ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದಲ್ಲಾ ಒಂದೂರಿನಲ್ಲಿ(ಕನ್ನಡ ಸಾಹಿತ್ಯಕ ತ್ರೈಮಾಸಿಕ)

By Staff
|
Google Oneindia Kannada News

Mahabalamurthy Kodlekere,ಕನ್ನಡ ಕಥೆಗಳಿಗೆ ಮಾತ್ರ ಮೀಸಲಾದ ಒಂದು ಪತ್ರಿಕೆಯ ಅಗತ್ಯವನ್ನು ಕೊಡ್ಲೆಕೆರೆ ತುಂಬಿಸಿಕೊಡುತ್ತಿದ್ದಾರೆ. ಒಪ್ಪಿಸಿಕೊಳ್ಳಿ.

ನಮ್ಮೊಳಗೊಬ್ಬ ಸಾಹಿತಿ ಮಹಾಬಲಮೂರ್ತಿ ಕೊಡ್ಲೆಕೆರೆ ಅವರ ಹೊಸ ಪ್ರಯೋಗ ಇದು. ಕನ್ನಡ ಓದುಗರಿಗೆ ಉತ್ತಮ ಕಥೆಗಳನ್ನು ಓದಲು ಒದಗಿಸಬೇಕೆಂಬ ಅವರ ಆಶಯ ಹಾಗೂ ಪ್ರಯತ್ನಗಳು ಮೇಳೈಸಿ "ಒಂದಲ್ಲಾ ಒಂದೂರಿನಲ್ಲಿ" ಪತ್ರಿಕೆ ಜನ್ಮ ತಾಳಿದೆ. ಸಧ್ಯಕ್ಕೆ "ಕಥೆಗಳೊಂದಿಗೆ ಪಯಣ" ಎಂಬ ಆಶಯದೊಂದಿಗೆ ಪ್ರಾರಂಭವಾಗಿರುವ ಈ ಪತ್ರಿಕೆ ಮುಂದೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತದೆ.

"ನಿಜ ಹೇಳಬೇಕೆಂದರೆ ಸಂಪಾದಕನ ಕೆಲಸ ಮಧುಕರ ವೃತ್ತಿಗೆ ಹತ್ತಿರವಾದುದು. ಕಥೆಗಳು, ಲೇಖನಗಳು, ವಿಮರ್ಶೆ, ಚಿಂತನ ಇತ್ಯಾದಿ ಕೇಳಿ ಸಂಪಾದಿಸಬೇಕು. ಲೇಖನಗಳನ್ನು ಪ್ರೀತಿ ವಿಶ್ವಾಸ, ನಂಬಿಕೆಗಳ ಫಲವಾಗಿ ಲೇಖಕ ಸಂಪಾದಕನ ಕೈಗಿಡುತ್ತಾನೆ. ನಂಬಿಕೆಯನ್ನು ಉಳಿಸಿಕೊಳ್ಳೂವುದು ಈಗ ನನ್ನ ಪಾರದರ್ಶಕತೆಯನ್ನು ಅವಲಂಬಿಸಿದೆ. ಸೌಜನ್ಯವನ್ನು ನಾನು ಉಳಿಸಿಕೊಳ್ಳಬೇಕಾಗಿದೆ." ಪತ್ರಿಕೆಯ ಸಂಪಾದಕರಾಗಿ ಕೊಡ್ಲೆಕೆರೆಯವರು ಸೌಜನ್ಯದಿಂದ ಹೇಳುವ ಮಾತುಗಳಿವು.

ಉತ್ತಮವಾದುದನ್ನೇ ಸಂಗ್ರಹಿಸಿ ಕೊಡಬೇಕೆನ್ನುವ ಆಶಯದೊಂದಿಗೇ ಈ ಕೆಲಸ ಅದೆಂಥ ಹೊಣೆಗಾರಿಕೆಯಿಂದ ಕೂಡಿದೆ ಹಾಗೂ ಈ ಹೊಣೆಗಾರಿಕೆಯನ್ನು ನಿಭಾಯಿಸಬೇಕಾದ ಸರಿಯಾದ ವಿಧಾನವೇನು ಎಂಬುದರ ಬಗ್ಗೆ ಈ ಮಾತುಗಳು ಸೂಕ್ಷ್ಮವಾಗಿ ಹೇಳುತ್ತವೆ. ಈ ಎಲ್ಲದರ ಸ್ಪಷ್ಟ ಅರಿವಿರುವ ಕೊಡ್ಲೆಕೆರೆಯವರು ನಮಗೆ ಉತ್ತಮವಾದುದನ್ನೇ ಆಯ್ದು ಕೊಡಲು ಸಮರ್ಥರು, ಕೊಟ್ಟೇ ಕೊಡುತ್ತಾರೆ ಎಂಬ ನಿರೀಕ್ಷೆಯನ್ನು ಕನ್ನಡ ಕಥೆಗಳ ಓದುಗ ಇಟ್ಟಕೊಳ್ಳಬಹುದು.

ಅಮೆರಿಕಾದ ರಾಕ್‌ವಿಲ್, ಮೇರಿಲ್ಯಾಂಡಿನ "ಭೂಮಿಕಾ" ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಪತ್ರಿಕೆಯ ಪ್ರಾಯೋಗಿಕ ಸಂಚಿಕೆ ಈಗಾಗಲೇ ಹೊರಬಂದಿದೆ. ಪ್ರಥಮ ಸಂಚಿಕೆ ಸಧ್ಯದಲ್ಲೇ ಹೊರಬರಲಿದೆ. ಪತಿಕೆಯ ಚಂದಾ ವರ್ಷಕ್ಕೆ ರೂ. 200. ಚಂದಾಹಣವನ್ನು ಎಂ. ಓ. ಅಥವಾ ಬ್ಯಾಂಕ್ ಡ್ರಾಫ್ಟ್ ಮೂಲಕ ಸಂಪಾದಕರಿಗೆ ಕಳುಹಿಸಬಹುದು.

ಅವರ ವಿಳಾಸ:
Mahabalamurthy Kodlekere,
178, Upstairs,
11th Main Road, 7th Cross,
(Dr. V. K. Gokak Road),
Hanumantha Nagara, Bangalore - 560 019

ಸಂಪಾದಕರಿಂದ ಯಾವುದೇ ಹೆಚ್ಚಿನ ಮಾಹಿತಿ ಬೇಕಾದರೆ ಅವರನ್ನು ಇ ಮೇಲ್ ಮೂಲಕ ಸಂಪರ್ಕಿಸಬಹುದು. ಅವರ ಮೇಲ್ ಐಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X