• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಝೆನ್ ಕಥೆ: ಸುಂದರಿಯನ್ನು ನದಿ ದಾಟಿಸಿದ ಬೌದ್ಧ ಸನ್ಯಾಸಿ

|

ಇಬ್ಬರು ಬೌದ್ಧ ಬಿಕ್ಕುಗಳು ಭಿಕ್ಷೆ ಸಂಪಾದಿಸಲು ಬೌದ್ಧ ವಿಹಾರದಿಂದ ಊರಿನ ಕಡೆಗೆ ಹೊರಟಿದ್ದರು. ಅವರಲ್ಲಿ ಒಬ್ಬ ಹಿರಿಯ ಬಿಕ್ಕು. ಮತ್ತೊಬ್ಬ ಕಿರಿಯ. ಊರಿಗೂ ವಿಹಾರಕ್ಕೂ ಮಧ್ಯೆ ಹೊಳೆಯೊಂದು ಹರಿಯುತ್ತಿತ್ತು. ಭಿಕ್ಷೆ ಸಂಗ್ರಹಿಸಲು ಅವರು ದಿನವೂ ನದಿಯನ್ನು ದಾಟಿ ಹೋಗಬೇಕಿತ್ತು. ಎಂದಿನಂತೆ ಅವರು ನದಿಯನ್ನು ದಾಟಲು ಸಮೀಪ ಹೋದರು.

ಅಲ್ಲೊಬ್ಬಳು ಸುಂದರ ಯುವತಿ ಕಾಣಿಸಿದಳು. ಆಕೆ ನದಿಯನ್ನು ದಾಟಿ ಮತ್ತೊಂದು ತೀರಕ್ಕೆ ಹೋಗಬೇಕಿತ್ತು. ಆದರೆ ನೀರು ಕಂಡು ಆಕೆಯಲ್ಲಿ ಭಯ. ಹೀಗಾಗಿ ನೀರಿಗೆ ಕಾಲಿಡಲು ಹಿಂದೇಟು ಹಾಕುತ್ತಾ ದಡದಲ್ಲಿಯೇ ನಿಂತಿದ್ದಳು. ಆಕೆಯ ಸಹಾಯಕ್ಕೆ ಅಲ್ಲಿ ಯಾರೂ ಇರಲಿಲ್ಲ. ಆ ಯುವತಿ ಆಚೆ ತೀರಕ್ಕೆ ಹೋಗಲು ಬಿಕ್ಕುಗಳ ಸಹಾಯ ಕೋರಿದಳು.

ಝೆನ್ ಕಥೆ: ದೆವ್ವ ಓಡಿಸುವುದು ಹೇಗೆ?

ಬೌದ್ಧ ಸನ್ಯಾಸಿಗಳು ಮಹಿಳೆಯರನ್ನು ಸ್ಪರ್ಶಿಸುವುದಿಲ್ಲ ಎಂಬ ಪ್ರಮಾಣ ತೆಗೆದುಕೊಂಡಿದ್ದರಿಂದ ಪರಸ್ಪರ ಮುಖ ನೋಡಿಕೊಂಡರು.

ಕೊನೆಗೆ ಒಂದೂ ಮಾತನಾಡದೆ ಹಿರಿಯ ಬಿಕ್ಕು ಅವಳನ್ನು ಎರಡೂ ಕೈಗಳಿಂದ ಎತ್ತಿಕೊಂಡು ನದಿಯನ್ನು ದಾಟಿಸಿ ಬಿಟ್ಟ. ಕಿರಿಯ ಬಿಕ್ಕುವಿಗೆ ಅದನ್ನು ನೋಡಿ ತೀರಾ ಗಾಬರಿಯಾಯಿತು. ಅಲ್ಲಿ ಏನಾಯಿತು ಎಂಬುದನ್ನು ಆತ ನಂಬದಂತಾದ. ನದಿ ದಾಟಿ ಹಿರಿಯ ಬಿಕ್ಕುವನ್ನು ಮತ್ತೆ ಸೇರಿಕೊಂಡಾಗಲೂ ಆತನಿಂದ ಮಾತು ಹೊರಡದಂತಾಗಿತ್ತು. ಸುಮಾರು ಒಂದು ಗಂಟೆ ಇಬ್ಬರ ನಡುವೆ ಮಾತುಕತೆಯೇ ಇರಲಿಲ್ಲ.

ಝೆನ್ ಕಥೆ: ಸ್ನಾನ ಮಾಡುವವನನ್ನೇ ಬದಲಾಯಿಸಿ ನೋಡು

ಬೌದ್ಧ ಸನ್ಯಾಸಿಗಳು ಮಹಿಳೆಯರನ್ನು ಸ್ಪರ್ಶಿಸುವುದು ಸರಿಯೇ ಎಂಬ ಪ್ರಶ್ನೆ ಅವನನ್ನು ಕಾಡತೊಡಗಿತು. ಸರಿ-ತಪ್ಪುಗಳ ಕುರಿತಾದ ಪ್ರಶ್ನೆ ತುಂಬಾ ಹೊತ್ತು ಅವನ ತಲೆಯಲ್ಲಿ ಕೊರೆಯುತ್ತಿತ್ತು. ಇನ್ನೂ ಒಂದೆರಡು ಗಂಟೆಗಳು ಕಳೆದವು. ಆತನಿಗೆ ತಡೆದುಕೊಳ್ಳಲು ಆಗಲಿಲ್ಲ. ಕೊನೆಗೂ ತನ್ನ ಹಿರಿಯ ಬಿಕ್ಕುವನ್ನು ಕೇಳಿದ, 'ಸನ್ಯಾಸಿಗಳಾಗಿ ನಮಗೆ ಮಹಿಳೆಯನ್ನು ಮುಟ್ಟಲು ಅವಕಾಶವೇ ಇಲ್ಲ. ಆದರೆ ನೀವು ಹೇಗೆ ಆಕೆಯನ್ನು ಹೊತ್ತುಕೊಂಡು ನದಿ ದಾಟಿಸಿದಿರಿ?'

ಆ ಬಿಕ್ಕು ಆತನೆಡೆಗೆ ನೋಡಿ ಪ್ರತಿಕ್ರಿಯಿಸಿದ, 'ಸಹೋದರ, ನಾನು ಅವಳನ್ನು ಅಲ್ಲಿ ಆಗಲೇ ಇಳಿಸಿಬಿಟ್ಟೆ. ನೀನಿನ್ನೂ ಅವಳನ್ನು ಹೊತ್ತುಕೊಂಡೇ ತಿರುಗುತ್ತಿದ್ದೀಯಲ್ಲಾ...!'

ಝೆನ್ ಕಥೆ: ಶಿಷ್ಯ ಮತ್ತು ಗುರುವಿನ ಕುರ್ಚಿ

ನಾವು ಯಾವುದೇ ಗೊಂದಲ ಅಥವಾ ಸಂಕಟವನ್ನು ಅನುಭವಿಸಿದ ಬಳಿಕ ಅದರ ಕುರಿತೇ ಚಿಂತೆ ಮಾಡುತ್ತಿದ್ದರೆ ಯಾವುದೇ ಫಲ ಸಿಗುವುದಿಲ್ಲ. ಉತ್ತರ ಸಿಗದ ಗೊಂದಲಗಳನ್ನು ಅಲ್ಲಿಯೇ ಕೊಡವಿ ಹೋಗುವುದು ನಮ್ಮ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. (ಸಂಗ್ರಹ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Zen Story of the day: Two monks were travelling together. One young woman asked them to help to cross the river. Monks were not permitted to touch women.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more