ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಝೆನ್ ಕಥೆ: ವಾಯುವಿಹಾರ ಮತ್ತು ಧೂಮಪಾನ

|
Google Oneindia Kannada News

ಇಬ್ಬರು ಶಿಷ್ಯಂದಿರು ಗುರುವಿನ ಆಶ್ರಮದ ಮುಂದೆ ಇದ್ದ ಉದ್ಯಾನದಲ್ಲಿ ನಿತ್ಯವೂ ನಡೆದಾಡುತ್ತಾ ಧ್ಯಾನ ಮಾಡುತ್ತಿದ್ದರು. ಝೆನ್ ಪದ್ಧತಿಯಲ್ಲಿ ಪ್ರತಿಯೊಂದು ಕ್ರಿಯೆಯೂ ಧ್ಯಾನ. ಹಾಗೆಂದು ದಿನವಿಡೀ ಕುಳಿತು ಧ್ಯಾನ ಮಾಡುವುದು ಅಸಾಧ್ಯ. ಹಾಗಾಗಿ ಝೆನ್ ಸನ್ಯಾಸಿಗಳು ಕೂತು ಧ್ಯಾನ ಮಾಡಿದಂತೆ ಸ್ವಲ್ಪ ಹೊತ್ತು ನಡೆದಾಡುತ್ತಾ ಧ್ಯಾನ ಮಾಡುತ್ತಾರೆ.

ಹಾಗೆಯೇ ಈ ಶಿಷ್ಯರು ಆಗಾಗ ನಡೆದಾಡುತ್ತಾ ಧ್ಯಾನ ಮಾಡುತ್ತಿದ್ದರು. ಅವರಿಬ್ಬರಿಗೂ ಧೂಮಪಾನ ಮಾಡುವ ಚಟವಿತ್ತು. ಆದರೆ ಗುರುವಿನ ಭಯವಿತ್ತು. ಹೀಗಾಗಿ ಉದ್ಯಾನದಲ್ಲಿ ಓಡಾಡುವಾಗ ಧೂಮಪಾನ ಮಾಡುತ್ತಿರಲಿಲ್ಲ. ಒಮ್ಮೆ ಇಬ್ಬರೂ ವಾಯುವಿಹಾರದ ವೇಳೆ ಧೂಮಪಾನ ಮಾಡಲು ಗುರುವಿನ ಅನುಮತಿ ಪಡೆದುಕೊಳ್ಳಬೇಕೆಂದು ತೀರ್ಮಾನಿಸಿದರು. ಪ್ರತ್ಯೇಕವಾಗಿ ಗುರುವಿನ ಬಳಿ ಹೋಗಿ ಮನವಿ ಮಾಡಿದರು.

ಝೆನ್ ಕಥೆ: ಸತ್ತ ಗುರು ಎದ್ದು ಕುಳಿತಾಗಝೆನ್ ಕಥೆ: ಸತ್ತ ಗುರು ಎದ್ದು ಕುಳಿತಾಗ

ಮರುದಿನ ಒಬ್ಬ ಶಿಷ್ಯ ಗಾರ್ಡನ್‌ನಲ್ಲಿ ಧೂಮಪಾನ ಮಾಡುತ್ತಾ ನಡೆದಾಡುತ್ತಿರುವುದನ್ನು ಕಂಡು ಮತ್ತೊಬ್ಬ ಶಿಷ್ಯನಿಗೆ ಕೋಪ ಉಕ್ಕಿತು. 'ಧೂಮಪಾನ ಮಾಡಲು ನಾನು ಅನುಮತಿ ಕೇಳಿದಾಗ ಗುರುಗಳು ನಿರಾಕರಿಸಿದರು. ಆದರೆ ನಿನಗೆ ಹೇಗೆ ಅನುಮತಿ ನೀಡಿದರು? ನಾನು ಈಗಲೇ ಹೋಗಿ ಅವರನ್ನು ಪ್ರಶ್ನಿಸುತ್ತೇನೆ' ಎಂದು ರೇಗಿದ.

Zen Stories Two Monks And Smoking Habit While Walking

'ಅವಸರ ಮಾಡಬೇಡ. ನೀನು ಗುರುಗಳ ಬಳಿ ಏನೆಂದು ಕೇಳಿದೆ?' ಎಂದು ಮೊದಲ ಶಿಷ್ಯ ಪ್ರಶ್ನಿಸಿದ.

'ವಾಯುವಿಹಾರ ಮಾಡುವಾಗ ಧೂಮಪಾನ ಮಾಡಬಹುದೇ ಎಂದು ಕೇಳಿದೆ?' ಎಂದ ಎರಡನೆಯ ಶಿಷ್ಯ.

ಝೆನ್ ಕಥೆ: ಬೆಕ್ಕಿನ ಹಸಿವು ಮತ್ತು ಇಲಿಯ ಜೀವ ಭೀತಿಝೆನ್ ಕಥೆ: ಬೆಕ್ಕಿನ ಹಸಿವು ಮತ್ತು ಇಲಿಯ ಜೀವ ಭೀತಿ

'ಅದೇ ನೀನು ಮಾಡಿದ ತಪ್ಪು. ಹಾಗೆ ಕೇಳುವುದಲ್ಲ. ಧೂಮಪಾನ ಮಾಡುವಾಗ ವಾಯುವಿಹಾರ ಧ್ಯಾನ ಮಾಡಬಹುದೇ ಎಂದು ಕೇಳಬೇಕಿತ್ತು' ಎಂದು ನಗುತ್ತಾ ಹೇಳಿದ ಮೊದಲ ಶಿಷ್ಯ.

English summary
Zen Story of the day: Two Monks had smoking habit during walking meditation. But they feared about their master.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X