ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಶುಭಸಂಕಲ್ಪ' ಸಣ್ಣಕಥಾ ಸ್ಪರ್ಧೆ ಫಲಿತಾಂಶ ಪ್ರಕಟ

By Prasad
|
Google Oneindia Kannada News

Shubhasankalpa - short story contest results
ಆತ್ಮೀಯ ಓದುಗರೆ, ನಿಮ್ಮೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

ಕಥೆ ಬರೆಯುವುದು ಕೆಲವರಿಗೆ ಎಷ್ಟು ಸುಲಭವೋ, ಹೃದಯಕ್ಕೆ ಮುಟ್ಟುವಂತಹ, ಸ್ಫೂರ್ತಿಯ ಸೆಲೆಯುಕ್ಕಿಸುವಂತಹ, ಹಂಗಿಲ್ಲದ ನದಿಯ ನೀರಿನಂತೆ ಓದಿಸಿಕೊಂಡು ಹೋಗುವಂತಹ, ತೂಕಡಿಕೆಯನ್ನು ಒದ್ದೋಡಿಸುವಂತಹ, ಕನ್ನಡತನವನ್ನು ಬಡಿದೆಬ್ಬಿಸುವಂತಹ ಕಥೆಯನ್ನು ಹೆಣೆಯುವುದು ಬಲು ಕಷ್ಟದ ಕೆಲಸ. ಅನುಭವದ ಮೂಸೆಯಿಂದ ಬಂದರೆ ಮಾತ್ರ ಮನಕ್ಕೆ ತಟ್ಟುವಂತಹ ಸ್ಫೂರ್ತಿದಾಯಕ ಕಥೆ ಬರೆಯಲು ಸಾಧ್ಯ. ಇಂಥದೊಂದು ವಿಶಿಷ್ಟವಾದ ಪ್ರಯತ್ನ ಮತ್ತು ಪ್ರಯೋಗ ಇಲ್ಲಿದೆ.

"ಶುಭಸಂಕಲ್ಪ" ಅಂಕಣಕ್ಕೆ ನಿಮ್ಮಲ್ಲಿ, ನಿಮ್ಮ ಬದುಕಲ್ಲಿ ಸ್ಪೂರ್ತಿ ತುಂಬಿದ ಕಥೆಗಳನ್ನು ಮತ್ತು ಕನ್ನಡ ಭಾಷೆಯ ಬಗ್ಗೆ ಅಭಿಮಾನ ಉಕ್ಕಿಸಿದ ಕಥೆಗಳನ್ನು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಆಹ್ವಾನಿಸಿದ್ದೆವು. ಈ ಸ್ಪರ್ಧೆಯಲ್ಲಿ ಮೂವತ್ತಕ್ಕೂ ಹೆಚ್ಚು ಸೃಜನಶೀಲ ಕಥೆಗಾರರು ಸ್ಪಂದಿಸಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು. ತುಂಬಾ ಕುತೂಹಲದಿಂದ ಕೂಡಿದ ಉತ್ತಮ ಕಥೆಗಳನ್ನು ಓದುಗರು ಹಂಚಿಕೊಂಡಿದ್ದಾರೆ. ಅದರಲ್ಲಿ ಸ್ಪರ್ಧೆಯ ಆಶಯಕ್ಕೆ ಹತ್ತಿರವಾದ ಮೂರು ಕಥೆಗಳನ್ನು ಆರಿಸಿದ್ದೇವೆ. ವಿಜೇತರಿಗೆ ಅಭಿನಂದನೆಗಳು.

ಸ್ಪರ್ಧೆಯ ವಿಜೇತರು

* ಪ್ರದೀಪ್ ಪರಮೇಶ್ವರ, ಭದ್ರಾವತಿ [ಕಡ್ಲೇಕಾಯಿ ವೃದ್ಧ ಮತ್ತು ಒಣಗಿದ್ದ ಟೀ ಗ್ಲಾಸ್]

* ವಿನಾಯಕ ಭಟ್ [ನನ್ನ ಕನ್ನಡದ ಭಾವ, ಕನ್ನಡದ ಅಜ್ಜ!]

* ಸಾವಿತ್ರಿ ವೆಂ. ಹಟ್ಟಿ, ಲಕ್ಕುಂಡಿ, ಗದಗ

ತೀರ್ಪುಗಾರರ ಮೆಚ್ಚುಗೆ ಪಡೆದ ಕತೆಗಾರರು:

* ಸುರೇಶ ಭಟ್ಟ, ಸಿಂಗಪುರ

ಶಿವು ಮೊರಿಗೆರಿ, ಚೇತನ್ ಪಿಲಿಕುಳ, ಶಿವಕುಮಾರ್ ಹೊಸಂಗಡಿ ಮತ್ತು ವೆಂಕಟೇಶ ಜನಾದ್ರಿಯವರ ಕತೆಗಳು ಚೆನ್ನಾಗಿದ್ದರೂ, ಸ್ಪರ್ಧೆಯ ಮೂಲ ಆಶಯಕ್ಕೆ ಕೊಂಚ ದೂರವಾಗಿದ್ದವು. ಆದರೆ ಅವರ ಪ್ರಯತ್ನಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಕಥೆ ಹೆಣೆಯುವ ನಿಮ್ಮ ಪ್ರವೃತ್ತಿ ಹೀಗೇ ಮುಂದುವರಿಯಲಿ.

ಬರೆಯುವುದು, ಓದುವುದು ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ, ನಿಮ್ಮೆಲ್ಲರ ಪ್ರತಿಕ್ರಿಯೆ ನಮಗೆ ತುಂಬಾ ಸಂತಸ ತಂದಿದೆ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ನಿಮ್ಮಲ್ಲರ ಪ್ರೀತಿಗೆ ನಾವು ಋಣಿ. [ಶುಭಸಂಕಲ್ಪ ಅಂಕಣಕ್ಕೆ ಬರೆದ ಎಲ್ಲ ಲೇಖನಗಳನ್ನು ಇಲ್ಲಿ ಓದಿರಿ.]

ಪ್ರೀತಿಯಿಂದ,

ಗುಣಮುಖ

English summary
Kannada inspirational short story contest result is out. The contest was organized for Shubhasankalpa column by Gunamukha by Oneindia-Kannada. Pradeep Parameshwar, Savitri Hatti and Vinayak Bhat have won the competition. Congratulations and happy 57th Kannada Rajyotsava.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X