ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಝೆನ್ ಕಥೆ: ಸತ್ತ ಗುರು ಎದ್ದು ಕುಳಿತಾಗ

|
Google Oneindia Kannada News

ಒಬ್ಬ ಝೆನ್ ಸನ್ಯಾಸಿ ತನ್ನ ಕೊನೆಯ ಮಾತುಗಳನ್ನ ಬರಹದ ರೂಪದಲ್ಲಿ ಉಳಿಸದೆ ನಿಧನ ಹೊಂದಿದ. ಆತನ ಸಾವಿನ ದುಃಖದಲ್ಲಿದ್ದ ಶಿಷ್ಯರಿಗೆ ಗುರುವಿನ ಕೊನೆಯ ಮಾತುಗಳ ಬಗ್ಗೆ ನೆನಪೇ ಆಗಲಿಲ್ಲ.

ಗುರುವಿನ ಮೃತದೇಹವನ್ನು ಆಶ್ರಮದಿಂದ ಹೊರಕ್ಕೆ ತಂದ ಶಿಷ್ಯರು, ಆತನ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಗುರು ಕಣ್ಣು ತೆರೆದ.

ಝೆನ್ ಕಥೆ: ದೆವ್ವ ಓಡಿಸುವುದು ಹೇಗೆ?ಝೆನ್ ಕಥೆ: ದೆವ್ವ ಓಡಿಸುವುದು ಹೇಗೆ?

'ನೀವೇನು ಮರೆತೇ ಹೋಗಿದ್ದೀರಲ್ಲ? ತನ್ನ ಕೊನೆಯ ಸಂದೇಶವನ್ನು ಜಗತ್ತಿಗೆ ಹೇಳದೆಯೇ ಸತ್ತುಹೋದನೆಂದು ಮುಂದಿನ ಪೀಳಿಗೆಯವರು ನನ್ನ ಬಗ್ಗೆ ಆಕ್ಷೇಪ ಎತ್ತಬಾರದು. ಹೋಗಿ ಕೂಡಲೇ ಪುಸ್ತಕ ತನ್ನಿ' ಎಂದ.

Zen Stories Died Masters Lost Message

ಒಳಗೆ ಓಡಿದ ಶಿಷ್ಯರು ತಂದ ಪುಸ್ತಕದಲ್ಲಿ ಒಂದು ಸಣ್ಣ ಸಾಲು ಬರೆದು ತನ್ನ ಸಹಿ ಹಾಕಿದ ಗುರು ಮತ್ತೆ ಕಣ್ಮುಚ್ಚಿದ.

ಝೆನ್ ಕಥೆ: ಶಿಷ್ಯ ಮತ್ತು ಗುರುವಿನ ಕುರ್ಚಿಝೆನ್ ಕಥೆ: ಶಿಷ್ಯ ಮತ್ತು ಗುರುವಿನ ಕುರ್ಚಿ

ಒಮ್ಮೆ ಸತ್ತಿದ್ದ ಗುರು ಇದ್ದಕ್ಕಿದ್ದಂತೆ ಎದ್ದು ಕುಳಿತಿದ್ದನಲ್ಲ. ಹೀಗಾಗಿ ಈ ಬಾರಿ ಶಿಷ್ಯರು ಆತನ ಮೃತದೇಹವನ್ನು ಮತ್ತೆ ಮತ್ತೆ ಪರೀಕ್ಷಿಸಿದರು. ಆತನ ನಾಡಿಮಿಡಿತ, ಉಸಿರಾಟ ಎಲ್ಲವನ್ನೂ ತಪಾಸಣೆ ಮಾಡಿದರು. ದೇಹವನ್ನು ಅಲ್ಲಾಡಿಸಿದರು. ಊಹೂಂ. ಆತ ಬದುಕಿರುವ ಯಾವ ಲಕ್ಷಣವೂ ಕಾಣಿಸಲಿಲ್ಲ. 'ಈಗ ನಿಜಕ್ಕೂ ಗುರು ತೀರಿಕೊಂಡಿರುವುದು ಹೌದು' ಎಂದು ಶಿಷ್ಯರು ಮಾತಾಡಿಕೊಂಡರು.

ಝೆನ್ ಕಥೆ: ಸ್ನಾನ ಮಾಡುವವನನ್ನೇ ಬದಲಾಯಿಸಿ ನೋಡುಝೆನ್ ಕಥೆ: ಸ್ನಾನ ಮಾಡುವವನನ್ನೇ ಬದಲಾಯಿಸಿ ನೋಡು

ಆದರೆ ಆಗ ಗುರು ಜೋರಾಗಿ ನಕ್ಕ. 'ಈಗ ನಾನು ನಿಜವಾಗಿಯೂ ಸಾಯುತ್ತಿದ್ದೇನೆ. ನನ್ನನ್ನು ಮತ್ತೆ ಪರೀಕ್ಷಿಸುವ ಗೋಜಿಗೆ ಹೋಗಬೇಡಿ. ಆಗ ನೀವು ಪರೀಕ್ಷಿಸುತ್ತಿದ್ದಾಗ ನಾನು ಸುಮ್ಮನೆ ಕಾದು ಮಲಗಿದ್ದೆ. ನಗುವೇ ನನ್ನ ಕೊನೆಯ ಸಂದೇಶ. ಅದನ್ನು ಬರೆದುಕೊಳ್ಳಿ' ಎಂದು ನಿಜಕ್ಕೂ ಸತ್ತುಹೋದ.

(ಸಂಗ್ರಹ)

English summary
Zen Story of the day: A master died. But he has not wrote his final message. He suddenly woke up while his students preparing for his final rituals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X