• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶುಭಸಂಕಲ್ಪ ಅಂಕಣಕ್ಕೆ ಹಾಸನದ ವಿಶ್ವ ಬರೆದ ಪತ್ರ

By * ಗುಣಮುಖ
|
ಕಳೆದ ವಾರದ 'ಶುಭಸಂಕಲ್ಪ'ದ ಕತೆ 'ಪ್ರೀತಿಯನ್ನು ಗುರುತಿಸುವ ಮನಸ್ಸು...' ಓದಿದ, ಮೆಚ್ಚಿದ, ಬಹು ಓದುಗರದು ಒಂದೇ ಪ್ರಶ್ನೆ ಇಪ್ಪತೈದು ವರ್ಷ ವೈವಾಹಿಕ ಜೀವನದಲ್ಲಿ ಡ್ಯಾನಿಯ ಮೆಚ್ಚಿನ ತಿನಿಸಿನ ವಿಷಯ ರೋಸಿಯೊಂದಿಗೆ ಹಂಚಿಕೊಳ್ಳುವ ಸಂದರ್ಭ ಬರಲಿಲ್ಲವೇ? ಆ ಚಿಕ್ಕ ವಿಷಯಕ್ಕೆ ರೋಸಿ ಕೋರ್ಟ್ ಮೆಟ್ಟಲೇರಿದಳೆ?

ಇದೆ ಪ್ರಶ್ನೆ ಕೇಳಿ ಹಾಸನದಿಂದ ವಿಶ್ವರವರ ಪ್ರಾತಿನಿಧಿಕ ಪತ್ರ ಈ ರೀತಿ ಇದೆ :

"ನಮಸ್ಕಾರ ಸಾರ್, ನನ್ನ ಹೆಸರು ವಿಶ್ವ, ನಾನು ಹಾಸನ್‌ನಲ್ಲಿ ವಾಸವಾಗಿದ್ದೀನಿ. ಸಾರ್ ನಾನು ನೀವು ಒನ್ಇಂಡಿಯಾ-ಕನ್ನಡದಲ್ಲಿ ಪ್ರಕಟವಾದ ’ಪ್ರೀತಿಯನ್ನು ಗುರುತಿಸುವ ಮನಸ್ಸು ಕೊಡಪ್ಪಾ ದೇವರೆ!’ ಎಂಬ ಕಥೆ ಓದಿದೆ. ನನಗೆ ಇಷ್ಟವಾಯಿತು. ಏಕೆಂದರೆ ಪ್ರೀತಿ ಇಲ್ಲದವರು ಪ್ರೀತಿ ಬೇಕು ಎಂದು ಎಷ್ಟೋ ಸಾರಿ ದೇವರ ಹತ್ತಿರ ಕೇಳಿಕೊಳ್ಳುತ್ತಿರುತ್ತಾರೆ. ಆದರೆ ಇರುವ ಸಂಬಂಧಗಳಲ್ಲಿ ನಿಜವಾದ ಪ್ರೀತಿ ಯಾರಿಗೂ ಕಾಣುವುದಿಲ್ಲ, ಅರ್ಥಮಾಡಿಕೊಳ್ಳುವುದೂ ಇಲ್ಲ. ಆದರೆ ನೀವು ಈ ಕಥೆಯಲ್ಲಿ ಬ್ರೆಡ್ಡಿನ ವಿಚಾರಕ್ಕೆ ವಿಚ್ಛೇದನ ಕೇಳಿ ರೋಸಿ ಕೋರ್ಟಿಗೆ ಹೋದಳು ಎಂದು ತಿಳಿಸಿದ್ದೀರಿ. 25 ವರ್ಷಗಳಿಂದ ಬೇರೆಯವರಿಗೆ ಆದರ್ಶ ದಂಪತಿಗಳಾಗಿದ್ದ ಇವರಿಗೆ ಅವರವರ ಇಷ್ಟಪಡುವ ಆಹಾರ ವಸ್ತುಗಳ ಬಗ್ಗೆ ಗೊತ್ತಿರಲಿಲ್ಲವೇ? ಎಂಬುದು ನನಗೆ ಅರ್ಥವಾಗದ ವಿಷಯವಾಗಿದೆ, ಇದರ ಬಗ್ಗೆ ವಿವರಿಸಿ. 25 ವರ್ಷಗಳಿಂದ ಹೆಂಡತಿಗೆ ಡ್ಯಾನಿ ನನಗೆ ಬ್ರೆಡ್‌ನ ಗಟ್ಟಿಯಾದ ಭಾಗ ಇಷ್ಟ ಅಂತ ಯಾವತ್ತು ಹೇಳಿರಲಿಲ್ಲವೇ? ಏಕೆ? ಆದರ್ಶ ದಂಪತಿಗಳು ಎಂದರೆ ಒಬ್ಬರ ಬಗ್ಗೆ ಒಬ್ಬರ ಅರ್ಥಮಾಡಿಕೊಂಡಿರಬೇಕು ಅಲ್ಲವೇ?"

ಎಲ್ಲಾ ಓದುಗರು ಕೇಳಿದ ಪ್ರಶ್ನೆ ತಾರ್ಕಿಕವಾಗಿ ಸರಿಯಾಗಿಯೇ ಇದೆ. ಆದರೆ ನೋಡಿ, ಎಷ್ಟೋ ಸಂಬಂಧಗಳು ಚಿಕ್ಕ ಪುಟ್ಟ ವಿಷಯಗಳಿಗೆ ಹಳಸಿ ಹೋಗುತ್ತವೆ. ನಾವು ಪ್ರಯತ್ನ ಪಡದಿದ್ದರೆ ನಮ್ಮ ಪಕ್ಕದಲ್ಲಿರುವ ವ್ಯಕ್ತಿಯ ಬಗ್ಗೆ ಹಲವು ವರ್ಷಗಳ ನಂತರವೂ ನಮಗೆ ಎಷ್ಟೊಂದು ವಿಷಯಗಳ ಬಗ್ಗೆ, ಅವರ ಇಷ್ಟ-ಕಷ್ಟಗಳ ಬಗ್ಗೆ ತಿಳಿಯುವುದೇ ಇಲ್ಲ. ಶೇಕಡ 90ರಷ್ಟು ವಿಚ್ಛೇದನಗಳು ಚಿಕ್ಕ ಪುಟ್ಟ ವಿಷಯಗಳಿಗೆ ಕೋರ್ಟ್‌ನ ಮೆಟ್ಟಿಲೇರಿವೆ ಮತ್ತು ಏರುತ್ತಲಿವೆ.

ನೀವು ಒಂದು ಬುದ್ಧಿಮತ್ತೆಯ ಕಸರತ್ತು ಮಾಡಿ, ನಿಮ್ಮ ತುಂಬಾ ಹತ್ತಿರದ ಸಂಬಂಧದ (ಅಂದರೆ ತಂದೆ, ತಾಯಿ, ಅಣ್ಣ, ಅಕ್ಕ, ಹೆಂಡತಿ, ತಮ್ಮ, ಸ್ನೇಹಿತ, ಗೆಳತಿ ಇತ್ಯಾದಿ) ಹೆಸರನ್ನು ಒಂದು ಕಾಗದದಲ್ಲಿ ಬರೆದು, ಅವರ ಇಷ್ಟ-ಕಷ್ಟಗಳ (ಉದಾಹರಣೆಗೆ ಅವರ ಇಷ್ಟದ ಬಣ್ಣ, ತಿಂಡಿ, ಸಿಹಿ, ಹವ್ಯಾಸ... ಇತ್ಯಾದಿ) ಪಟ್ಟಿ ಮಾಡಿ... ಚಿಕ್ಕ ಪಟ್ಟಿ ನಿಮಗೆ ಗಾಬರಿಪಡಿಸಬಹುದು. ಆಗ ನಿಮಗೆ ಕತೆಯ ಭಾವಾರ್ಥ ತಿಳಿದೀತು. ದೂರದ ಅಮೆರಿಕಾದ ಬಗ್ಗೆ, ಚಂದ್ರನ ಬಗ್ಗೆ, ಮಂಗಳ ಗ್ರಹದ ಬಗ್ಗೆ ಎಷ್ಟೊಂದು ತಿಳಿದಿರುವ ನಾವು, ನಮ್ಮ ಪಕ್ಕದಲ್ಲಿರುವ, ನಮ್ಮೊಂದಿಗೆ ಜೀವಿಸುತ್ತಿರುವ ವ್ಯಕ್ತಿಯ ಬಗ್ಗೆ ಹಲವು ಬಾರಿ ತಿಳಿದಿರುವುದೇ ಇಲ್ಲ.

'ಶುಭಸಂಕಲ್ಪ' ಅಂಕಣದ ಕತೆಗಳು ತರ್ಕದ ಕತೆಗಳಲ್ಲ, ಸ್ಪೂರ್ತಿಯ ಕತೆಗಳು. ನಿಮ್ಮಲ್ಲಿ ಜೀವನ ಸ್ಪೂರ್ತಿಯ ಸೆಲೆ ಉಕ್ಕಿಸಲಿ ಎಂದು ಆಶಿಸುತ್ತಾ, ಇದಕ್ಕೆ ಸಂಬಂಧ ಪಟ್ಟ ಒಂದು ಕತೆಯನ್ನು ಈ ವಾರ ಹಂಚಿಕೊಳ್ಳುತ್ತೇನೆ. ದಯವಿಟ್ಟು ಗಮನಿಸಿ ಇದು ಕಾಲ್ಪನಿಕ ಕತೆಯಲ್ಲ, ನೈಜ ಘಟನೆಯನ್ನು ಆಧರಿಸಿದ ಕತೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Shubhasankalpa 'Sunday' column by Gunamukha is immensely appreciated by Oneindia-Kannada readers, for the kind of inspiration they are instilling in the readers. Here is sample letter by Vishwa from Hassan. Also read a true story of a couple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more