ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಝೆನ್ ಕಥೆ: ಗುರು ಸತ್ತು ಹೋಗಿದ್ದು ಗೊತ್ತಾದದ್ದು...

|
Google Oneindia Kannada News

ಝೆನ್ ಪ್ರಸಿದ್ಧ ಗುರುಗಳಲ್ಲಿ ಒಬ್ಬನಾದ ಶೋಯಿಚಿಗೆ ಇದ್ದದ್ದು ಒಂದೇ ಕಣ್ಣು. ಆತನಿಗೆ ಅಗಾಧ ಜ್ಞಾನವಿತ್ತು. ತೊಫುಕು ದೇವಾಲಯದಲ್ಲಿ ಆತ ತನ್ನ ಶಿಷ್ಯರಿಗೆ ಬೋಧನೆ ಮಾಡುತ್ತಿದ್ದ.

ಇಡೀ ದೇವಸ್ಥಾನ ಹಗಲು ಮತ್ತು ರಾತ್ರಿ ಸಂಪೂರ್ಣ ನಿಶ್ಶಬ್ಧ ಸ್ಥಿತಿಯಲ್ಲಿರುತ್ತಿತ್ತು. ಯಾವ ಸದ್ದೂ ಇರುತ್ತಿರಲಿಲ್ಲ. ಏಕೆಂದರೆ ಆತನ ಶಿಕ್ಷಣ ವಿಧಾನವೇ ಮೌನದ ಸಾಧನೆ. ಆ ದೇವಾಲಯದಲ್ಲಿ ಧರ್ಮ ಸೂತ್ರಗಳನ್ನು ಪಠಿಸುವುದನ್ನು ಕೂಡ ಆತ ನಿರ್ಬಂಧಿಸಿದ್ದ.

ಝೆನ್ ಕಥೆ: ಗೆಲ್ಲುವುದು ಕೌಶಲದಿಂದಲ್ಲ ಮನಸ್ಸಿನ ಸಾಮರ್ಥ್ಯದಿಂದಝೆನ್ ಕಥೆ: ಗೆಲ್ಲುವುದು ಕೌಶಲದಿಂದಲ್ಲ ಮನಸ್ಸಿನ ಸಾಮರ್ಥ್ಯದಿಂದ

ಅವನ ಶಿಷ್ಯರು ಧ್ಯಾನವನ್ನು ಬಿಟ್ಟು ಬೇರೆ ಯಾವ ಸಾಧನೆಯನ್ನೂ ಮಾಡಬೇಕಿರಲಿಲ್ಲ. ಒಂದು ದಿನ ಶೋಯಿಚಿ ಕೊನೆಯುಸಿರೆಳೆದ. ದೇವಾಲಯದ ಪಕ್ಕದಲ್ಲಿ ವಾಸಿಸುತ್ತಿದ್ದ ಮಹಿಳೆಯೊಬ್ಬಳಿಗೆ ಘಂಟಾನಾದ ಕೇಳಿಸಿತು. ಜತೆಗೆ ಶಿಷ್ಯರು ಗಟ್ಟಿಯಾಗಿ ಸೂತ್ರಗಳನ್ನು ಪಠಿಸುತ್ತಿರುವುದು ಕೂಡ ಕೇಳಿಸಿತು. ಗುರು ಶೋಯಿಚಿ ತೀರಿ ಹೋದ ಎಂದು ಆಕೆಗೆ ತಿಳಿಯಿತು.

Zen Stories One Eyed Teacher Shoichi Taught Silence Meditation

***

ಎರಡು ಮೊಲಗಳ ಹಿಂದೆ ಓಡುವವ...

ಮಾರ್ಷಲ್ ಆರ್ಟ್ಸ್‌ ಕಲಿಯುತ್ತಿದ್ದ ವಿದ್ಯಾರ್ಥಿ ತನ್ನ ಗುರುವಿನ ಬಳಿ ತೆರಳಿ ಒಂದು ಪ್ರಶ್ನೆ ಮುಂದಿಟ್ಟ, 'ಮಾರ್ಷಲ್ ಆರ್ಟ್ಸ್‌ನಲ್ಲಿ ನನ್ನ ಜ್ಞಾನವನ್ನು ವೃದ್ಧಿಸಿಕೊಳ್ಳಲು ಬಯಸಿದ್ದೇನೆ. ನಿಮ್ಮಲ್ಲಿನ ಕಲಿಕೆಯ ಜತೆಗೆ ಇನ್ನೊಂದು ಬಗೆಯಲ್ಲಿ ಕೂಡ ಕಲೆಯನ್ನು ಸಿದ್ಧಿಸಿಕೊಳ್ಳಲು ಮತ್ತೊಬ್ಬ ಗುರುವಿನ ಬಳಿಯೂ ಕಲಿಯಲು ಉದ್ದೇಶಿಸಿದ್ದೇನೆ. ಈ ಆಲೋಚನೆ ಬಗ್ಗೆ ನಿಮ್ಮ ಅಭಿಪ್ರಾಯವೇನು?'.

ಪ್ರೀತಿಯ ಸಂಭ್ರಮ ಧ್ಯಾನದ ಅರಿವಿಗಿಂತ ದೊಡ್ಡದುಪ್ರೀತಿಯ ಸಂಭ್ರಮ ಧ್ಯಾನದ ಅರಿವಿಗಿಂತ ದೊಡ್ಡದು

'ಎರಡು ಮೊಲಗಳನ್ನು ಬೆನ್ನಟ್ಟುವ ಬೇಟೆಗಾರ ಒಂದು ಮೊಲವನ್ನೂ ಹಿಡಿಯಲಾರ' ಎಂದು ಗುರುಗಳು ತಿಳಿಸಿದರು.

English summary
Zen Story of the day: Shoichi Was an one eyed teacher. He taught to keep the temple whole day and night in silence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X