• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾವಿರದ ಗಡಿ ದಾಟಿದ ಚಂದ್ರಮ ಅವರ 'ಪುಟ್ಕಥೆಗಳು'

By Prasad
|

ಮುಖಪುಟದಲ್ಲಿ ಕನ್ನಡದ ನೂರಾರು ಗ್ರೂಪುಗಳಿವೆ, ಪುಟಗಳಿವೆ. ಅವುಗಳಲ್ಲಿ ವಿಶೇಷವಾದ ಪುಟವೊಂದಿದೆ. ಅದುವೇ 'ಪುಟ್ಕಥೆಗಳು'. ಈ ಪುಟದಲ್ಲಿ ಒಂದೆರಡು ಸಾಲಿನಲ್ಲಿ ಕಥೆಗಳನ್ನು ಹೇಳುವ ಪ್ರಯತ್ನ ಮಾಡಲಾಗುತ್ತದೆ. ನಮ್ಮ ಇಂದಿನ ಗಡಿಬಿಡಿಯ ಜೀವನದಲ್ಲಿ ಇಂಥ ಕಥೆಗಳನ್ನು ಓದುವ ಜನರು ಹೆಚ್ಚಾಗಿದ್ದಾರೆ.

ಆರು ಸಾವಿರಕ್ಕೆ ಹತ್ತಿರ ಹಿಂಬಾಲಕರಿರುವ ಈ ಪುಟವನ್ನು ಪ್ರಾರಂಭಿಸಿದ್ದು ನಾಲ್ಕು ವರ್ಷಗಳ ಹಿಂದೆ. ನಾನು ಇಂಥ ಪುಟವೊಂದನ್ನು ಮುಖಪುಟದಲ್ಲಿ ಪ್ರಾರಂಭಿಸಬೇಕೆಂದು ಹೊಳೆದದ್ದು ಹೆಮಿಂಗ್ವೆ ಬರೆದ ಈ ಒಂದು ಸಾಲಿನ ಕಥೆ ಓದಿ.

ಅಹಂಕಾರದಿಂದ ಅವನತಿ ಹೊಂದಿದ ನಹುಷನ ಕಥೆ

For Sale: Baby Shoes. Never Worn

ಒಂದು ಸಾಲಿನ ಈ ಕಥೆಯಲ್ಲಿ ಒಂದು ಕಾದಂಬರಿಯನ್ನೆ ಬರೆಯುವಷ್ಟು ವಿಷಯವಿದೆ. ಇಂಥ ಕಥೆಗಳ ಬಗ್ಗೆ ಜಾಲತಾಣದಲ್ಲಿ ಇನ್ನಷ್ಟು ಹುಡುಕಿದಾಗ ಗೊತ್ತಾಗಿದ್ದು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಇಂಥ ಪ್ರಯತ್ನಗಳು ಜಾರಿಯಲ್ಲಿವೆ ಎಂದು. ಕನ್ನಡದಲ್ಲಿ ದೊರೆತದ್ದು ಕೆಲವೇ ಕೆಲವು. ನಾವು ಕೂಡ ಕನ್ನಡದಲ್ಲಿ ಇಂಥದೊಂದು ಪ್ರಯತ್ನ ಯಾಕೆ ಮಾಡಬಾರದೆಂದು ಈ ಪುಟವನ್ನು ಪ್ರಾರಂಭಿಸಿದೆ.

One thousand beautiful Kannada short stories by Chandrama

ಒಂದು ಪುಟ್ಕಥೆಯ ಸ್ಯಾಂಪಲ್ ಹೀಗಿದೆ : "ಹಾವು ಕಂಡೊಡನೆ ಕಲ್ಲಿನಿಂದ ಹೊಡೆದು ಕೊಂದುಹಾಕಿದ್ದ. ತನ್ನ ಪಾಪ ಕಳೆಯಲೆಂದು ಅದೇ ಕಲ್ಲಿನಲ್ಲಿ ನಾಗರಹಾವು ಕೆತ್ತಿಸಿ ಪ್ರತಿಷ್ಠಾಪಿಸಿದ."

ಮೊದಮೊದಲು ನಾನೊಬ್ಬನೆ ಬರೆಯಲು ಶುರುಮಾಡಿದೆ. ಕೆಲವೊಮ್ಮೆ ಬೇರೆ ಭಾಷೆಗಳಿಂದ ಕಡ ತಂದಿದ್ದು ಇದೆ. ಆಮೇಲೆ ಹಲವು ಗೆಳೆಯರು, ಲೇಖಕ-ಲೇಖಕಿಯರು ಜೊತೆಯಾದರು. ಇವರೆಲ್ಲರ ಸಹಾಯ ಸಹಕಾರದಿಂದ ಈಗ ಸಾವಿರದ ಗಡಿಯನ್ನು ದಾಟುತ್ತಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹ, ಸಹಕಾರವಿದ್ದರೆ ಇನ್ನೂ ಸಾವಿರ ಹೆಜ್ಜೆ ಮುಂದಿಡಬಹುದು.

ರಮೇಶ್ ಹೇಳಿದ ಪಾಳುಬಿದ್ದ ಇಟ್ಟಿಗೆ ಗೂಡಿನ ನಿಗೂಢ ಕಥೆ!

ಚಲನಚಿತ್ರ ನಿರ್ದೆಶಕರು, ಲೇಖಕರು ಮತ್ತು ಓದುಗರು ನಮ್ಮ ಈ ಕನ್ನಡಕ್ಕಾಗಿ ಕೈ ಎತ್ತುವ ಪುಟ್ಟ ಪ್ರಯತ್ನವನ್ನು ಮೆಚ್ಚಿ ಬೆನ್ನುತಟ್ಟಿ ಹರಸಿದ್ದಾರೆ. ನೀವು ಒಮ್ಮೆ ಭೇಟಿಕೊಡಿ.

ನೀವೂ ಓದಿ ನಿಮ್ಮ ಗೆಳೆಯರಿಗೂ ಹಂಚಿ. ಅವರೂ ಓದಲಿ, ಈ ಪುಟಕ್ಕೆ ಬರೆಯಲಿ ಹಾಗೇ ನೀವೂ ಕೂಡ ಬರೆಯಿರಿ.

ಪುಟ್ಕಥೆಗಳನ್ನು ಪುಸ್ತಕ ರೂಪದಲ್ಲಿ ತರುವ ಆಸೆ ಕನಸು ಹಾಗೆ ಇದೆ. ನೋಡೊಣ ಯಾರಾದರೂ ಪ್ರಕಾಶಕರು ಮುಂದೆ ಬಂದರೆ ಈ ಪುಟ್ಕಥೆಗಳನ್ನು ಪುಸ್ತಕ ರೂಪದಲ್ಲಿ ನಿಮ್ಮ ಕೈಲಿಡುತ್ತೆವೆ.

ನಿಮ್ಮವ

ಚಂದ್ರಮ

(ಚಂದ್ರಶೇಖರ ಮದಭಾವಿ)

English summary
One thousand beautiful Kannada short stories by Chandrashekhar Madabhavi (Chandrama) published in Facebook.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X