• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮನು ತೀರಿಕೊಂಡಿದ್ದಾನೆ

By Staff
|

*ಕೋಡಿಬೆಟ್ಟು ರಾಜಲಕ್ಷ್ಮಿ

Manu is no moreಗೆಳೆಯ ಮನು ತೀರಿಕೊಂಡಿದ್ದ. ಅವನೊಬ್ಬ ಸಣ್ಣ ಮಟ್ಟಿನ ರೌಡಿಯಾಗಿದ್ದ. ದಿನವೂ ಗಲಾಟೆ ಮಾಡಿಕೊಂಡೇ ಬರುತ್ತಿದ್ದ. ಬಸ್‌ಸ್ಟಾಂಡಿನಲ್ಲಿ ಪಾಡಾರಿ ಬಿದ್ದುಕೊಂಡು ಹುಡುಗಿಯರನ್ನು ರೇಗಿಸುವ ಪುಂಡು ಹುಡುಗರ ಹೆದರಿಸಿ ಆಚೆಗೆ ಅಟ್ಟುತ್ತಿದ್ದ. ಮೈಲು ದೂರದ ಗೋರ್‌ಮೆಂಟ್‌ ಹೈಸ್ಕೂಲ್‌ನಿಂದ ನಡೆದುಕೊಂಡು ಬರುವ ಹುಡುಗಿಯರಿಗೆ ತೊಂದರೆಯಾದರೆ ಅಲ್ಲೆಲ್ಲೋ ಕಾವಲು ನಿಲ್ಲುತ್ತಿದ್ದ. ಊರಿನ ಶಾಸ್ತಾವು ಜಾತ್ರೆಯಲ್ಲಿ ಭಕ್ತರ ನೂಕು ನುಗ್ಗಲು ಸುಧಾರಿಕೆಗೆ ಕೈಲಾದಷ್ಟು ಕೆಲಸ ಮಾಡುತ್ತಿದ್ದ. ಮಾರ್ನೆಮಿಗೆ ಹುಲಿವೇಷ ತಂಡವನ್ನು ಬಹಳ ಚೆಂದ ಮಾಡಿ ರೆಡಿ ಮಾಡುತ್ತಿದ್ದ. ಜನ ರೌಡಿ ಅಂತಲೇ ಆತನ ಕರೆದರೂ ಒಳಗೊಳಗೇ ಏನೋ ಮೆಚ್ಚಿಕೆ.

ಈಗ ತೀರಿಕೊಂಡಿದ್ದಾನೆ.

ಇದೇ ಬೆಟ್ಟುಗದ್ದೆಯಲ್ಲಿ ನಾವಿಬ್ಬರೇ ಕೊತ್ತಳಿಗೆ ಬ್ಯಾಟು ಹಿಡಿದುಕೊಂಡು ಕ್ರಿಕೆಟ್‌ ಆಡ್ತಿದ್ದದ್ದು . ತೋಟದ ಮನೆಯ ಶೆಟ್ಟರ ಕೈಯಿಂದ ಬೈಗಳು ತಿಂದದ್ದು... ವಿಶಾಲ ಬೆಟ್ಟುಗದ್ದೆಯಲ್ಲಿ ಈ ಬೆಳದಿಂಗಳಲ್ಲಿ ನಡೆಯುವಾಗ ನಿನ್ನ ನೆನಪು ಮಾತ್ರ ಜೊತೆಯಲ್ಲಿ....

32 ಸಾಯುವ ವಯಸ್ಸಾ... ನೀನಿರಬೇಕಿತ್ತು... ನೀನಿರಲೇಬೇಕಿತ್ತು . ಹೋಗಿಬಿಟ್ಟೆಯಲ್ಲಾ . ಅದೂ ಶಾಂತಿಯ ಸಾವಲ್ಲ. ಕೊಲೆ ಮಾಡಿದರು. ಎಷ್ಟು ನೋವಾಗಿರಬಹುದು ನಿನಗೆ ! ನನ್ನ ಎದೆಯೆಲ್ಲ ಸೋರಿ ಹೋದ ಹಾಗಾಗುತ್ತದೆ. ನೀನಿಲ್ಲ . ಈ ಲೋಕದಲ್ಲೆಲ್ಲೂ ನೀನಿಲ್ಲ.. ಯಾವ ರೂಪದಲ್ಲಿಯೂ. ಸುಮ್ಮನೇ ಆಕಾಶ ದಿಟ್ಟಿಸುವಾಗ ಚುಕ್ಕಿಗಳ ಕಂಡಾಗಲೆಲ್ಲ ಅಲ್ಲಿ ಯಾವುದಾದರೂ ಒಂದು ಚುಕ್ಕಿಯಾಗಿ ನೀನಿದ್ದರೂ ಸಾಕಿತ್ತು ... ಉತ್ತರದ ಮೂಲೆಯಲ್ಲಿ ಹೊಳೆಯುವ ಆ ಚುಕ್ಕಿ ನನ್ನ ಗೆಳೆಯ ಎಂದು ಹೇಳಿಕೊಳ್ಳುವಷ್ಟಾದರೂ ನೀನಿಲ್ಲ . ಸಿನಿಮಾಗಳಲ್ಲಿ ಸತ್ತವರು ಯಾವುದಾದರೂ ರೂಪದಲ್ಲಿ ಭೂಮಿಗೆ ಬರ್ತಾರಲ್ಲ . ಹಾಗಾದರೂ ನೀನು ಸಿಗುತ್ತೀಯಾ.. ಎಲ್ಲಿ ಲೀನವಾಗಿ ಹೋದೆ...? ಗಾಳಿ, ನೀರು.. ಬೆಳಕು...ಯಾವುದರಲ್ಲಿ...?

ಹೇಳಿಕೊಳ್ಳುವುದಕ್ಕೊಬ್ಬ ಗೆಳೆಯನಿಲ್ಲ . ಕೆಲಸದ ಬಗ್ಗೆ, ಬಸ್ಸಿನ ಪ್ರಯಾಣದ ಬಗ್ಗೆ ಮನೆಯ ಕಷ್ಟಗಳ ಬಗ್ಗೆ... ಮನೆಯ ಕಷ್ಟದ ನೆಂಪು ಬರುತ್ತಲೇ ಮುಂದೆ ಓದುತ್ತೇನೆ ಎಂದು ಹಟ ಹಿಡಿಯುವ ತಂಗಿ ನೆನಪಾದಳು. ಕಾಯಿಲೆಯ ಅಪ್ಪ ನೆನಪಾದರು. ಮನೆಯಲ್ಲೇ ಇರುವ ಅಕ್ಕ, ಅಕ್ಕನ ಮಕ್ಕಳು. ಮಕ್ಕಳಿಗೆ ಹಾಲಿಲ್ಲ . ಹಟ್ಟಿಯಿಂದ ಯಾರೋ ಖದೀಮರು ದನವನ್ನು ಕದ್ದುಕೊಂಡೊಯ್ದಿದ್ದಾರೆ... ಪಿಶಾಚಿ ಮುಂಡೇವು...ಪಿಶಾಚಿಯೆನ್ನುತ್ತಲೇ ನಾನು ನಡೆದು ನಡೆದು ಜಲಕನ್ಯೆ ಇರುವ ಮಾನೀವು ಕೆರೆಯ ದಂಡೆಗೆ ಬಂದಿದ್ದೇನೆ.. ಸತ್ತವರು ಓಡಾಡೋ ಜಾಗ...

ನನಗೆ ಅಮ್ಮ ಬೈಯ್ಯುವುದು ಸುಮ್ಮನೆಯಾ ? ಹೀಗೆ ಏನಾದರೂ ಎಡವಟ್ಟು ಮಾಡಿಕೊಳ್ಳುತ್ತಲೇ ಇರುತ್ತೇನೆ. ಅಲ್ಲೇನದು ಬೆಳ್ಳಗೆ... ಹಾರುತ್ತಿರುವುದು.. ಬೆರ್ಚಪ್ಪನಾ.. ಇಲ್ಲಿ ಯಾರೂ ಬೆರ್ಚಪ್ಪ ಊರುವುದಿಲ್ಲವಲ್ಲ.. ಏನಿರಬಹುದು... ಸತ್ತವರು ? ಮನು... ?!, ಓ ದೇವರೇ, ಮನು ಇದ್ದಿದ್ದರೆ ಅಂತ ಆಶಿಸಿದ್ದು ಹೌದು. ತಪ್ಪಾಯಿತಪ್ಪಾ ತಪ್ಪಾಯಿತು ಎನ್ನುತ್ತಲೇ... ಸರ ಸರ ಹೆಜ್ಜೆ ಹಾಕಿದೆ.. ದಾಪುಗಾಲಲ್ಲಿ ಮನೆ ಸೇರಿದಾಗ ದೀರ್ಘ ನಿಟ್ಟುಸಿರು...

Click here to go to topಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more