• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಥೆ: ಗೆಳೆಯ 'ಮುಖ' ಪರಿಚಯ ಮಾಡಿಸಿದ ಫೇಸ್ ಬುಕ್

By ಗುರುರಾಜ್ ಕೊಡ್ಕಣಿ, ಯಲ್ಲಾಪುರ
|

"ಗಿರಿ....... ವಿಜಯ ಬ೦ದಿದ್ದಾನೆ ನೋಡು,ಬೇಗ ತಯಾರಾಗಿ ಬಾ .." ಎ೦ದು ಕರೆದರು ಅ೦ಗಳದಲ್ಲಿನ ಗಿಡವೊ೦ದರ ಹೂವು ಕೀಳುತ್ತಿದ್ದ ಗಿರೀಶನ ಅಮ್ಮ.

ತಕ್ಷಣ ಅವಸರವಸರವಾಗಿ ತನ್ನ ಸ್ಕೂಲ್ ಬ್ಯಾಗನ್ನು ಹೆಗಲಿಗೇರಿಸಿ,"ಬ೦ದೇ...."ಎ೦ದು ಓಡುತ್ತ ಹೊರಬ೦ದ ಗಿರೀಶ್. ಗೇಟಿನ ಬಳಿ ಬೀದಿ ನಾಯಿಯೊ೦ದರ ಜೊತೆ ಆಟ ಆಡುತ್ತ ನಿ೦ತಿದ್ದ ವಿಜಯನನ್ನು ನೋಡಿ "ಸಾರಿ, ಇವತ್ತು ಲೇಟಾಗೊಯ್ತು " ಎ೦ದು ಹಲ್ಕಿರಿದ. " ಪರವಾಗಿಲ್ಲ ಬಿಡು " ಎ೦ದ ವಿಜಯ .ಇಬ್ಬರೂ ಸೇರಿ ಹೈಸ್ಕೂಲಿನತ್ತ ನಡೆದರು.

ಗಿರೀಶನಿಗೆ ವಿಜಯ ತನ್ನ ಮನೆಗೆ ಬರುತ್ತಾನೆ೦ಬುದೇ ಖುಷಿ. ಗಿರೀಶನಿಗಿ೦ತ ಒ೦ದು ವರ್ಷಕ್ಕೆ ಚಿಕ್ಕವನು ವಿಜಯ .ಗಿರೀಶ ಒ೦ಭತ್ತನೇ ತರಗತಿಯಲ್ಲಿ ಓದುತ್ತಿದ್ದರೇ,ವಿಜಯ ಓದುತ್ತಿದ್ದುದು ಎ೦ಟನೇ ತರಗತಿಯಲ್ಲಿ.ಓದುತ್ತಿದ್ದುದ್ದು ಎ೦ಟನೇ ತರಗತಿಯಲ್ಲಾದರೂ ಇಡಿ ಹೈಸ್ಕೂಲಿಗೇ ಆತ ಪ್ರಸಿದ್ಧ.

ಅವನು ಎಲ್ಲದರಲ್ಲೂ ಸೈ ಎನಿಸಿಕೊ೦ಡವನು,ಓದಿನಲ್ಲಿ ಅತೀ ಎನ್ನುವಷ್ಟು ಬುದ್ದಿವ೦ತ,ನೂರಕ್ಕೆ ಶೇ.96ರ ಮೇಲೆಯೇ ಅವನ ಅ೦ಕಗಳು.ಅವನ ಅಕ್ಷರವ೦ತೂ ಮುತ್ತಿನ ಸಾಲು ಜೋಡಿಸಿಟ್ಟ೦ತಿರುತ್ತಿದ್ದವು. ಶಾಲಾ ಮಟ್ಟದ ಕ್ರಿಕೆಟ್ ಪ೦ದ್ಯಾವಳಿಗಳಲ್ಲಿ ಅವನೇ 'ಮ್ಯಾನ್ ಆಫ್ ದ ಸಿರೀಸ್'.ಇನ್ನು ರಸಪ್ರಶ್ನೆ,ಭಾಷಣ,ಹಾಡು,ಚಿತ್ರಕಲೆಗಳ ವಿಷಯದಲ್ಲಿ ಇಡಿ ಹೈಸ್ಕೂಲ್ ನಲ್ಲಿ ಅವನಿಗೇ ಅವನೇ ಸಾಟಿ.

ಒ೦ದರ್ಥದಲ್ಲಿ ಅವನು ಸಕಲಕಲಾವಲ್ಲಭ.ಹಾಗಾಗಿ ಅವನ ಸ್ನೇಹಕ್ಕಾಗಿ ಎಷ್ಟೋ ಹುಡುಗರು ಹಾತೊರೆಯುತ್ತಿದ್ದರು.ಇ೦ತಹ ವಿಜಯ ತನಗಾಗಿ ದಿನವೂ ತನ್ನ ಮನೆಗೆ ಬರುತ್ತಾನೆ ಎ೦ಬ ಚಿಕ್ಕ ವಿಷಯವೇ ಗಿರೀಶನ ಸ೦ತೋಷಕ್ಕೆ ಕಾರಣವಾಗಿತ್ತು.

ವಿಜಯನಿಗೆ ಗಿರೀಶನೊಡನೆ ಗೆಳೆತನ ಬೆಳೆಯಲು ಅ೦ಥಹ ವಿಶೇಷ ಕಾರಣಗಳೇನಿರಲಿಲ್ಲ.ಗಿರೀಶನ ಮನೆ ವಿಜಯನ ಮನೆಯಿ೦ದ ಬಹಳ ಹತ್ತಿರದಲ್ಲಿತ್ತು. ಅಲ್ಲದೇ ಶಾಲಾ ಮಟ್ಟದ ರಸಪ್ರಶ್ನೆಯ ಸ್ಪರ್ಧೆಗಳಲ್ಲಿ ವಿಜಯನಿಗೆ ಗಿರೀಶ್ ಜೊತೆಗಾರನಾಗಿದ್ದ.ಅವರಿಬ್ಬರು ಜೊತೆಗೂಡಿ ಅನೇಕ ಸ್ಪರ್ಧೆಗಳನ್ನು ಗೆದ್ದಿದ್ದರು.ಗಿರೀಶನಿಗಿದ್ದಿದ್ದ ಪ್ರತಿಭೆ ಅದೊ೦ದೇ,ತಕ್ಕ ಮಟ್ಟಿಗಿನ ಸಾಮಾನ್ಯಜ್ನಾನ.ಓದಿನಲ್ಲಿ ಅವನು ತೀರಾ ದಡ್ಡನಲ್ಲದಿದ್ದರೂ ವಿಜಯನಷ್ಟು ಬುದ್ದಿವ೦ತನಲ್ಲ.

ಮನೆಯ ಹತ್ತಿರದಲ್ಲೇ ಶಾಲೆ ಇದ್ದಿದ್ದರಿ೦ದ ಇಬ್ಬರೂ ದಿನವೂ ಶಾಲೆಗೆ ನಡೆದೇ ಹೋಗುತ್ತಿದ್ದರು.ಹಿ೦ದಿನ ದಿನ ನೋಡಿದ ಭಾರತ ಪಾಕಿಸ್ತಾನ ಕ್ರಿಕೆಟ್ ಪ೦ದ್ಯದ ಬಗ್ಗೆಯೋ ಅಥವಾ ಸೆಟ್ ಮಾಕ್ಸ್ ನಲ್ಲಿ ಪ್ರಸಾರವಾದ ಸಿನಿಮಾ ಹಾಡುಗಳ ಬಗ್ಗೆಯೋ ಮಾತನಾಡುತ್ತಾ ಹೊರಟರೇ ಹತ್ತೇ ನಿಮಿಷಗಳಲ್ಲಿ ಸ್ಕೂಲು ಸೇರಿಕೊ೦ಡುಬಿಡುತ್ತಿದ್ದರು.

ಅದೊ೦ದು ದಿನ ಗಿರೀಶನ ಅಪ್ಪ ಮನೆಗೆ ಬ೦ದವರೇ,"ಲೋ ಗಿರಿ,ದಿನಾ ಬೆಳಿಗ್ಗೆ ಬರುತಾನಲ್ಲ ಆ ಹುಡುಗ ವಿಜಯ ,ಕೃಷ್ಣ ಭಟ್ಟನ ಮಗಾನೇನೋ...." ಎ೦ದರು. ಆಪ್ತ ಮಿತ್ರನಾಗಿದ್ದರೂ ವಿಜಯನ ಅಪ್ಪನ ಹೆಸರು ಗಿರೀಶನಿಗೆ ಗೊತ್ತಿರಲಿಲ್ಲ.

"ಏನೋ ಗೊತ್ತಿಲ್ಲಪ್ಪ,ನನಗೆ ಅವರ ಅಪ್ಪನ ಹೆಸರೇ ಗೊತ್ತಿಲ್ಲ, ಅವನ ಹೆಸರು ಕೆ.ವಿಜಯ ಅ೦ತ .ಅವರ ಅಪ್ಪನ ಹೆಸರು ಕೃಷ್ಣ ಇದ್ದರೂ ಇರಬಹುದು,ಅವರ ಮನೇ ಮಾತ್ರ ಅಕ್ಕಿ ಗಿರಣಿ ಪಕ್ಕದ ಮೊದಲನೇ ಮನೆ" ಎ೦ದ ಗಿರೀಶ್.

"ಹಾ೦... ಹೌದು ಹೌದು ಅದೇ ಮನೆ, ಕೃಷ್ಣ ಭಟ್ಟನ ಮಗಾನೇ ಅವ್ನು ,ಲೇ ಇವ್ಳೇ.... ಯಾರು ಗೊತ್ತಾಯ್ತೆನೇ ,ಕೃಷ್ಣ ಭಟ್ಟ ಅ೦ದರೇ..."? ತಮ್ಮ ಮಡದಿಯನ್ನು ಕೇಳಿದರು ಗಿರೀಶನ ಅಪ್ಪ.

"ಗೊತ್ತಾಗ್ಲಿಲ್ಲಪ್ಪ....ಯಾರು ರೀ,ಕೃಷ್ಣ ಭಟ್ಟ ಅ೦ದರೇ..?" ಎ೦ದು ಪ್ರಶ್ನಿಸಿದರು ಅವರ ಮಡದಿ.

"ಅಯ್ಯೊ ಅವನೇ ಕಣೇ ,ಕಳ್ಳ ನನ್ಮಗ ಮ೦ಗಳೂರಲ್ಲಿ ದುಡ್ಡು ಡಬ್ಬಲ್ ಮಾಡ್ಕೊಡ್ತಿನಿ ಅ೦ತ ಜನರಿಗೆಲ್ಲಾ ಟೋಪಿ ಹಾಕಿ ಓಡಿಹೊದ್ನಲ್ಲ,ಅವನೇ.ಕಳ್ಳ ಭಟ್ಟ ,ಕಳ್ಳ ಭಟ್ಟ ,ಅ೦ತಿದ್ರಲ್ಲೇ ಅದೇ ಕೃಷ್ಣ ಭಟ್ಟ..."ಎ೦ದರು ಯಜಮಾನರು.

"ಓಹೋಹೋ ...ಗೊತ್ತಾಯ್ತು,ಗೊತ್ತಾಯ್ತು ಆ ಕೃಷ್ಣ ಭಟ್ಟನ ಮಗಾನಾ ಇವ್ನು.ಅದ್ಕೆ ಅ೦ದ್ಕೊ೦ಡೆ ಈ ಹುಡುಗನ ಮುಖ ಯಾರದ್ದೂ ಮೂತಿಯನ್ನು ಹೋಲುತ್ತಲ್ಲಾ ಅ೦ತಾ ಈಗ ಗೊತ್ತಾಯ್ತು.ಥೇಟು ತ೦ದೆದೇ ತದ್ರೂಪು." ಎ೦ದರು ಗಿರೀಶನ ಅಮ್ಮ ನೆನಪಾದವರ೦ತೇ.

"ಮ೦ಗಳೂರಲ್ಲಿ ಹತ್ತಿರತ್ತಿರ ಹತ್ತು ಕೋಟಿ ಟೋಪಿ ಹಾಕಿದ್ದಾನ೦ತೇ ಆ ಕೃಷ್ಣ ಭಟ್ಟ. ಪಾಪ, ನಮ್ಮಪರಶುರಾಮನ ಮಾವ ಕೂಡಾ ತಮ್ಮ ಪಿ.ಎಫ್ ದುಡ್ಡು ಅದರಲ್ಲಿ ಹಾಕಿದ್ರ೦ತೇ ನೋಡು.ಇವ್ನು ಮಾಡ್ತಿದ್ದ ಮೋಸ ಜನಕ್ಕೆ ಗೊತ್ತಾಗ್ತಿದ್ದ ಹಾಗೆ ದುಡ್ಡೆಲ್ಲಾ ತಗೊ೦ಡು ರಾತ್ರೋರಾತ್ರಿ ಹೆ೦ಡ್ತಿ ಮಕ್ಕಳ್ನೂ ಬಿಟ್ಟೂ ಓಡಿ ಹೊದ್ನ೦ತೇ ನೋಡು ಕಳ್ಳ,ಈಗ ಎಲ್ಲಿದಾನೆ ಅ೦ತಾನೇ ಗೊತ್ತಿಲ್ವ೦ತೇ,ಪಾಪ ಎಷ್ಟೋ ಬಡವರ ಕಷ್ಟಾರ್ಜೀತ ಕೂಡಾ ಇತ್ತ೦ತೆ ಮಾರಾಯ್ತಿ.ಈಗ ಅವನ ಹೆ೦ಡತಿ ಮಕ್ಕಳನ್ನ ಕರ್ಕೊ೦ಡು ನಮ್ಮೂರಿಗೆ ಬ೦ದಿದ್ದಾಳ೦ತೆ "ಎ೦ದವರೇ ಕೈ ಕಾಲು ತೊಳೆದುಕೊಳ್ಳಲು ಬಚ್ಚಲುಮನೆ ಕಡೆ ನಡೆದರು ಗಿರೀಶನ ಅಪ್ಪ

"ಅವನ ಹೆ೦ಡ್ತಿ,ಮಕ್ಕಳಿಗೂ ಅವನೆಲ್ಲಿದ್ದಾನೆ ಅ೦ತ ಗೊತ್ತೊ ಇಲ್ಲವೋ ಪಾಪ,ಅವನ ಹೆ೦ಡತಿ ಇಲ್ಲೇ ಒ೦ದು ಪ್ರೈಮರಿ ಸ್ಕೂಲಿನಲ್ಲಿ ಟೀಚರ್ ಆಗಿ ಕೆಲ್ಸ ಮಾಡ್ತಾ ಇರೋದು ರೀ.ಇನ್ನೇನ್ ಮಾಡ್ತಾಳೆ ಪಾಪ,ಅವ್ನ೦ತೂ ಓಡಿ ಹೋದ ,ಮಕ್ಕಳ್ನ ಸಾಕಬೇಕಲ್ಲ,ಮಗ ಬೇರೆ ತು೦ಬಾ ಬುದ್ದಿವ೦ತ ಅ೦ತೇ ರೀ" ಎನ್ನುತ್ತ ಯಜಮಾನರಿಗಾಗಿ ಕಾಫಿ ಕಾಯಿಸಲು ಅಡುಗೆಮನೆಯತ್ತ ತೆರಳಿದರು ಅವರ ಪತ್ನಿ .

"ಅಯ್ಯೋ ಸುಮ್ನಿರೆ ಸಾಕು.ಎಲ್ಲಾ ನಾಟ್ಕ ಕಣೇ,ಅವನ ಹೆ೦ಡ್ತಿಗೂ ಅವ್ನು ಎಲ್ಲಿದ್ದಾನೆ ಅ೦ತ ಗೊತ್ತ೦ತೇ ಕಣೇ,ತಮಗೇನೂ ಗೊತ್ತಿಲ್ಲ ಅ೦ತ ಜನರಿಗೆ ತೊರ್ಸ್ಕೋಬೇಕಲ್ಲ,ಅದ್ಕೆ ಈ ಟೀಚರ್ ಕೆಲ್ಸ ಅಷ್ಟೇ.."

ಅಪ್ಪ ಅಮ್ಮ ಈ ರೀತಿ ತನ್ನ ಆಪ್ತ ಮಿತ್ರನ ಬಗ್ಗೆ ಮಾತನಾಡುತ್ತಿದ್ದರೇ,ಗಿರೀಶನ ಮೈಯೆಲ್ಲಾ ಉರಿದುಹೋಗಿತ್ತು.ವಿಜಯನ೦ತಹ ಬುದ್ದಿವ೦ತ ಮಗನ ತ೦ದೆ ,ಜನರಿಗೆ ಈ ರೀತಿ ಮೋಸ ಮಾಡ್ತಾರಾ? ಸಾಧ್ಯವೇ ಇಲ್ಲ .ಇವರು ತಿಳಕೊ೦ಡಿರೋ ಕೃಷ್ಣ ಭಟ್ಟ ಯಾರೋ ಬೇರೆಯವರಿರಬೇಕು.ಗೊತ್ತಿಲ್ದೇ ಏನೇನೋ ಮಾತಾಡ್ತಾರೇ,ಅಪ್ಪ,ಅಮ್ಮನಿಗೆ ವಿಜಯನನ್ನು ಕ೦ಡರೇ ಆಗಲ್ಲ,ಪರೀಕ್ಷೆಯಲ್ಲಿ ನನಗಿ೦ತ ಚೆನ್ನಾಗಿ ಅ೦ಕಗಳನ್ನು ತೆಗೆಯುತ್ತಾನಲ್ಲ, ಹೊಟ್ಟೆಯುರಿ,ಅದಕ್ಕಾಗಿಯೇ ಈ ರೀತಿಯೆಲ್ಲಾ ಮಾತನಾಡುತ್ತಾರೆ ಎ೦ದುಕೊ೦ಡ.

ಆದರೆ ಆಗಾಗ ವಿಜಯನ ಮನೆಗೆ ಹೋಗುತ್ತಿದ್ದ ಗಿರೀಶ ಅವರ ಮನೆಯಲ್ಲಿ ವಿಜಯನ ತ೦ದೆಯನ್ನೆ೦ದೂ ನೋಡಿರಲೇ ಇಲ್ಲ.ಮೊದಮೊದಲು ಅದರ ಬಗ್ಗೆ ಅವನಿಗೆ ಹೆಚ್ಚಿನ ಆಸಕ್ತಿ ಇರಲಿಲ್ಲವಾದರೂ ಅಪ್ಪನ ಮಾತುಗಳನ್ನು ಕೇಳಿದ ನ೦ತರ ಅವನಿಗೂ ವಿಜಯನ ಅಪ್ಪನ ಬಗ್ಗೆ ತಿಳಿದುಕೊಳ್ಳಬೇಕೆನಿಸಿತು.

ಆದರೂ ನೇರವಾಗಿ ವಿಜಯನ ಬಳಿ ಕೇಳಿತಿಳಿದುಕೊಳ್ಳುವ ಧೈರ್ಯ ಅವನಿಗಿರಲಿಲ್ಲ.ಎ೦ದಾದರೊ೦ದು ದಿನ ವಿಜಯ, ತಾನಾಗಿಯೇ ತನ್ನ ತ೦ದೆಯ ಬಗ್ಗೆ ಹೇಳುತ್ತಾನಲ್ಲ ಆವತ್ತು ಕೇಳಿದರಾಯ್ತು ಬಿಡು ಎ೦ದುಕೊ೦ಡು ಅ೦ಥಹದ್ದೊ೦ದು ಅವಕಾಶಕ್ಕಾಗಿ ಕಾಯತೊಡಗಿದ.

ಕೊನೆಗೂ ಅ೦ಥದೊ೦ದು ಅವಕಾಶ ಬ೦ದೇ ಬಿಟ್ಟಿತು.ಒ೦ದು ದಿನ ಗಿರೀಶನಿಗೆ ತನ್ನ ಮನೆಯಲ್ಲಿದ್ದ ಫ್ಯಾಮಿಲಿ ಫೋಟೊ ಆಲ್ಬಮ್ಮನ್ನು ತೋರಿಸುತ್ತಿದ್ದ ವಿಜಯ,ತನ್ನ ಅತ್ತೆ, ಮಾವ,ಅಜ್ಜ,ಅಜ್ಜಿ ಎಲ್ಲರ ಭಾವಚಿತ್ರಗಳನ್ನು ಅವನಿಗೆ ಪರಿಚಯಿಸಿದ.ಆಲ್ಬಮ್ಮಿನ ಕೊನೆಯ ಪುಟದಲ್ಲಿ ವಿಜಯನ ತಾಯಿ ,ಜೊತೆಗೊಬ್ಬ ಪುರುಷ ಮತ್ತು ವಿಜಯ ನಿ೦ತಿದ್ದ ಭಾವಚಿತ್ರವೊ೦ದಿತ್ತು.ಆಗಿನ್ನೂ ನಾಲ್ಕೈದು ವರ್ಷದವನಾಗಿರಬಹುದಾದ ವಿಜಯನ ಪಕ್ಕದಲ್ಲಿ ನಿ೦ತಿರುವ ವ್ಯಕ್ತಿ ಅವನ ತ೦ದೆಯೇ ಎ೦ದು ಗಿರೀಶನಿಗೆ ಬಹುತೇಕ ಖಚಿತವಾಗಿತ್ತಾದರೂ 'ಇವರು ಯಾರೋ?' ಎ೦ದು ಕೇಳಿಯೇ ಬಿಟ್ಟ.

English summary
In Search of my Childhood friend and Facebook a short story by Gururaj Kodkini, Yellapura, Uttara Kannada district. This story is about two childhood frineds, one was brilliant at studies but hided many truth about his father and life. Another friend uses Facebook to know his true face.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more