ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಝೆನ್ ಕಥೆ: ಬೆಕ್ಕಿನ ಹಸಿವು ಮತ್ತು ಇಲಿಯ ಜೀವ ಭೀತಿ

|
Google Oneindia Kannada News

ಝೆನ್ ಮಾಸ್ಟರ್ ಬಾಂಕಿ ಆಶ್ರಮದಲ್ಲಿ ಒಂದು ಬೆಕ್ಕು ಸಾಕಿದ್ದ. ಒಂದು ದಿನ ಆಶ್ರಮದಲ್ಲಿ ಯಾರೂ ಇರಲಿಲ್ಲ. ಹೊಟ್ಟೆಗೆ ಏನೂ ಸಿಗದೆ ಬೆಕ್ಕಿಗೆ ಅತೀವ ಹಸಿವಾಯಿತು. ಮನೆಯೆಲ್ಲ ಹುಡುಕಾಡಿದ ಬೆಕ್ಕಿಗೆ ತಿನ್ನಲು ಏನೂ ಕಾಣಿಸಲಿಲ್ಲ. ಕೊನೆಗೆ ಮನೆಯ ಅಂಗಳದಲ್ಲಿ ಒಂದು ಇಲಿ ಕಾಣಿಸಿತು. ಕೂಡಲೇ ಅದನ್ನು ಹಿಡಿದು ಹೊಟ್ಟೆ ತುಂಬಿಸಿಕೊಳ್ಳುವ ಸಲುವಾಗಿ ಅದರ ಬೆನ್ನಟ್ಟಿತು.

ಆದರೆ ಬೆಕ್ಕು ಎಷ್ಟು ವೇಗವಾಗಿ ಓಡಿದರೂ ಇಲಿ ಅದರ ಬಾಯಿಗೆ ಸಿಗಲೇ ಇಲ್ಲ. ಗಂಟೆಗಳ ಕಾಲ ಅದರ ಹಿಂದೆ ಓಡಿತು ಕೊನೆಗೆ ಹೈರಾಣಾಗಿ ತನ್ನಿಂದ ಸಾಧ್ಯವಿಲ್ಲ ಎಂದು ಆಶ್ರಮಕ್ಕೆ ಮರಳಿತು. ಸಂಜೆ ಮಾಸ್ಟರ್ ಬಾಂಕಿ ಆಶ್ರಮಕ್ಕೆ ವಾಪಸ್ ಬಂದಾಗ ಬೆಕ್ಕು ಅವರ ಬಳಿ ತನ್ನ ಬೇಸರವನ್ನು ಹೇಳಿಕೊಂಡಿತು.

ಝೆನ್ ಕಥೆ: ದೆವ್ವ ಓಡಿಸುವುದು ಹೇಗೆ?ಝೆನ್ ಕಥೆ: ದೆವ್ವ ಓಡಿಸುವುದು ಹೇಗೆ?

'ಮಾಸ್ಟರ್ ನಾನು ಇಷ್ಟೊಂದು ದೊಡ್ಡ ಪ್ರಾಣಿ. ನನ್ನ ಸ್ನಾಯುಗಳು ಇಲಿಗಿಂತಲೂ ಬಲಿಷ್ಠವಾಗಿವೆ. ಆದರೆ ಇಲಿ ನನ್ನ ಕೈಗೆ ಸಿಗಲಿಲ್ಲ. ನನಗಿಂತಲೂ ವೇಗವಾಗಿ ಅದು ಓಡಿ ಹೋಯಿತು. ಇದು ಹೇಗೆ ಸಾಧ್ಯ?' ಎಂದು ಕೇಳಿತು.

Zen Stories Cats Hunger And Mouse Run For Life

ಝೆನ್ ಕಥೆ: ಸ್ನಾನ ಮಾಡುವವನನ್ನೇ ಬದಲಾಯಿಸಿ ನೋಡುಝೆನ್ ಕಥೆ: ಸ್ನಾನ ಮಾಡುವವನನ್ನೇ ಬದಲಾಯಿಸಿ ನೋಡು

'ಹೌದು. ನೀನು ಇಲಿಗಿಂತ ಎಲ್ಲ ರೀತಿಯಲ್ಲಿ ಬಹಳ ಶಕ್ತಿಶಾಲಿ ಪ್ರಾಣಿ. ಆದರೆ ನೀನು ಒಂದು ವಿಚಾರವನ್ನು ಮರೆತಿದ್ದೀಯ. ನೀನು ಹೊಟ್ಟೆಯನ್ನು ತುಂಬಿಸಿಕೊಳ್ಳಲು ಊಟಕ್ಕಾಗಿ ಓಡುತ್ತಿದ್ದೆ. ಆದರೆ ಆ ಇಲಿ ತನ್ನ ಜೀವ ಉಳಿಸಿಕೊಳ್ಳಲು ಓಡುತ್ತಿತ್ತು' ಎಂದು ಹೇಳಿದ ಬಾಂಕಿ.

(ಸಂಗ್ರಹ)

English summary
Zen Story of the day: Master Bankei had a pet cat. Once there was no one in house. The hungry cat tried to catch a rat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X