ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೂರ್ವಾಗ್ರಹ ಪೀಡಿತನಿಗೆ ಸತ್ಯ ಎಂದೂ ಗೋಚರಿಸದು

By * ಮನಸ್ವಿನಿ, ನಾರಾವಿ
|
Google Oneindia Kannada News

Prejudiced Mind, Osho Story
ಪೂರ್ವಾಗ್ರಹ ಪೀಡಿತರಾದವರಿಗೆ ಸತ್ಯದ ದರ್ಶನ ಎಂದಿಗೂ ಸಾಧ್ಯವಿಲ್ಲ. ಅವರ ಮನಸ್ಸು ಏಕಮುಖವಾಗಿ ಸಂಚರಿಸುತ್ತಲೇ ಇರುತ್ತದೆ. ಅವರಿಗೆ ಸಿಗುವುದು ಅರ್ಧಸತ್ಯ ಮಾತ್ರ ಎಂಬುದನ್ನು ನಿರೂಪಿಸಲು ಓಶೋ ತನ್ನ ಶಿಷ್ಯರಿಗೆ ಮುಲ್ಲಾ ನಸ್ರುದ್ದೀನನ ಪ್ರಸಂಗವನ್ನು ವಿವರಿಸಿದ್ದಾರೆ.

ಒಮ್ಮೆ ಗೌರವಾನ್ವಿತ ಮಾಜಿಸ್ಟೇಟ್ ಆದ ಮುಲ್ಲಾ ನಸ್ರುದ್ದೀನ್ ತನ್ನ ಮೊದಲ ಮೊಕದ್ದಮೆಯ ತೀರ್ಪು ನೀಡಲು ಸಜ್ಜಾಗಿ ನ್ಯಾಯಪೀಠವನ್ನು ಅಲಂಕರಿಸಿ ಕೂತಿದ್ದ. ಒಂದು ಕಡೆ ಫಿರ್ಯಾದುಗಳ ವಾದವನ್ನು ಆಸಕ್ತಿಯಿಂದ ತುಂಬಾ ಏಕಾಗ್ರತೆಯಿಂದ ಆಲಿಸಿದ ನಸ್ರುದ್ದೀನ್, ಕೋರ್ಟ್ ನಲ್ಲಿ ನೆರದಿದ್ದವರನ್ನು ಉದ್ದೇಶಿಸಿ ಇಂತೆಂದನು:" ಇನ್ನು 5 ನಿಮಿಷಗಳಲ್ಲಿ ನಾನು ಈ ಕೇಸಿಗೆ ಸಮರ್ಪಕವಾದ ತೀರ್ಪನ್ನು ನೀಡುತ್ತೇನೆ"

ಆದರೆ, ಮುಲ್ಲಾನ ಈ ಮಾತುಗಳನ್ನು ಕೇಳಿ ಕೋರ್ಟ್ ಆವರಣದಲ್ಲಿ ಗುಸುಗುಸು ಶುರುವಾಯಿತು. ಕೊಂಚ ಧೈರ್ಯ ಮಾಡಿದ ಕ್ಲರ್ಕ್ ಒಬ್ಬ ಮುಲ್ಲಾಗ ಕಿವಿಯಲ್ಲಿ ಈ ರೀತಿ ಪಿಸುಗುಟ್ಟಿದ" ಇದೇನು ಮಾಡುತ್ತಿದ್ದೀರಿ ಮಹಾಸ್ವಾಮಿ? ಇನ್ನೊಂದು ಪಕ್ಷದವರ ವಾದವನ್ನು ಕೇಳದೆ ತೀರ್ಪು ನೀಡಲು ಹೇಗೆ ಸಾಧ್ಯ?"

ಅದಕ್ಕೆ ಉತ್ತರಿಸಿದ ಮುಲ್ಲಾ "ಈಗ ನನ್ನನ್ನು ಗೊಂದಲಕ್ಕೆ ದೂಡಬೇಕು. ನನ್ನ ಮನಸ್ಸು ತೀರ್ಪನ್ನು ಯೋಚಿಸಿ ಆಗಿದೆ. ಘೋಷಿಸುವುದೊಂದೇ ಬಾಕಿ. ನಾನು ಇನ್ನೊಂದು ಪಾರ್ಟಿ ವಾದ ಕೇಳಿದರೆ, ಮತ್ತೆ ಮನಸ್ಸಿನಲ್ಲಿ ಗೊಂದಲವುಂಟಾಗುತ್ತದೆ!" ಗೊಂದಲದಲ್ಲಿ ಇರುವ ಮನಸ್ಸು ಸರಿಯಾದ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಬಿಟ್ಟನು.

ಸೂಫಿ ಕಥೆಗಳಲ್ಲಿ ಮುಲ್ಲಾ ನಸ್ರುದ್ದೀನನ ಪ್ರಸಂಗವನ್ನು ಉದಾಹರಿಸುತ್ತಾ ಕಥೆಗಳು ಬರೀ ಓದಿ, ನಕ್ಕು, ಮರೆಯುವುದಕ್ಕಷ್ಟೇ ಅಲ್ಲ. ಪ್ರತಿ ಕಥೆಯಲ್ಲೂ ನೀತಿಗಳಿವೆ ಎಂದು ಓಶೋ ಹೇಳಿದ್ದಾರೆ. ಪೂರ್ವಾಗ್ರಹ ಪೀಡಿತರ ಮನಸ್ಸು ಮುಲ್ಲಾ ನಸ್ರುದ್ದೀನನಂತೆ ವರ್ತಿಸುತ್ತದೆ. ತನ್ನದೇ ಆದ ಚೌಕಟ್ಟು ಹಾಕಿಕೊಂಡು ಅದರ ಸುತ್ತವೇ ಸುತ್ತುತ್ತಿರುತ್ತದೆ. ಇದರಿಂದ ಸತ್ಯದ ನಿಜ ವರ್ಣ ಗೋಚರಿಸುವುದು ಅಸಾಧ್ಯ. ಪೂರ್ವಾಗ್ರಹ ಪೀಡಿತರಾಗುವುದನ್ನು ಬಿಟ್ಟು, ಎಲ್ಲವನ್ನೂ ಮುಕ್ತವಾಗಿ ನೋಡುತ್ತಾ, ಮುಕ್ತವಾಗಿ ಆಲೋಚಿಸುವುದು ಒಳ್ಳೆಯದು ಎಂಬ ಸಂದೇಶವನ್ನು ತನ್ನ ಶಿಷ್ಯರಿಗೆ ಓಶೋ ಈ ರೀತಿ ವಿಷದಪಡಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X