ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಥೆ : ಟಪ್ ಟಪ್ ಬುದ್ಧಿಸ್ಟ್ ಸೆಂಟರ್ (ಭಾಗ 3)

By ಮಾಧವ ವೆಂಕಟೇಶ್
|
Google Oneindia Kannada News

(ಕಥೆಯ ಮುಂದಿನ ಭಾಗ) ಕಾಲೇಜು ವಾತಾವರಣದಲ್ಲಿ ಆಶಾವಾದದ ಗಾಳಿ ಬೀಸುತ್ತಿದೆ. ಎಲ್ಲೆಲ್ಲೂ ವಿದ್ಯಾರ್ಥಿಗಳ ನಗು ಮುಖಗಳು! ಬಿಇ ಪದವಿಯ ಕೊನೆಯ ಪರೀಕ್ಷೆ ಮುಗಿದಿರುವ ಸಲುವಾಗಿ ಹುಡುಗ-ಹುಡುಗಿಯರೆಲ್ಲಾ ಸಂಭ್ರಮದಿಂದ ಹೋಳಿ ಆಟವಾಡುತ್ತಿದ್ದಾರೆ. ಮೈತುಂಬ ಬಣ್ಣ ಮೆತ್ತಿಕೊಂಡ ಒಬ್ಬ ಹುಡುಗನನ್ನು ಕರ್ಣ ಗುಪ್ತವಾಗಿ ಹಿಂಬಾಲಿಸುತ್ತಿದ್ದಾನೆ. ಆ ಹುಡುಗ, ಹಂಸಿನಿ ಎಕ್ಸಾಮ್ ಮುಗಿಸಿ ಗೆಳತಿಯರೊಂದಿಗೆ ನಿಂತಿರುವ ಕಡೆ, ಬಣ್ಣ ಹಿಡಿದು ನಡೆಯುತ್ತಿದ್ದಾನೆ.

ಹಂಸಿನಿ ಹತ್ತಿರ ಆ ಹುಡುಗ ಹೋಗುವ ಮೊದಲೇ ಕರ್ಣ ಅವನನ್ನು ತಡೆಹಿಡಿದು, ಶರ್ಟ್ ಪಟ್ಟಿ ಎಳೆದು, "ಏಯ್! ಏನ್ ಮಾಡ್ತಿದ್ಯ?" ಎಂದು ಗದರಿಸಿದ. ಹುಡುಗ, "ಅಣ್ಣಾ, ಅದು ಎಕ್ಸಾಮ್ ಮುಗಿತ್ತಲ್ಲಾ... ಅದಕ್ಕೆ ಹೋಲಿ..." ಎಂದು ತಡವರಿಸಿದ. "ಅಯ್ಯೋ ಮುಂಡೇದೆ! ನೀ ಜೂನಿಯರ್ ಅಲ್ವಾ? ನಿಂಗೇನ್ ಹೋಲಿ?" ಹುಡುಗ ಹೆದರಿಕೊಂಡು ಸುಮ್ಮನಿದ್ದ. "ಹುಡ್ಗೀರ್ ಹತ್ರ ಹೋಲಿ ಗೀಲಿ ಅಂತ ಹೋದ್ರೆ ತಲೆ ಹೋಳ್ ಮಾಡ್ಹಾಕ್ಬಿಡ್ತೀನಿ... ಬರ್ತದ್ ಬಾಯ್ಗೆ. ತೊಲ್ಗು!", ಕರ್ಣ ಸಿಡುಕಿ ಹುಡುಗನನ್ನು ಪಕ್ಕದಲ್ಲೇ ನಿಂತಿದ್ದ ಪಮ್ಮಿಯ ಕಡೆ ತಳ್ಳಿದ. ಪಮ್ಮಿ, "ಬಾ ಪುಟ್ಟಾ" ಎಂದು ಹುಡುಗನ ಕತ್ತುಪಟ್ಟಿಯನ್ನು ಹಿಡಿದು, ಕರ್ಣನ ಕಡೆ ನೋಡಿ, "ಬೆಸ್ಟ್ ಆಫ್ ಲಕ್" ಎಂಬಂತೆ ಥಂಬ್ಸ್ ಅಪ್ ಮಾಡಿದ. ಕರ್ಣ ತಲೆ ಆಡಿಸಿ ಹಂಸಿನಿಯ ಕಡೆ ತಿರುಗಿದ. ನಂತರ ಕಣ್ಣು ಮುಚ್ಚಿ, ದೇವರನ್ನು ನೆನೆಸಿಕೊಂಡು, ಪಿಜೆಗಳನ್ನು ಹೇಳಿಕೊಂಡು ಕಿಲಿಕಿಲಿ ನಗುತ್ತಿದ್ದ ಹುಡುಗಿಯರ ಗೊಂಚಲಿನ ಕಡೆ, ಧೈರ್ಯವಾಗಿ ನಡೆದ. ಅವನು ಹತ್ತಿರ ಬಂದಂತೆಯೇ ಹುಡುಗಿಯರೆಲ್ಲಾ ಸುಮ್ಮನ್ನಾದರು.

"Hello, excuse me. I would like to speak with Hamsini please", ಎಂದ ನಯದನಿಯಲ್ಲಿ ಕರ್ಣ.

Tup Tup Buddhist Center

"ಓ ಓ ಓ ಓ ಓ" ಹುಡುಗೀರೆಲ್ಲಾ ಅಯ್ಯಪ್ಪ ಸ್ವಾಮಿಯ ಉತ್ಸವ ಎಂಬಂತೆ ಒಂದೇ ದನಿಯಲ್ಲಿ ಕೂಗಿದರು.

"ಹೇಳು", ಹಂಸಿನಿ ಚೇಡಿಸುವಂತೆ ಕೇಳಿದಳು. ಕರ್ಣನ ಮುಖ ನಾಚಿಕೆಯಿಂದ ಟ್ರಾಫಿಕ್ ಸಿಗ್ನಲಿನಂತೆ ಕೆಂಪಾಯಿತು. "ಇಲ್ಲಲ್ಲ ಪ್ಲೀಸ್. ಪ್ರೈವೇಟ್ ಆಗಿ" ಎಂದು ಕೀರಲು ದನಿಯಲ್ಲಿ ಹೇಳಿದ. ಅಯ್ಯಪ್ಪ ಭಕ್ತರೆಲ್ಲಾ ಮತ್ತೊಮ್ಮೆ ಆಲಾಪನೆ ಹೊರಡಿಸಿದರು.

ಇಬ್ಬರೂ ಆಟದ ಮೈದಾನದ ಹತ್ತಿರ ಇದ್ದ ಒಂದು ಕಟ್ಟೆಯ ಮೇಲೆ ಕೂತರು. ಕರ್ಣ ಮೊದಲು ಮಾತನಾಡಿದ, "ಎಕ್ಸಾಮ್ ಹೇಗ್ ಮಾಡಿದ್ರಿ?"

"ಮಾಡಿದ್ರಿ? ವಾ ಏನ್ ರೆಸ್ಪೆಕ್ಟು!" ಎಂದು ಹಂಸಿನಿ ನಕ್ಕಳು. "ಚೆನ್ನಾಗ್ ಮಾಡ್ದೆ. ನಿಂಗೆ Accenture ಅಲ್ಲಿ ಕೆಲ್ಸ ಸಿಕ್ತಂತೆ? ಕಂಗ್ರಾಟ್ಸ್!".

ಕರ್ಣ ನಾಚಿಕೊಂಡು, "ಥ್ಯಾಂಕ್ಸ್. ನೀವು ಇನ್ಫೋಸಿಸ್ ಸೇರ್ಕೊತೀರಿ ಆಲ್ವಾ?"

"ಹೂಂ, ಇಲ್ಲೇ ಮೈಸೂರಲ್ಲಿ ಟ್ರೈನಿಂಗ್ ಇದೆ. ಮತ್ತೆ ಇನ್ನೇನ್ ವಿಷ್ಯಾ? ಏನ್ ನನ್ ಜೊತೆ ಪ್ರೈವೇಟ್ ಆಗಿ ಮಾತಾಡ್ಬೇಕು ಅಂದ್ಯಲ್ಲಾ" ರೇಗಿಸುವಂತೆ ಕೇಳಿದಳು.

"ನನ್ನ ಮದ್ವೆ ಆಗ್ತೀರ?" ಕರ್ಣ ನಿರ್ಭಾವವಾಗಿ ಕೇಳಿದ.

English summary
Karna was madly in love with most beautiful Hasmsini. One fine day he proposed her too. Did she accept his proposal? Did he get what he wanted? Who was that monk who changed the direction of Karna? Long story by Madhava Venkatesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X