• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೃದಯವಂತರು

By Staff
|

The other love story‘ಊರಿನಲ್ಲಿಯೇ ಮಿಗಿಲಾದದ್ದು ನನ್ನ ಹೃದಯ. ಎಲ್ಲಿಯಾದರೂ ಕಂಡಿರಾ, ಇಷ್ಟು ಚೆಲುವಾದ, ನಗಾರಿ ದನಿಯ, ದೃಢವಾದ ಎದೆಯ’.

ನಾಲ್ಕೂ ಬೀದಿಗಳು ಕೂಡುವ ಚೌಕದಲ್ಲಿ ಚಿಗುರು ಮೀಸೆಯ ಹುಡುಗ ತನ್ನ ಹೃದಯವ ಮುಟ್ಟಿ ನೋಡುತ್ತ ಎತ್ತಿ ತೋರಿಸುತ್ತ ಜಂಭ ಕೊಚ್ಚುತ್ತಿದ್ದರೆ, ಜನ ಗುಂಪಾದರು.

‘ಹೌದು, ಇದು ಬಹಳ ಸೊಗಸಾದ ಹೃದಯ. ಎಳ್ಳಷ್ಟೂ ಕೊರೆಯಿಲ್ಲ . ಹುಡುಕಿದರೂ ಗಾಯದ ಕಲುಮೆಯಿಲ್ಲ . ಹೃದಯವೆಂದರೆ ಇದುವೇನೆ ! ’ ಊರಿನ ಜನ ಹೊಗಳುತ್ತಿದ್ದರೆ ಉಕ್ಕು ಹರಯದ ಹುಡುಗ ಉಬ್ಬಿ ಹೋದ.

ಇದ್ದಕ್ಕಿದ್ದಂತೆ, ಗುಂಪನ್ನು ಸೀಳುತ್ತ ರಾಧೇಯನಂತೆ ನುಗ್ಗಿ ಬಂದ ಬಿರುಗಾಳಿಯ ಮುದುಕ. ‘ಅದೆಂಥಾ ಹೆಚ್ಚುಗಾರಿಕೆ ನಿನ್ನ ಹೃದಯದ್ದು ? ನನ್ನ ಹೃದಯಕ್ಕಿಂಥ ನಿನ್ನ ಹೃದಯ ಯಾವುದರಲ್ಲಿ ಮಿಗಿಲು ?’ ಮುದುಕ ಹುಡುಗನ ಎದೆಗೆ ಎದೆಯಾಡ್ಡಿದ.

ಹುಡುಗನೊಂದಿಗೆ, ಗುಂಪೂ ಅಳೆದೂ ತೂಗಿ ಮುದುಕನ ಹೃದಯದಲ್ಲಿ ಇಂಚಿಂಚೂ ಇಣುಕಿದರು. ಅದು ಗಟ್ಟಿಯಾಗೇನೊ ಹೊಡೆದುಕೊಳ್ಳುತ್ತಿತ್ತು . ಆದರೆ, ಹೃದಯದ ತುಂಬಾ ಗಾಯದ ಕಲೆಗಳು. ಕೆಲವು ಭಾಗಗಳು ಕಳೆದು ಹೋಗಿದ್ದವು. ಆ ಜಾಗದಲ್ಲಿ ಜೋಡಿಸಿದ್ದ ಬೇರೆ ಹೃದಯದ ಭಾಗಗಳು ಹೊಂದಾಣಿಕೆಯಾಗದೆ ಅಲ್ಲೆಲ್ಲಾ ಏರು ತಗ್ಗು . ಗುಂಪು ಗೊಂದಲಕ್ಕೆ ಬಿತ್ತು . ಮುದುಕನ ಹೃದಯದ ಅಗ್ಗಳಿಕೆಯಾದರೂ ಎಂಥಾದ್ದು ?

ಯುವಕ ಕೇಳಿಯೇ ಬಿಟ್ಟ . ‘ಎಲೆ ಮುದುಕ, ನೀನೇನು ತಮಾಷೆ ಮಾಡುತ್ತಿದ್ದೀಯ ? ನಮ್ಮಿಬ್ಬರ ಹೃದಯಗಳನ್ನು ಹೋಲಿಸಿ ನೋಡು. ನನ್ನದು ಎಲ್ಲಾ ಬಗೆ ಸಮರ್ಥ. ನಿನ್ನದೋ ಗುಳಿ ಗಾಯಗಳ ದುರ್ಬಲ ಹೃದಯ’ ಎಂದು ಹುಡುಗ ನಗೆಯಾಡಿದ.

ಮುದುಕ ಒಪ್ಪಿಕೊಂಡ. ‘ ಹೌದಪ್ಪ , ನನ್ನ ಹೃದಯದೊಂದಿಗೆ ಹೋಲಿಸಿದರೆ ನಿನ್ನದು ಚೆಲುವೇ. ಆದರೆ, ನನ್ನ ಹೃದಯವನ್ನು ಸ್ವಲ್ಪ ಗಮನವಿಟ್ಟು ನೋಡು. ಇಲ್ಲಿನ ಪ್ರತಿಯಾಂದು ಗಾಯದ ಕಲೆಯೂ ನಾನು ಪ್ರೀತಿ ಹಂಚಿಕೊಂಡ ಮನುಷ್ಯನ ಸಂಕೇತ. ಎಷ್ಟೊಂದು ಜನರೊಂದಿಗೆ ನನ್ನ ಹೃದಯದ ಭಾಗಗಳ ಹಂಚಿಕೊಂಡಿದ್ದೇನೆ. ಬದಲಿಗೆ ಅವರ ಹೃದಯದ ಭಾಗಗಳಿಂದ ಖಾಲಿಯನ್ನು ತುಂಬಿಕೊಂಡಿದ್ದೇನೆ. ಬದಲಿಸಿಕೊಂಡ ತುಣುಕುಗಳು ಹೊಂದಾಣಿಕೆಯಾಗುತ್ತಿಲ್ಲ , ನಿಜ. ಕೆಲವು ತುದಿ ಒರಟಾಗಿಯೂ ಇವೆ. ಆದರೂ, ನಾನು ಹಿತ ಅನುಭವಿಸುತ್ತಿದ್ದೇನೆ. ಯಾಕೆಂದರೆ, ನನ್ನದು ಪ್ರೀತಿಯ ಹೃದಯ, ಪ್ರೀತಿ ಹಂಚಿಕೊಂಡ ಹೃದಯ.

ಕೆಲವೊಮ್ಮೆ ಹೃದಯದ ಭಾಗವನ್ನು ಪಡೆದ ಮನುಷ್ಯ, ಅವನ ಹೃದಯದ ಭಾಗವನ್ನು ಕೊಡದಿರುವುದೂ ಉಂಟು. ಅಲ್ಲೆಲ್ಲಾ ಆಳ ಗಾಯಗಳಿವೆ. ಈ ಗಾಯಗಳು ತುಂಬಾ ನೋವಿನವು. ಅವು ನಾನು ಕಳಕೊಂಡದ್ದನ್ನು ನೆನಪಿಸುತ್ತಲೇ ಇರುತ್ತವೆ. ಆದರೂ, ಆ ಕೆಲವು ಮಂದಿ, ಯಾವತ್ತಾದರೂ ಪಡೆದದ್ದನ್ನ ಹಿಂತಿರುಗಿಸಿಯೇ ತೀರುತ್ತಾರೆ. ಅದಕ್ಕಾಗಿಯೇ ನಾನು ಕಾಯುತ್ತೇನೆ. ಈಗ ಹೇಳು ನಿಜವಾದ ಸೌಂದರ್ಯ ಯಾವುದು.’

ಹುಡುಗ ದಂಗು ಹೊಡೆದುಬಿಟ್ಟ. ಗಲ್ಲಗಳಿಂದ ಇಳಿದ ಹನಿ ನೆಲ ಸೇರುತ್ತಿತ್ತು . ಆತ, ತನ್ನ ಮಟ್ಟಸವಾದ ಹೃದಯದಿಂದ ತಟಕ್ಕನೇ ಒಂದು ಭಾಗವನ್ನು ಕಿತ್ತು ಬಿಟ್ಟ . ತುಂಡರಿಸಿದ ಹೃದಯದ ಭಾಗವನ್ನು ತುಂಬಿಕೊಂಡ ನಡುಗುವ ಬೊಗಸೆಯನ್ನು ಮುದುಕನ ಮುಂದೊಡ್ಡಿದ. ಮುದುಕ ಒಪ್ಪಿಸಿಕೊಂಡ. ತನ್ನ ಹೃದಯಕ್ಕೆ ಬೆಸೆದುಕೊಂಡ. ಬದಲಿಗೆ ತನ್ನ ಹೃದಯದ ಒಂದು ಭಾಗವನ್ನು ಕಿತ್ತು ಹುಡುಗನ ಹೃದಯದ ಭಾಗಕ್ಕೆ ಜೋಡಿಸಿದ. ಸರಿಯಾಗಿ ಹೊಂದಿಕೊಳ್ಳಲಿಲ್ಲ . ಕೆಲ ವು ಏರುತಗ್ಗು ಉಳಿದವು.

ಹುಡುಗ ತನ್ನ ಹೃದಯವನ್ನು ನೋಡಿಕೊಂಡ. ಎಂದಿನ ಮಟ್ಟಸವನ್ನು ಕಳಕೊಂಡಿದ್ದರೂ, ಹಿಂದೆಂದಿಗಿಂತಲೂ ಕಡು ಚೆಲುವಾಗಿದೆ ಅನ್ನಿಸಿತು. ಯಾಕೆಂದರೆ, ಹುಡುಗನ ಹೃದಯದೊಳಕ್ಕೆ ಮುದುಕನ ಎದೆಯ ಭಾಗದಿಂದ ಪ್ರೀತಿ ಇಳಿಯುತ್ತಿತ್ತು . ಅವರಿಬ್ಬರೂ ಪರಸ್ಪರ ಆಲಂಗಿಸಿಕೊಂಡರು. ಆಮೇಲೆ, ಆ ಇಬ್ಬರು ಸುಂದರ ಹೃದಯಗಳ ಮನುಷ್ಯರು ಪಕ್ಕ ಪಕ್ಕದಲ್ಲಿಯೇ ನಡೆದು ಹೋದರು.

(ಋಣ : ಅನಾಮಿಕ ಬರಹಗಾರನ ಇಂಗ್ಲಿಷ್‌ ಸಾಲುಗಳು. ಕನ್ನಡಕ್ಕೆ- ರಘುನಾಥ ಚ.ಹ.)

Click here to go to topಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more