ ಬೆಂಕಿ ಕೊಟ್ಟಿದ್ದು!
(ಸಂಗ್ರಹ)

English summary
Zen Story of the day: A philosopher wanted to know what is the meaning of life? He read many books, but did'nt found the answer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X