• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಝೆನ್ ಕಥೆ: ದೆವ್ವ ಓಡಿಸುವುದು ಹೇಗೆ?

|

ಒಬ್ಬ ವ್ಯಕ್ತಿಯ ಪತ್ನಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಳು. ಮರಣಶಯ್ಯೆಯಲ್ಲಿದ್ದ ಆಕೆ, ಗಂಡನನ್ನು ಕರೆದು 'ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ಹೀಗಾಗಿ ನಿನ್ನನ್ನು ಬಿಡಲು ನನಗೆ ಇಷ್ಟವಿಲ್ಲ. ಹಾಗೆಯೇ ನೀನು ನನ್ನನ್ನು ವಂಚಿಸುವುದನ್ನೂ ಬಯಸುವುದಿಲ್ಲ. ನಾನು ಸತ್ತ ಬಳಿಕ ನೀನು ಬೇರೆ ಯಾವ ಮಹಿಳೆಯನ್ನೂ ನೋಡಬಾರದು. ಹಾಗೆ ಮಾಡಿದರೆ ನಾನು ದೆವ್ವವಾಗಿ ಬಂದು ನಿನ್ನನ್ನು ಕಾಡುತ್ತೇನೆ' ಎಂದಳು.

ಕೆಲವು ತಿಂಗಳ ಬಳಿಕ ಆಕೆ ಮೃತಪಟ್ಟಳು. ತನ್ನ ಬದುಕಿನಲ್ಲಿ ಬೇರೆ ಮಹಿಳೆ ಬಾರದಂತೆ ಆತ ಎಚ್ಚರಿಕೆ ವಹಿಸುತ್ತಿದ್ದ. ಆದರೆ ಒಮ್ಮೆ ಒಬ್ಬ ಮಹಿಳೆಯನ್ನು ಭೇಟಿಯಾದ, ಆಕೆಯೊಂದಿಗೆ ಪ್ರೀತಿಯಲ್ಲಿ ಬಿದ್ದ. ನಿಶ್ಚಿತಾರ್ಥವನ್ನೂ ಮಾಡಿಕೊಂಡರು. ಆ ದಿನ ರಾತ್ರಿ ಆತನ ಮಾಜಿ ಪತ್ನಿಯ ದೆವ್ವ ಆತನ ಎದುರು ಬಂತು. ಕೊಟ್ಟ ಮಾತು ಉಳಿಸಿಕೊಳ್ಳದಿದ್ದಕ್ಕೆ ಗಂಡನ ಮೇಲೆ ಕೋಪ ವ್ಯಕ್ತಪಡಿಸಿತು. ಒಂದು ದಿನವಲ್ಲ, ಪ್ರತಿ ದಿನವೂ ಆಕೆ ಬಂದು ಕಾಡತೊಡಗಿದಳು.

ಝೆನ್ ಕಥೆ: ಶಿಷ್ಯ ಮತ್ತು ಗುರುವಿನ ಕುರ್ಚಿ

ಅಷ್ಟೇ ಅಲ್ಲ, ಮಾಜಿ ಗಂಡ ಮತ್ತು ಆತನ ಸಂಗಾತಿಯಾಗುವವಳ ನಡುವಿನ ಪ್ರತಿ ಸಂಗತಿಯೂ ಆಕೆಗೆ ತಿಳಿಯುತ್ತಿತ್ತು. ಅವರ ಮಾತುಕತೆಯ ಒಂದೊಂದು ಪದವನ್ನೂ ಯಥಾವತ್ತಾಗಿ ರಾತ್ರಿ ಅವನ ಎದುರು ಹೇಳುತ್ತಿದ್ದಳು. ಇದು ಆತನಿಗೆ ಸಂಕಟ ತಂದೊಟ್ಟಿತು. ಮಾಜಿ ಪತ್ನಿಯ ದೆವ್ವದ ಅವತಾರದಿಂದ ನೊಂದು ನಿದ್ರೆಯೂ ಮಾಡದಂತಾದ.

ಸಾಕಷ್ಟು ಅನುಭವಿಸಿದ ಬಳಿಕ ಇದಕ್ಕೆ ಅಂತ್ಯ ಹಾಡಲೇಬೇಕು ಎಂದು ನಿರ್ಧರಿಸಿ ಸಮೀಪದ ಹಳ್ಳಿಯೊಂದರಲ್ಲಿ ವಾಸಿಸುತ್ತಿದ್ದ ಝೆನ್ ಗುರುವಿನ ಬಳಿ ಹೋದ. ಆತನ ಕಥೆ ಕೇಳಿ, 'ಇದು ಬಹಳ ಬುದ್ಧಿವಂತ ದೆವ್ವ' ಎಂದ ಝೆನ್ ಮಾಸ್ಟರ್. 'ಹೌದು ಖಂಡಿತವಾಗಿ' ಎಂದ ಮಾಜಿ ಹೆಂಡತಿಯ ಬುದ್ಧಿ ತಿಳಿದಿದ್ದ ವ್ಯಕ್ತಿ. 'ಆಕೆ ನಾನು ಏನು ಮಾತನಾಡುತ್ತಿದ್ದೇನೆ, ಏನು ಮಾಡುತ್ತಿದ್ದೇನೆ ಎಂಬ ಪ್ರತಿ ವಿಚಾರವೂ ಅವಳಿಗೆ ನೆನಪಿರುತ್ತದೆ. ಅದಕ್ಕೆ ಎಲ್ಲವೂ ಗೊತ್ತು' ಎಂದ.

ಝೆನ್ ಕಥೆ: ಸ್ನಾನ ಮಾಡುವವನನ್ನೇ ಬದಲಾಯಿಸಿ ನೋಡು

'ಅಂತಹ ದೆವ್ವವನ್ನು ನೀನು ಹೊಗಳಲೇಬೇಕು. ಆದರೆ ಮುಂದಿನ ಬಾರಿ ದೆವ್ವ ನಿನ್ನ ಕಣ್ಣಮುಂದೆ ಬಂದಾಗ ನೀನು ಏನು ಮಾಡಬೇಕು ಎಂಬುದನ್ನು ಹೇಳುತ್ತೇನೆ' ಎಂದು ಸಲಹೆ ನೀಡಿದ.

ಎಂದಿನಂತೆ ಆ ರಾತ್ರಿಯೂ ದೆವ್ವ 'ಗಂಡ'ನನ್ನು ತರಾಟೆಗೆ ತೆಗೆದುಕೊಳ್ಳಲು ಬಂತು. ಈ ಬಾರಿ ಆತ ಮಾಸ್ಟರ್ ನೀಡಿದ್ದ ಸಲಹೆಯಂತೆ ಪ್ರತಿಕ್ರಿಯಿಸಿದ. 'ನೀನು ಬಹಳ ಬುದ್ಧಿವಂತ ದೆವ್ವ. ನಾನು ಏನನ್ನೂ ನಿನ್ನಿಂದ ಬಚ್ಚಿಡಲು ಸಾಧ್ಯವೇ ಇಲ್ಲ ಎಂಬುದು ನಿನಗೆ ಗೊತ್ತಿದೆ. ಆದರೆ ನೀನು ನನ್ನ ಒಂದು ಪ್ರಶ್ನೆಗೆ ಉತ್ತರಿಸಿದರೆ ನಾನು ನನ್ನ ನಿಶ್ಚಿತಾರ್ಥವನ್ನು ಮುರಿದುಕೊಂಡು ಜೀವನಪೂರ್ತಿ ಒಂಟಿಯಾಗಿ ಉಳಿದುಬಿಡುತ್ತೇನೆ' ಎಂದ.

'ಏನದು ನಿನ್ನ ಪ್ರಶ್ನೆ? ಕೇಳು' ಎಂದು ದೆವ್ವ ನುಡಿಯಿತು.

ವ್ಯಕ್ತಿ ಅಲ್ಲಿಯೇ ನೆಲದ ಮೇಲಿದ್ದ ದೊಡ್ಡ ಚೀಲದಿಂದ ಬೊಗಸೆಯಲ್ಲಿ ಕಾಳುಗಳನ್ನು ತೆಗೆದ. 'ನನ್ನ ಬೊಗಸೆಯಲ್ಲಿ ಸರಿಯಾಗಿ ಎಷ್ಟು ಕಾಳುಗಳಿವೆ ಎಂದು ಹೇಳು ನೋಡೋಣ' ಎಂದು ಸವಾಲು ಹಾಕಿದ.

ಆಗ ಉತ್ತರ ನೀಡಲಾಗದೆ ಅಲ್ಲಿಂದ ಹೋದ ದೆವ್ವ ಮತ್ತೆ ಬರಲಿಲ್ಲ.

ಸವಾಲಗಳು ದೆವ್ವದಂತೆ. ನಾವಾಗಿಯೇ ಅದನ್ನು ಪ್ರತಿದಿನ ನೋಡುವಂತೆ ಮಾಡುತ್ತೇವೆ. ಯಾವಾಗ ನಾವು ಸವಾಲಿಗೆ ಪ್ರತಿ ಸವಾಲು ಹಾಕುತ್ತೇವೆಯೋ ಅದು ನಮ್ಮೆದುರಿಂದ ದೂರವಾಗುತ್ತದೆ.

(ಸಂಗ್ರಹ)

English summary
Zen Story of the day: A man's wife become ghost after she died and appear before him as he got engaged with another woman. She taunted him for betraying her. Man wanted to banish her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X