ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಝೆನ್ ಕಥೆ: ಸ್ನಾನ ಮಾಡುವವನನ್ನೇ ಬದಲಾಯಿಸಿ ನೋಡು

|
Google Oneindia Kannada News

ಓಫುರೋ ಎನ್ನುವುದು ಜಪಾನಿಗರ ವಿಶಿಷ್ಟ ಸ್ನಾನ ಪದ್ಧತಿ. ಮರದಿಂದ ಮಾಡಿದ ಬಾತ್‌ಟಬ್‌ನಲ್ಲಿ ಮಾಡುವ ಸ್ನಾನದ ವಿಧಾನ ಬಹಳ ಜನಪ್ರಿಯ. ಮಾಸ್ಟರ್ ಹಕೂಯಿನ್‌ನ ಶಿಷ್ಯ ಮೊಂಡೈ ಈ ಸ್ನಾನದ ವಿಚಾರದಲ್ಲಿ ಬಹಳ ಸೋಮಾರಿ. ಒಂದು ದಿನ ಮೊಂಡೈ ತನ್ನ ಗುರುವನ್ನು ಪ್ರಶ್ನಿಸಿದ, 'ಗುರುಗಳೇ, ಓಫುರೋಗಾಗಿ ಪ್ರತಿದಿನ ನಾನು ಒಂದು ಗಂಟೆ ವ್ಯಯ ಮಾಡುತ್ತಿದ್ದೇನೆ. ಆದರೂ ನನಗೆ ಅದರಿಂದ ಸಮಾಧಾನ ಸಿಗುತ್ತಿಲ್ಲ. ಏಕೆಂದರೆ ಅದರಿಂದ ತುಂಬಾ ಬೆವರುತ್ತೇನೆ ಮತ್ತು ಅಲ್ಲಿ ನನಗೆ ಹಿತಕರ ಎನಿಸುವುತ್ತಿಲ್ಲ. ಅಲ್ಲಿದ್ದಾಗ ಒಂದೇ ಒಂದು ವಿಶೇಷ ಹೊಳಹು ಕೂಡ ದಕ್ಕುವುದಿಲ್ಲ. ಝೆನ್ ಕಲಿಕೆಗೆ ಓಫುರಾ ಅನುಕೂಲಕಾರಿಯೇ?'.

ಝೆನ್ ಕಥೆ: ಗೆಲ್ಲುವುದು ಕೌಶಲದಿಂದಲ್ಲ ಮನಸ್ಸಿನ ಸಾಮರ್ಥ್ಯದಿಂದಝೆನ್ ಕಥೆ: ಗೆಲ್ಲುವುದು ಕೌಶಲದಿಂದಲ್ಲ ಮನಸ್ಸಿನ ಸಾಮರ್ಥ್ಯದಿಂದ

'ಪ್ರಾಚೀನ ಗ್ರೀಸ್‌ನಲ್ಲಿ ಆರ್ಕಿಮಿಡಿಸ್‌ಗೆ ಸ್ನಾನ ಮಾಡುವ ಸಂದರ್ಭದಲ್ಲಿಯೇ ಜ್ಞಾನೋದಯವಾಗಿತ್ತು. ಬಹುಶಃ ನೀನು ಸ್ನಾನ ಮಾಡುವಾಗ ನೀರಿನ ಬಿಸಿ ಜಾಸ್ತಿ ಇರಬೇಕು. ಅದನ್ನು ಸರಿಮಾಡಿಕೋ' ಎಂದು ಹಕೂಯಿನ್ ಸಲಹೆ ನೀಡಿದ.

Zen Stories Master Hakuin Student Mondai Ofuro

ಮರುದಿನ ಮೊಂಡೈ ಮತ್ತೆ ಗುರು ಹಕೂಯಿನ್ ಬಳಿ ಬಂದು ಹೇಳಿದ, 'ಗುರುಗಳೇ, ಇಂದು ನಾನು ನೀರಿನ ತಾಪವನ್ನು ಕಡಿಮೆ ಮಾಡಿಕೊಂಡಿದ್ದೆ. ಅದು ಹೆಚ್ಚೂ ಕಡಿಮೆ ತಣ್ಣಗೆ ಇತ್ತು. ಆದರೂ ನನಗೆ ಯಾವುದೇ ಹೊಸ ಹೊಳಹು ಹೊಳೆಯಲಿಲ್ಲ. ಸ್ನಾನದಲ್ಲಿ ಇನ್ನೇನಾದರೂ ಬದಲಾವಣೆ ಬದಲಾಯಿಸಬೇಕೇ?'

ಪ್ರೀತಿಯ ಸಂಭ್ರಮ ಧ್ಯಾನದ ಅರಿವಿಗಿಂತ ದೊಡ್ಡದುಪ್ರೀತಿಯ ಸಂಭ್ರಮ ಧ್ಯಾನದ ಅರಿವಿಗಿಂತ ದೊಡ್ಡದು

'ಹೌದಾ, ಹಾಗಾದರೆ ನೀನು ಸ್ನಾನ ಮಾಡುವವನ್ನು ಬದಲಾಯಿಸಬೇಕೆನಿಸುತ್ತದೆ' ಎಂದ ಹಕೂಯಿನ್.

English summary
Zen Story of the day: Mondai asked Master Hakuin is Ofuro useful to a Zen practitioner?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X