ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಝೆನ್ ಕಥೆ: ಮೀನಿಗೆ ಜೀವ ಕೊಡುವ ಕೆಲಸ

|
Google Oneindia Kannada News

ಒಬ್ಬ ಮುದುಕ ಸಂಜೆ ಸಮುದ್ರ ತೀರದಲ್ಲಿ ವಾಯುವಿಹಾರ ಮಾಡಲು ತೆರಳಿದ. ಅಲ್ಲಿ ಆತನ ಕಣ್ಣಿಗೆ ಆಶ್ಚರ್ಯದ ದೃಶ್ಯ ಕಾಣಿಸಿತು. ಕಡಲಿನ ತೀರ ತುಂಬಾ ಸಾವಿರಾರು ಮೀನುಗಳು ಬಂದಿ ಬಿದ್ದಿದ್ದವು. ನೀರಿನಿಂದ ಹೊರಬಂದ ಅವರು ಉಸಿರಾಡಲು ಸಾಧ್ಯವಾಗದೆ ವಿಲವಿಲ ಒದ್ದಾಡುತ್ತಿದ್ದವು. ಹಾಗೆ ಕಣ್ಣು ಹಾಯಿಸಿದಾಗ ಬಾಲಕಿಯೊಬ್ಬಳು ಮೀನಿನ ಜತೆ ಆಡುತ್ತಿದ್ದಂತೆ ಕಾಣಿಸಿತು.

ಹತ್ತಿರ ಹೋಗಿ ನೋಡಿದಾಗ ಆ ಬಾಲಕಿ ದಡದಿಂದ ಒಂದೊಂದೇ ಮೀನುಗಳನ್ನು ಹೆಕ್ಕಿ ಸಮುದ್ರಕ್ಕೆ ಎಸೆಯುತ್ತಿರುವುದು ಕಂಡಿತು. ಬಾಲಕಿಯ ಪ್ರಯತ್ನ ಕಂಡು ಮುದುಕ ಜೋರಾಗಿ ನಕ್ಕ. 'ಅಯ್ಯೋ ಚಿಕ್ಕ ಹುಡುಗಿ, ನೀನು ಏನು ಮಾಡುತ್ತಿದ್ದೀಯಾ ಎನ್ನುವುದು ನಿನಗೆ ತಿಳಿದಿದೆಯೇ? ಎಂದು ಆಕೆಯನ್ನು ಕೇಳಿದ.

ಝೆನ್ ಕಥೆ: ಸತ್ತ ಗುರು ಎದ್ದು ಕುಳಿತಾಗಝೆನ್ ಕಥೆ: ಸತ್ತ ಗುರು ಎದ್ದು ಕುಳಿತಾಗ

"ನಾನು ಈ ಮೀನಿನ ಜೀವವನ್ನು ಉಳಿಸುತ್ತಿದ್ದೇನೆ" ಎಂದ ಬಾಲಕಿ, ನಾನು ಮೀನನ್ನು ನೀರಿನಲ್ಲಿ ಎಸೆಯದೆ ಹೋದರೆ ಅವು ಉಸಿರಾಡಲು ಆಗದೆ ಸಾಯುತ್ತವೆ. ಅವುಗಳಿಗೆ ಬದುಕಲು ನೀರಿನ ಅಗತ್ಯವಿದೆ'' ಎಂದು ಉತ್ತರಿಸಿ ತನ್ನ ಕಾಯಕದಲ್ಲಿ ಮತ್ತೆ ಮಗ್ನಳಾದಳು.

Zen Stories Little Girl Giving Life To Fish

ಆ ಮುದುಕ ಇನ್ನೂ ಜೋರಾಗಿ ನಗುತ್ತಾ ಕೇಳಿದ, "ಆದರೆ ನೀನೊಬ್ಬಳು ಮಾತ್ರವೇ ಇದ್ದೀಯ. ಈ ಸಮುದ್ರ ತೀರದಲ್ಲಿ ಸಾವಿರಾರು ಮೀನುಗಳು ಬಿದ್ದಿವೆ. ನಿನ್ನ ಒಂದು ಸಣ್ಣ ಕಾರ್ಯ ಏನು ಅಂತಹ ಬದಲಾವಣೆ ತರಲು ಸಾಧ್ಯ, ಎಷ್ಟೊಂದು ಮೀನುಗಳು ಸಾಯುತ್ತವೆಯಲ್ಲವೇ? ಅದರಲ್ಲಿ ಇದೂ ಒಂದು ಎಂದು ಬಿಟ್ಟುಬಿಡು. ಏನೂ ಬದಲಾವಣೆಯಾಗುವುದಿಲ್ಲ ಈ ಪ್ರಪಂಚಕ್ಕೆ''.

ಝೆನ್ ಕಥೆ: ಬೆಕ್ಕಿನ ಹಸಿವು ಮತ್ತು ಇಲಿಯ ಜೀವ ಭೀತಿಝೆನ್ ಕಥೆ: ಬೆಕ್ಕಿನ ಹಸಿವು ಮತ್ತು ಇಲಿಯ ಜೀವ ಭೀತಿ

ಬಾಲಕಿ ಕೆಳಕ್ಕೆ ಬಾಗಿ ಒಂದು ಮೀನನ್ನು ಎತ್ತಿಕೊಂಡು, ಅದನ್ನು ಆ ಮುದುಕನಿಗೆ ತೋರಿಸುತ್ತಾ ಸಮುದ್ರಕ್ಕೆ ಎಸೆದಳು. "ನಾನು ಈ ಒಂದು ಮೀನಿನ ಜೀವನದಲ್ಲಿ ಬದಲಾವಣೆ ಮಾಡಿದೆ, ನನಗಷ್ಟೇ ಸಾಕು".

ಝೆನ್ ಕಥೆ: ಸತ್ತ ಗುರುವಿನ ಬಗ್ಗೆ ಶಿಷ್ಯರ ಗಾಸಿಪ್ಝೆನ್ ಕಥೆ: ಸತ್ತ ಗುರುವಿನ ಬಗ್ಗೆ ಶಿಷ್ಯರ ಗಾಸಿಪ್

ಮುದುಕ ಮರುಮಾತನಾಡಲಿಲ್ಲ. ತಾನೂ ಒಂದೊಂದು ಮೀನನ್ನು ತೆಗೆದುಕೊಂಡು ಸಮುದ್ರಕ್ಕೆ ಎಸೆಯಲು ಪ್ರಾರಂಭಿಸಿದ.

English summary
Zen Story of the day: A girl was throwing fishes back to sea to save them, which were came to shore. An aged person asked why you are making useless attempt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X