• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಝೆನ್ ಕಥೆ: ನಿಮಗಿಂತಲೂ ಪ್ರಬಲವಾದ ಶಕ್ತಿ ಯಾವುದು ಗೊತ್ತೇ?

|

ಕಲ್ಲು ಒಡೆಯುವ ಕೆಲಸ ಮಾಡುತ್ತಿದ್ದವನಿಗೆ ತಾನಿರುವ ಸ್ಥಿತಿಯಿಂದಾಗಿ ತುಂಬಾ ಬೇಸರವಾಗಿತ್ತು. ಒಂದು ದಿನ ಆತ ಒಬ್ಬ ಶ್ರೀಮಂತ ವ್ಯಾಪಾರಿಯ ಮನೆ ಮುಂದೆ ಹೋಗುತ್ತಿದ್ದನು. ತೆರೆದಿರುವ ಭಾರಿ ಬಾಗಿಲಿನ ಮೂಲಕ ಒಳಗಿನ ಭರ್ಜರಿ ಆಸ್ತಿ ಮತ್ತು ಗಣ್ಯವ್ಯಕ್ತಿಗಳನ್ನು ನೋಡಿದನು. ಅಬ್ಬಾ! ಆ ವ್ಯಾಪಾರಿ ಎಷ್ಟೊಂದು ಶಕ್ತಿಶಾಲಿಯಾಗಿರಬೇಕು? ಎಂದು ಭಾವಿಸಿದ. ಅದರ ಜತೆಯಲ್ಲೇ ಅವನಿಗೆ ತುಂಬಾ ಅಸೂಯೆ ಉಂಟಾಯಿತು. ಆ ವ್ಯಾಪಾರಿಯಂತೆ ತಾನೂ ಆಗಬೇಕು ಎಂದು ಬಯಸಿದನು.

ಅಚ್ಚರಿ ಎಂಬಂತೆ ಆತ ಹಠಾತ್ತನೆ ವ್ಯಾಪಾರಿಯಾಗಿ ಬದಲಾದ. ಅವನು ಕಲ್ಪಿಸಿಕೊಂಡಂತೆಯೇ ಅತ್ಯಂತ ವಿಲಾಸಿ ಬದುಕನ್ನು ಅನುಭವಿಸಲು ಆರಂಭಿಸಿದ. ಆದರೆ ಅವನಿಗೆ ತನ್ನ ಸಿರಿವಂತಿಕೆ ಕಡಿಮೆಯಿದೆ ಎನಿಸಿ ಸಿರಿತನದ ಬಗ್ಗೆ ಅಸೂಯೆ ಮತ್ತು ದ್ವೇಷ ಮೂಡಲಾರಂಭಿಸಿತು. ಆಗ ಒಬ್ಬ ಉನ್ನತ ಅಧಿಕಾರಿ ಒಂದು ಪಲ್ಲಕ್ಕಿಯಲ್ಲಿ ಹಾದು ಹೋದನು. ಸೈನಿಕರ ಪಡೆ ವಾದ್ಯಗಳನ್ನು ಬಾರಿಸುತ್ತಾ ಆ ಅಧಿಕಾರಿಯ ಪಲ್ಲಕ್ಕಿಯನ್ನು ಹಿಂಬಾಲಿಸುತ್ತಿದ್ದರು. ಎಷ್ಟೇ ಶ್ರೀಮಂತನಾಗಿದ್ದರೂ ಮೊದಲು ಹೊರಡುವುದು ಮೆರವಣಿಗೆಯೇ. ಹೀಗಾಗಿ ಆ ಉನ್ನತ ಅಧಿಕಾರಿಯ ಪಟ್ಟವೇ ಪ್ರಬಲವಾಗಿದೆ ಎಂದು ಭಾವಿಸಿದ ಕಲ್ಲು ಒಡೆಯುವವ, ಉನ್ನತ ಅಧಿಕಾರಿಯಾಗಬೇಕು ಎಂದು ಬಯಸಿದನು.

ಝೆನ್ ಕಥೆ: ಗೆಲ್ಲುವುದು ಕೌಶಲದಿಂದಲ್ಲ ಮನಸ್ಸಿನ ಸಾಮರ್ಥ್ಯದಿಂದ

ಬಯಕೆಯಂತೆಯೇ ಆತ ಉನ್ನತ ಅಧಿಕಾರಿಯಾದನು. ಎಲ್ಲಿಯೇ ಹೋದರೂ ಪಲ್ಲಕ್ಕಿಯಲ್ಲಿ ಮಾಡಿದ ಕುರ್ಚಿಯಲ್ಲಿ ಆತನನ್ನು ಹೊತ್ತುಕೊಂಡು ಹೋಗುತ್ತಿದ್ದರು. ಅದು ಆತನಲ್ಲಿ ಕಳವಳ ಮೂಡಿಸಿತು ಮತ್ತು ಸುತ್ತಲಿನ ಜನರು ಅವನನ್ನು ದ್ವೇಷಿಸತೊಡಗಿದನು. ಆ ಪಲ್ಲಕ್ಕಿ ಬೇಸಿಗೆ ಸಮಯದಲ್ಲಿ ಬಹಳ ಬಿಸಿಯಾಗಿ ಸುಡುತ್ತಿದ್ದರಿಂದ ಪಲ್ಲಕ್ಕಿಯ ಕುರ್ಚಿಯಲ್ಲಿ ಕೂರಲು ಆತನಿಗೆ ಕಷ್ಟವಾಗುತ್ತಿತ್ತು. ಬೇಸಿಗೆಯಲ್ಲಿ ಸುಡುತ್ತಿದ್ದದ್ದು ಸೂರ್ಯ. ಆತ ಆಕಾಶದಲ್ಲಿ ಹೆಮ್ಮೆಯಿಂದ ಪ್ರಜ್ವಲಿಸುತ್ತಿದ್ದನು. ಆದರೆ ಅವನ ಉಪಸ್ಥಿತಿ ಯಾರನ್ನೂ ಬಾಧಿಸುವುದಿಲ್ಲ. ಹೀಗಾಗಿ ಸೂರ್ಯ ಎಷ್ಟೊಂದು ಪ್ರಬಲವಾಗಿದ್ದಾನೆ ಎಂದು ಭಾವಿಸಿ, ಸೂರ್ಯನಾಗಬೇಕೆಂದು ಬಯಸಿದ.

ಬಳಿಕ ಆ ವ್ಯಕ್ತಿ ಸೂರ್ಯನಾದ. ತನ್ನ ಪ್ರಖರವಾದ ಬೆಳಕಿನ ಕಿರಣಗಳಿಂದ ಎಲ್ಲರ ಮೇಲೆಯೂ ಬಿಸಿಲಿನ ಝಳ ಬೀರತೊಡಗಿದ. ಇದರಿಂದ ಭೂಮಿಯೆಲ್ಲಾ ಸುಡಲಾರಂಭಿಸಿತು. ಕಾರ್ಮಿಕರು ಮತ್ತು ರೈತರು ಶಾಪ ಹಾಕುತ್ತಿದ್ದರು. ಕ್ರಮೇಣ ದೊಡ್ಡ ದೊಡ್ಡ ಕಪ್ಪು ಮೋಡಗಳು ಸೂರ್ಯ ಮತ್ತು ಭೂಮಿಯ ಮಧ್ಯೆ ಚಲಿಸಲು ಆರಂಭಿಸಿದವು. ಹೀಗಾಗಿ ಎಲ್ಲಾ ಕಡೆ ಸೂರ್ಯನ ಬೆಳಕು ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ. ಆತನಿಗೆ ಆ ಕರಿ ಮೋಡಗಳು ಎಷ್ಟೊಂದು ಪ್ರಬಲವಾಗಿವೆ ಎನಿಸಿತು. ತಾನೂ ಮೋಡವಾಗಲು ಬಯಸಿದ.

ನಂತರ ಅವನು ಮೋಡವಾನು. ಹಳ್ಳಿಗಳು ಮತ್ತು ಇತರೆ ಪ್ರದೇಶಗಳಲ್ಲಿ ಆತನಿಂದ ಸುರಿದ ಮಳೆ ಪ್ರವಾಹ ಉಂಟುಮಾಡಿತು. ಎಲ್ಲರೂ ಕಂಗಾಲಾಗಿ ಮೋಡವನ್ನು ಶಪಿಸಲು ಶುರು ಮಾಡಿದರು. ತಕ್ಷಣವೇ ಒಂದು ದೊಡ್ಡ ಶಕ್ತಿಯು ಅವನನ್ನು ಮೋಡವನ್ನು ತಳ್ಳಿದಂತೆ ಭಾಸವಾಯಿತು. ಅದು ಗಾಳಿ ಎಂದು ಆತನಿಗೆ ಅರ್ಥವಾಯಿತು. ಮೋಡಕ್ಕಿಂತಲೂ ಗಾಳಿ ಎಷ್ಟೊಂದು ಪ್ರಬಲವಾಗಿದೆ ಎಂಬ ಲೆಕ್ಕಾಚಾರ ಹಾಕಿದ. ತಾನೂ ಗಾಳಿ ಆಗಬೇಕು ಎಂದು ಬಯಸಿದ.

ಪ್ರೀತಿಯ ಸಂಭ್ರಮ ಧ್ಯಾನದ ಅರಿವಿಗಿಂತ ದೊಡ್ಡದು

ಅಂದುಕೊಂಡಂತೆ ಅವನು ಗಾಳಿಯಾದ. ಬಿರುಗಾಳಿಯಿಂದ ಮನೆಯ ಹೆಂಚು, ಮೇಲ್ಛಾವಣಿಗಳು ಹಾರಿ ಹೋದವು. ದೊಡ್ಡ ದೊಡ್ಡ ಮರಗಳು ಬುಡ ಸಮೇತ ನೆಲಕಚ್ಚಿದವು. ಜನರೆಲ್ಲರೂ ಭಯಭೀತರಾದರು ಮತ್ತು ಗಾಳಿಯನ್ನು ಕೂಡ ದ್ವೇಷಿಸಲು ಶುರು ಮಾಡಿದರು. ಜೋರಾಗಿ ಬೀಸುತ್ತಿದ್ದ ಆತ ಒಂದು ದೊಡ್ಡ ಕಲ್ಲಿಗೆ ಎದುರಾಗಿ ಜೋರಾಗಿ ಬಿರುಗಾಳಿಯಾಗಿ ನುಗ್ಗಿದ. ಆದರೆ ಆ ಕಲ್ಲು ಸರಿದಾಡಲಿಲ್ಲ. ಎಷ್ಟೇ ಜೋರಾಗಿ ಬೀಸಿದರೂ ಕಿಂಚತ್ತೂ ಅಲುಗಾಡಲೇ ಇಲ್ಲ. ಅದು ಬೃಹತ್ತಾದ ಕಲ್ಲಾಗಿತ್ತು. ಗಾಳಿಗಿಂತಲೂ ಕಲ್ಲು ಎಷ್ಟೊಂದು ಪ್ರಬಲವಾಗಿದೆ ಎಂದು ಭಾವಿಸಿದ. ತಾನು ಕೂಡ ಆ ಕಲ್ಲಿನಂತೆ ಆಗಲು ಬಯಸಿದ.

ಜ್ಞಾನೋದಯ ಎನ್ನುವುದು ಹೇಗೆ ಸಿಗುತ್ತದೆ ಗೊತ್ತೇ?

ಅಪೇಕ್ಷೆಯಂತೆ ಅವನು ಕಲ್ಲಾದ. ಭೂಮಿಯ ಮೇಲೆ ಕಲ್ಲಿಗಿಂತಲೂ ಬಲಿಷ್ಠವಾದ ಶಕ್ತಿ ಬೇರೆ ಯಾವುದಕ್ಕೂ ಇಲ್ಲ ಎಂದು ಹೆಮ್ಮೆಯಿಂದ ಬೀಗಿದ. ಆದರೆ ಅಲ್ಲಿ ನಿಂತಿದ್ದ ಅವನಿಗೆ ಠಣ್ ಠಣ್ ಎಂಬ ಶಬ್ದ ಕೇಳಿಸುತ್ತಿತ್ತು. ಕಠಿಣವಾಗಿರುವ ತನ್ನ ಮೇಲೆ ಯಾರೋ ಉಳಿಯನ್ನು ಇಟ್ಟು ಸುತ್ತಿಗೆಯಿಂದ ಹೊಡೆಯುತ್ತಿದ್ದ ಶಬ್ದ ಅದು. ಇದನ್ನು ಕೇಳಿದ ನಂತರ ಅವನಿಗೆ ತನಗಿಂತಲೂ ಪ್ರಬಲವಾಗಿದೆಯಾ ಈ ಕಲ್ಲು ಎನಿಸಿತು. ಮತ್ತೆ ಕಲ್ಲು ಒಡೆಯುವವನಾಗಿ ಬದಲಾದ.

(ಸಂಗ್ರಹ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Zen Story of the day: A stone cutter was dissatisfied with himself and with his position in life. He wanted to become more powerful. And he become as he was wished.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more