ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುರಿದ ಬೀಡಿ

By Staff
|
Google Oneindia Kannada News

*ಕೋಡಿಬೆಟ್ಟು ರಾಜಲಕ್ಷ್ಮಿ

Rolling thoughts ?ಇರುಳ ನೀರವತೆ ಸೀಳುವ ಬಾವಲಿಗಳ ಕೀರಲು. ದೂರದಲ್ಲೆಲ್ಲೊ ಗೂಂಗುಡುವ ಗುಮ್ಮ . ಉದ್ಘೋಷಕಿಯಿಂದ ಜೈ ಹಿಂದ್‌ ಉಲಿಸಿಕೊಂಡು ಸ್ಸ್‌... ಸದ್ದು ಮಾಡುತ್ತಿರುವ ಬ್ಯಾಟರಿ ರೇಡಿಯಾ. ಬೀಡಿ ಸೂಪಿನಲ್ಲಿ ಉರಿವ ಬೆಡ್‌ ಲ್ಯಾಂಪ್‌.

ಬೆಡ್‌ ಲ್ಯಾಂಪಿನಿಂದ ಹೊರಡುವ ಬಿಸಿಗೆ ತಾಗಿದ ಅರೆಬರೆ ಬೆಳ್ಳಿ ಕೂದಲು ಚರ್‌ ಚರ್‌ ಅಂತ ಕರಕಲಾಗುತ್ತಲೇ ಆಕೆಗೆ ಎಚ್ಚರ. ಮತ್ತೆ ಒಂದು ಕೈಯ್ಯ ಎರಡು ಒರಟು ಬೆರಳುಗಳ ನಡುವೆ ಬೀಡಿ. ಇನ್ನೊಂದು ಕೈಯ್ಯಲ್ಲಿ ನೂಲು. ಬೀಡಿ ಕಟ್ಟಿ ಕಟ್ಟಿ ರಾಶಿ ಇಡುತ್ತಾಳೆ- ರೇಡಿಯೋ ಆಫ್‌ ಮಾಡುವುದನ್ನು ಮರೆತು.

ಮರುದಿನ ಬೆಳಿಗ್ಗೆ -

ಬೀಡಿ ಬ್ರಾಂಚ್‌ನ ಒರಟು ಮೇಜಿನ ಹಿಂದೆ ಬೀಡಿ ಆಯ್ದು ತೆಗೆಯುವವ. ಅವನ ಕೈಯ್ಯಲ್ಲಿ ಲಟಲಟನೆ ಮುರಿಯುವ ಬೀಡಿಗಳು. ರೊಯ್ಯನೆ ಮೇಲೆಸೆದಾಗ ತಲೆ ತಗ್ಗಿಸಿಕೊಂಡು ನಿಂತು ಮುರಿದು ಹೋದ ಒಂದೊಂದು ಬೀಡಿಯನ್ನೂ ಆಯ್ದು ಮಸುಕು ಸಂಗೀಸಿನ ಚೀಲಕ್ಕೆ ಹಾಕಿಕೊಳ್ಳುವ ಹೆಂಗಸು. ನೆಲ ನೋಡುತ್ತವೆ ಸಿಟ್ಟು ಸತ್ತ ನಿದ್ದೆಯಿಲ್ಲದ ಕೆಂಗಣ್ಣು . ಕೂದಲು ನೇವರಿಸಿಕೊಂಡ ಒರಟು ಕೈ ತುಂಬಾ ಬೆಡ್‌ ಲ್ಯಾಂಪ್‌ ಉಗುಳಿದ ಇಂಗಾಲದ ಕಪ್ಪು .

ಈ ಕಥೆಯ ಕುರಿತು ನಿಮಗೆ ಏನನ್ನಿಸಿತು ?

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X