ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಕೆಗಾಂಧಿ ಕಥಾಸ್ಪರ್ಧೆ ಬಹುಮಾನ ವಿಜೇತರು

By Shami
|
Google Oneindia Kannada News

Mahathma Gandhi
ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸಂಸ್ಥಾಪಕರಾದ ರವಿ ಕೃಷ್ಣಾ ರೆಡ್ಡಿಯವರು 1009-10ರ ಸಾಲಿನ ಗಾಂಧಿಜಯಂತಿ ಕಥಾಸ್ಪರ್ಧೆಯನ್ನು ಏರ್ಪಡಿಸಿದ್ದರು. ಗಾಂಧೀಜಿಯ ಮೌಲ್ಯವನ್ನಾಧರಿಸಿ ವಾಸ್ತವವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುವ, ಅದೇ ಸಮಯದಲ್ಲಿ ಕಲಾತ್ಮಕವಾಗಿರುವ, ಸಮಕಾಲೀನ ವ್ಯವಸ್ಥೆಯನ್ನು ಭವಿಷ್ಯಕ್ಕೂ ಕಟ್ಟಿಕೊಡುವ ಕತೆಗಳನ್ನು ನಾಡಿನ ಸೃಜನಶೀಲ ಮನಸ್ಸುಗಳಿಂದ ಆಹ್ವಾನಿಸಿದ್ದರು. ಅವರ ಆಹ್ವಾನಕ್ಕೆ ನಾಡಿನ ಉತ್ಸಾಹಿ ಲೇಖಕರಿಂದ ಕತೆಗಳ ಮಹಾಪೂರವೇ ಹರಿದುಬಂದಿತ್ತು.

ನಾಡಿನ ಹೆಸರಾಂತ ಸಾಹಿತಿಗಳು, ಲೇಖಕರು ಭಾರೀ ಉತ್ಸಾಹದಿಂದಲೇ ಕಥಾಸ್ಪರ್ಧೆಯಲ್ಲಿ ಪಾಲ್ಗೊಂಡು ಕತೆಗಳನ್ನು ಬರೆದು ಕಳುಹಿಸಿಕೊಟ್ಟಿದ್ದರು. ಆ ಕತೆಗಳನ್ನು ಕತೆಗಾರರಾದ ಡಾ.ನಟರಾಜ್ ಹುಳಿಯಾರ್, ಕೃಷ್ಣ ಮಾಸಡಿ ಮತ್ತು ಅನಿತಾ ಹುಳಿಯಾರ್‌ರವರು ಓದಿ, ಕೂತು ಚರ್ಚಿಸಿ, ಉತ್ತಮವಾದ ಮೂರು ಕತೆಗಳನ್ನು ಆಯ್ಕೆ ಮಾಡಿದರು. ಆ ಮೂರು ಬಹುಮಾನಿತ ಕತೆಗಳು ಇಂತಿವೆ :

* ಮೊದಲ ಬಹುಮಾನ ರೂ. 6,000, ಬಹುಮಾನಿತ ಕತೆ > ಗಾಂಧಿಕಟ್ಟೆ >ಕತೆಗಾರರು > ಕಲಿಗಣನಾಥ ಗುಡದೂರು
* ಎರಡನೆಯ ಬಹುಮಾನ ರೂ. 4,000, ಬಹುಮಾನಿತ ಕತೆ > ವಂದೇಮಾತರಂ > ಕತೆಗಾರರು > ಭಾಗೀರಥಿ ಹೆಗಡೆ
* ಮೂರನೆಯ ಬಹುಮಾನ ರೂ. 3,000 ಬಹುಮಾನಿತ ಕತೆ > ಗಾಂಧಿ ವೇಷ > ಕತೆಗಾರರು> ವಿಶ್ವನಾಥ ಪಾಟೀಲಗೋನಾಳ

ಆಯ್ಕೆಯಾದ ಈ ಮೂರು ಕತೆಗಳನ್ನು ಬರೆದ ಕತೆಗಾರರನ್ನು ದಿನಾಂಕ 22.05.2010 ರ ಶನಿವಾರ ಬೆಂಗಳೂರಿಗೆ ಬರಮಾಡಿಕೊಂಡು, ಪ್ರೆಸ್ ಕ್ಲಬ್‌ನಲ್ಲಿ, ಬಹುಮಾನಿತ ಕತೆಗಾರರಿಗೆ ನಾಡಿನ ಸಂಸ್ಕೃತಿ ಚಿಂತಕರಾದ ಪ್ರೊ. ಕಿ.ರಂ. ನಾಗರಾಜ ಅವರು ಬಹುಮಾನ ವಿತರಣೆ ಮಾಡಿದರು. ವಿಕ್ರಾಂತ ಕರ್ನಾಟಕ ಪತ್ರಿಕೆಯ ರವೀಂದ್ರ ರೇಷ್ಮೆ, ಬಸವರಾಜು ಹಾಗೂ ಬಹುಮಾನವನ್ನು ಪ್ರಾಯೋಜಿಸಿದ ರವಿ ಕೃಷ್ಣಾ ರೆಡ್ಡಿಯವರು ಉಪಸ್ಥಿತರಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X