ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಝೆನ್ ಕಥೆ: ಪ್ರಶ್ನೆಗಳೇ ಇಲ್ಲ ಎಂದಾದರೆ ಏನು ಕೇಳುತ್ತೀಯಾ?

|
Google Oneindia Kannada News

ಎರಡು ಪ್ರತ್ಯೇಕ ಝೆನ್ ದೇವಾಲಯಗಳಲ್ಲಿ ಮಕ್ಕಳು ಝೆನ್ ಕಲಿಯುತ್ತಿದ್ದರು. ಒಂದು ಮಗು, ಪ್ರತಿ ದಿನ ಬೆಳಗ್ಗೆ ತರಕಾರಿ ತರುವಾಗ ದಾರಿಯಲ್ಲಿ ಇನ್ನೊಂದು ಝೆನ್ ದೇವಾಲಯದ ತನಗಿಂತ ಕೊಂಚ ಹಿರಿಯ ಮಗುವನ್ನು ಭೇಟಿಯಾಗುತ್ತಿತ್ತು.

"ನೀನು ಎಲ್ಲಿಗೆ ಹೋಗುತ್ತಿದ್ದೀಯ?" ಎಂದು ತರಕಾರಿ ತರಲು ಹೊರಟಿದ್ದ ಮಗುವನ್ನು ಇನ್ನೊಂದು ಮಗು ಒಮ್ಮೆ ಕೇಳಿತು.

ಝೆನ್ ಕಥೆ: ಸತ್ತ ಗುರು ಎದ್ದು ಕುಳಿತಾಗಝೆನ್ ಕಥೆ: ಸತ್ತ ಗುರು ಎದ್ದು ಕುಳಿತಾಗ

"ನನ್ನ ಪಾದಗಳು ಎಲ್ಲಿಗೆ ಹೋಗುತ್ತದೆಯೋ ನಾನು ಅಲ್ಲಿಗೆ ಹೋಗುತ್ತಿದ್ದೇನೆ" ಎಂದು ಇನ್ನೊಂದು ಝೆನ್ ದೇವಾಲಯದ ಮಗು ಪ್ರತಿಕ್ರಿಯೆ ನೀಡಿತು.

Zen Stories Two Young Children Question

ಈ ಉತ್ತರದಿಂದ ಮೊದಲ ಮಗು ಗೊಂದಲಕ್ಕೆ ಒಳಗಾಯಿತು. ಅದು ತನ್ನ ಗುರುಗಳ ಬಳಿ ಹೋಗಿ ತನ್ನ ಗೊಂದಲವನ್ನು ತಿಳಿಸಿತು. ಗುರು ಮಗುವಿಗೆ, "ನಾಳೆ ಬೆಳಿಗ್ಗೆ ಆ ಚಿಕ್ಕ ಸಹೋದರನನ್ನು ನೀನು ಭೇಟಿಯಾದಾಗ, ಅವನಿಗೆ ಇಂದು ಕೇಳಿದ ಪ್ರಶ್ನೆಯನ್ನೇ ಕೇಳು. ಅವನು ಅದೇ ಉತ್ತರ ಕೊಡುತ್ತಾನೆ. ಆಗ ನೀನು ಅವನನ್ನು 'ನಿನ್ನಲ್ಲಿ ಯಾವುದೇ ಪಾದಗಳಿಲ್ಲ ಎಂದಾದರೆ ನೀನು ಎಲ್ಲಿಗೆ ಹೋಗುತ್ತೀಯ?' ಎಂದು ಕೇಳು. ಆಗ ಅವನು ತನ್ನ ಉತ್ತರವನ್ನು ಸರಿಪಡಿಸಿಕೊಳ್ಳುತ್ತಾನೆ" ಎಂದು ಸಲಹೆ ನೀಡಿದರು.

ಝೆನ್ ಕಥೆ: ಬೆಕ್ಕಿನ ಹಸಿವು ಮತ್ತು ಇಲಿಯ ಜೀವ ಭೀತಿಝೆನ್ ಕಥೆ: ಬೆಕ್ಕಿನ ಹಸಿವು ಮತ್ತು ಇಲಿಯ ಜೀವ ಭೀತಿ

ಮರುದಿನ ಬೆಳಿಗ್ಗೆ ಮಕ್ಕಳು ಪುನಃ ಮುಖಾಮುಖಿಯಾದರು.

"ನೀನು ಎಲ್ಲಿಗೆ ಹೋಗುತ್ತಿದ್ದೀಯ?" ಎಂದು ಮೊದಲ ಮಗು ಕೇಳಿತು.

ಆಗ ಎರಡನೆಯ ಮಗು ನೀಡಿದ ಉತ್ತರ, "ಗಾಳಿ ಬೀಸುವಲ್ಲೆಲ್ಲಾ ನಾನು ಹೋಗುತ್ತಿದ್ದೇನೆ.

ಎರಡನೆಯ ಮಗುವಿನಿಂದ ನಿರೀಕ್ಷಿತ ಉತ್ತರಕ್ಕೆ ಕಾಯುತ್ತಿದ್ದ ಮೊದಲ ಮಗು ಇದರಿಂದ ಮತ್ತೊಮ್ಮೆ ಗೊಂದಲಕ್ಕೆ ಒಳಗಾಯ್ತು. ಅದು ಮತ್ತೆ ತನ್ನ ಗುರುವಿನ ಬಳಿ ಹೋಯಿತು.

"ಗಾಳಿ ಇಲ್ಲದಿದ್ದರೆ ಅವನು ಎಲ್ಲಿಗೆ ಹೋಗುತ್ತಿದ್ದ ಎಂದು ಈ ಬಾರಿ ಕೇಳು'' ಎಂದು ಮಗುವಿಗೆ ಸಲಹೆ ನೀಡಿದರು.

ಝೆನ್ ಕಥೆ: ಸತ್ತ ಗುರುವಿನ ಬಗ್ಗೆ ಶಿಷ್ಯರ ಗಾಸಿಪ್ಝೆನ್ ಕಥೆ: ಸತ್ತ ಗುರುವಿನ ಬಗ್ಗೆ ಶಿಷ್ಯರ ಗಾಸಿಪ್

ಮರುದಿನ ಮಕ್ಕಳು ಎಂದಿನಂತೆ ಭೇಟಿಯಾದರು.

"ನೀನು ಎಲ್ಲಿಗೆ ಹೋಗುತ್ತಿದ್ದೀಯ?" ಎಂದು ಮೊದಲ ಮಗು ಕೇಳಿತು.

"ನಾನು ತರಕಾರಿಗಳನ್ನು ಖರೀದಿ ಮಾಡಲು ಮಾರುಕಟ್ಟೆಗೆ ಹೋಗುತ್ತಿದ್ದೇನೆ" ಎಂದು ಮತ್ತೊಂದು ಮಗು ಉತ್ತರಿಸಿತು.

"ಮಾರುಕಟ್ಟೆ ಇಲ್ಲದಿದ್ದರೆ ನೀನು ಎಲ್ಲಿಗೆ ಹೋಗುತ್ತೀದ್ದಿ?" ಎಂದು ಮರು ಪ್ರಶ್ನೆ ಮಾಡಿತು.

"ನಾನು ಮನೆಗೆ ಹೋಗುತ್ತೇನೆ" ಎಂದು ಮತ್ತೊಂದು ಮಗು ಉತ್ತರಿಸಿತು.

"ಮನೆ ಇಲ್ಲದಿದ್ದರೆ ನೀನು ಎಲ್ಲಿಗೆ ಹೋಗುತ್ತೀ?"

"ನಾನು ಎಲ್ಲಿಗೆ ಹೋದರೂ, ಮನೆ ನನ್ನ ಮಾರ್ಗದಲ್ಲಿದೆ"

"ಯಾವುದೇ ಮಾರ್ಗವಿಲ್ಲದಿದ್ದರೆ ನೀನು ಎಲ್ಲಿಗೆ ಹೋಗುತ್ತೀಯ?"

"ನಿನ್ನಿಂದ ಈ ಪ್ರಶ್ನೆ ನಿರೀಕ್ಷಿಸಿದ್ದೆ. ನೀನು ನಿನಗೆ ಬೇಕಾದ ಉತ್ತರಗಳಿಗಾಗಿ ನಿರೀಕ್ಷೆ ಮಾಡುತ್ತಿದ್ದೀಯ. ನಾನು ನಿನಗೆ ಏನಾದರೂ ಕೇಳಬಹುದೇ?'' ಎಂದು ಎರಡನೆಯ ಮಗು ಕೇಳಿತು. ಅದಕ್ಕೆ ಮೊದಲ ಮಗು ಸಮ್ಮತಿಸಿತು.

''ಯಾವುದೇ ಪ್ರಶ್ನೆಗಳಿಲ್ಲದಿದ್ದರೆ ನೀನು ನನಗೆ ಏನು ಕೇಳುತ್ತೀಯ?''. ಮೊದಲ ಮಗು ಸುಮ್ಮನಾಯಿತು.

(ಸಂಗ್ರಹ)

English summary
Zen Story of the day: Two children from different temple of schools meets every day. One day one child asked another, where are you going?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X