ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಝೆನ್ ಕಥೆ: ದೇವರ ಬಗ್ಗೆ ಗುರು ನೀಡಿದ ಮೂರು ಉತ್ತರ

|
Google Oneindia Kannada News

ಒಂದು ದಿನ ಬೆಳಿಗ್ಗೆ ಒಬ್ಬ ಶಿಷ್ಯ ಝೆನ್ ಗುರವನ್ನು ಕೇಳಿದ, "ಗುರುಗಳೇ ದೇವರಿದ್ದಾನೆಯೇ?"

"ಹೌದು ಇದ್ದಾನೆ" ಎಂದು ಗುರು ಉತ್ತರಿಸಿದ.

ಮಧ್ಯಾಹ್ನ ಭೋಜನದ ಬಳಿಕ ಮತ್ತೊಬ್ಬ ಶಿಷ್ಯ ಗುರುವಿಗೆ ಅದೇ ಪ್ರಶ್ನೆ ಕೇಳಿದ, "ಗುರುಗಳೇ ದೇವರಿದ್ದಾನೆಯೇ?"

ಝೆನ್ ಕಥೆ: ದೆವ್ವ ಓಡಿಸುವುದು ಹೇಗೆ?ಝೆನ್ ಕಥೆ: ದೆವ್ವ ಓಡಿಸುವುದು ಹೇಗೆ?

"ಇಲ್ಲ, ದೇವರಿಲ್ಲ" ಎಂದು ಹೇಳಿದ ಗುರು.

ಸಂಜೆ ವೇಳೆ ಇನ್ನೊಬ್ಬ ಶಿಷ್ಯ ಅದೇ ಪ್ರಶ್ನೆಯನ್ನು ಮುಂದಿಟ್ಟ, "ಗುರುಗಳೇ ದೇವರಿದ್ದಾನೆಯೇ?"

Zen Stories Is There A God Master Replied With Deferent Answers

"ಅದು ನೀನು ನಿರ್ಧರಿಸಬೇಕಾದ ವಿಷಯ" ಎಂದು ಗುರು ಉತ್ತರಿಸಿದ.

ಝೆನ್ ಕಥೆ: ಸ್ನಾನ ಮಾಡುವವನನ್ನೇ ಬದಲಾಯಿಸಿ ನೋಡುಝೆನ್ ಕಥೆ: ಸ್ನಾನ ಮಾಡುವವನನ್ನೇ ಬದಲಾಯಿಸಿ ನೋಡು

ಬೆಳಿಗ್ಗೆಯಿಂದ ಗುರುವಿನ ಮೂರೂ ಬಗೆಯ ಉತ್ತರಗಳನ್ನು ಗಮನಿಸಿ ಶಿಷ್ಯನೊಬ್ಬ ತುಸು ಕೋಪದಿಂದಲೇ ಕೇಳಿದ, "ಇದು ಎಂತಹ ಅಸಂಗತ ಸಂಗತಿ ಗುರುಗಳೇ? ಎಲ್ಲರೂ ಕೇಳಿದ ಒಂದೇ ಪ್ರಶ್ನೆಗೆ ಯಾಕೆ ಮೂರು ಬೇರೆ ಬೇರೆ ರೀತಿಯ ಉತ್ತರ ಕೊಟ್ಟಿರಿ?"

ಝೆನ್ ಕಥೆ: ಶಿಷ್ಯ ಮತ್ತು ಗುರುವಿನ ಕುರ್ಚಿಝೆನ್ ಕಥೆ: ಶಿಷ್ಯ ಮತ್ತು ಗುರುವಿನ ಕುರ್ಚಿ

ಅದಕ್ಕೆ ಗುರು ಪ್ರತಿಕ್ರಿಯಿಸಿದ, ''ಏಕೆಂದರೆ ಆ ಮೂವರೂ ಒಬ್ಬರಿಗಿಂತ ಒಬ್ಬರು ಭಿನ್ನ. ಮೊದಲನೆಯವ ನಾನು ಹೇಳಿದ್ದನ್ನು ನಂಬುತ್ತಾನೆ. ಎರಡನೆಯವ, ನಾನು ಹೇಳಿದ್ದು ಸುಳ್ಳು ಎನ್ನುವುದನ್ನು ಸಾಬೀತುಮಾಡಲು ಏನು ಬೇಕಾದರೂ ಮಾಡುತ್ತಾನೆ. ಮೂರನೆಯವ ತನಗೆ ದೊರಕಿರುವ ಆಯ್ಕೆಗಳ ಅಧಿಕಾರದ ಬಗ್ಗೆ ಮಾತ್ರ ನಂಬಿಕೆ ಇರಿಸಿಕೊಳ್ಳುತ್ತಾನೆ."

English summary
Zen Story of the day: Once Three students asked their master the same question, is there a god? Master replied with three deferent answers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X