ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಝೆನ್ ಕಥೆ: ವಿಮರ್ಶಕ ಶಿಷ್ಯನಿಗೆ ಬೆದರಿದ ಗುರು

|
Google Oneindia Kannada News

ಕ್ಯೋಟೋದಲ್ಲಿರುವ ಒಬಾಕು ದೇವಾಲಯದ ಮಹಾದ್ವಾರದ ಮೇಲೆ "ಪ್ರಥಮ ಸೂತ್ರ" ಎಂದು ಕೆತ್ತಲಾಗಿದೆ. 200 ವರ್ಷಗಳಷ್ಟು ಹಳೆಯದಾದ, ದೊಡ್ಡ ಅಕ್ಷರಗಳಲ್ಲಿ ಕೆತ್ತಲಾದ ಈ ಬರಹವನ್ನು ಅನೇಕರು ಕೈಬರಹದ ಅತ್ಯುತ್ತಮ ಕಲಾಕೃತಿ ಎಂದು ಹೊಗಳಿದ್ದಾರೆ. ಇದನ್ನು ಬರೆದದ್ದು ಕೊಸೆನ್ ಎಂಬ ಅಸಾಮಾನ್ಯ ಕಲಾವಿದ.

ಕೊಸೆನ್ ಮೊದಲು ಅಕ್ಷರಗಳನ್ನು ಕಾಗದದ ಮೇಲೆ ಬರೆಯುತ್ತಿದ್ದ. ಆಮೇಲೆ ಆತನ ಕೆಲಸಗಾರರು ಆ ಅಕ್ಷರಗಳನ್ನು ಮರದ ಮೇಲೆ ಯಥಾವತ್ತಾಗಿ ಕೊರೆಯುತ್ತಿದ್ದರು.

ಝೆನ್ ಕಥೆ: ಗೆಲ್ಲುವುದು ಕೌಶಲದಿಂದಲ್ಲ ಮನಸ್ಸಿನ ಸಾಮರ್ಥ್ಯದಿಂದಝೆನ್ ಕಥೆ: ಗೆಲ್ಲುವುದು ಕೌಶಲದಿಂದಲ್ಲ ಮನಸ್ಸಿನ ಸಾಮರ್ಥ್ಯದಿಂದ

ಕೊಸೆನ್‌ಗೆ ಒಬ್ಬ ಧೈರ್ಯವಂತ ಶಿಷ್ಯ ಇದ್ದ. ಅಕ್ಷರ ಕಲೆಯಲ್ಲಿ ಪರಿಣತಿ ಪಡೆದಿದ್ದ ಆತ ತನ್ನ ಗುರುವಿಗಾಗಿ ಭಾರಿ ಪ್ರಮಾಣದ ಇಂಕನ್ನು ಸಿದ್ಧಪಡಿಸುತ್ತಿದ್ದ. ತನ್ನ ಗುರುವಿನ ತಾಂತ್ರಿಕತೆಯ ಕಟು ವಿಮರ್ಶಕ ಆತ.

Zen Stories The First Principle Master Kosen And His Student

ಪ್ರಥಮ ಸೂತ್ರವನ್ನು ಗುರು ಮೊದಲ ಸಲ ಬರೆದಾಗ, "ಗುರುಗಳೇ, ಇದು ಚೆನ್ನಾಗಿಲ್ಲ" ಎಂದ ಶಿಷ್ಯ.

''ಇದು ಹೇಗಿದೆ?'' ಎಂದು ಗುರು ಮತ್ತೊಮ್ಮೆ ಬರೆದು ಕೇಳಿದ.

"ಮೊದಲನೆಯದ್ದಕ್ಕಿಂತ ಇದು ಇನ್ನೂ ಕೆಟ್ಟದಾಗಿದೆ'' ಎಂದ ಶಿಷ್ಯ.

ಪ್ರೀತಿಯ ಸಂಭ್ರಮ ಧ್ಯಾನದ ಅರಿವಿಗಿಂತ ದೊಡ್ಡದುಪ್ರೀತಿಯ ಸಂಭ್ರಮ ಧ್ಯಾನದ ಅರಿವಿಗಿಂತ ದೊಡ್ಡದು

'ಪ್ರಥಮ ಸೂತ್ರ'ವನ್ನು ಗುರು ತಾಳ್ಮೆಯಿಂದ ಮತ್ತೆ ಮತ್ತೆ ಬರೆಯುತ್ತಲೇ ಹೋದ. ಶಿಷ್ಯನಿಗೆ ಒಂದೂ ಇಷ್ಟವಾಗಲಿಲ್ಲ. ಮತ್ತೆ ಬರೆದದ್ದನ್ನೂ ಚೆನ್ನಾಗಿಲ್ಲ ಎಂದೇ ಹೇಳಿದ. ಹೀಗೇ ಎಂಬತ್ತನಾಲ್ಕು ಪ್ರಥಮ ಸೂತ್ರಗಳ ಹಾಳೆಗಳು ಅಲ್ಲಿ ರಾಶಿಯಾಗಿ ಬಿದ್ದವು. ಶಿಷ್ಯನಿಗೆ ಮಾತ್ರ ಯಾವುದೂ ಒಪ್ಪಿಗೆಯಾಗಲಿಲ್ಲ.

ಶಿಷ್ಯ ಕೆಲವು ನಿಮಿಷ ಆ ಕೋಣೆಯಿಂದ ಹೊರ ಹೋಗಬೇಕಾಗಿ ಬಂತು. 'ಅವನ ತೀಕ್ಷ್ಣ ಕಣ್ಣಿನಿಂದ ತಪ್ಪಿಸಿಕೊಳ್ಳುವುದಕ್ಕೆ ಇದೇ ಸರಿಯಾದ ಸಮಯ' ಎಂದುಕೊಂಡ ಗುರು ನಿರಾಳವಾದ ಮನಸ್ಸಿನಿಂದ ಸರಸರನೆ "ಪ್ರಥಮ ಸೂತ್ರ" ಬರೆದ.

ಜ್ಞಾನೋದಯ ಎನ್ನುವುದು ಹೇಗೆ ಸಿಗುತ್ತದೆ ಗೊತ್ತೇ?ಜ್ಞಾನೋದಯ ಎನ್ನುವುದು ಹೇಗೆ ಸಿಗುತ್ತದೆ ಗೊತ್ತೇ?

ಸ್ವಲ್ಪ ಸಮಯದ ಬಳಿಕ ಮರಳಿ ಬಂದ ಶಿಷ್ಯ ಅದನ್ನು ಕಂಡು "ಅದ್ಭುತ ಕಲಾಕೃತಿ" ಎಂದು ಉದ್ಗರಿಸಿದ.

(ಸಂಗ್ರಹ)

English summary
Zen Story of the day: Master Kosen was an expert curver. He wrote 'The First Principle' over the gate of Obaku temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X