ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಕ್ಕರಿಸಿ ನೋಡುವಾಗಲೇ ಏಟುಕೊಟ್ಟು ಕಿರುಚಬೇಕಿತ್ತು 'ಮೀಟೂ'!

By ಕುಮುದವಲ್ಲಿ ಅರುಣ್ ಕುಮಾರ್
|
Google Oneindia Kannada News

ರಾಜಕೀಯ, ಸಿನೆಮಾ, ಸಾಹಿತ್ಯ ಲೋಕದಲ್ಲಿ ಅಟ್ಟವೇರಿದವರು, ಪಟ್ಟವೇರಿದವರು, ಕಟ್ಟುನಿಟ್ಟಾಗಿ ವೃತ್ತಿನಿಯಮ ಪಾಲಿಸದೆ, ಮಹಿಳೆಯರನ್ನು ಅಲ್ಲಿಇಲ್ಲಿ ಮುಟ್ಟಿ, ಕಾಟಕೊಟ್ಟು ವಿಕೃತ ಸಂತೋಷಪಟ್ಟಿದ್ದರಿಂದ ಇಂದು ಇಕ್ಕಟ್ಟಿಗೆ ಸಿಲುಕಿದ್ದಾರೆ. ಅಂದೂ ಇತ್ತು ಇಂದೂ ಇದೆ ಮೀಟೂ. ಮನಸಿಗೆ ನಾಟುವಂತೆ ಪದ್ಯವನ್ನು ಕಟ್ಟಿಕೊಟ್ಟಿದ್ದಾರೆ ಕುಮುದವಲ್ಲಿ ಅರುಣ್ ಕುಮಾರ್ ಅವರು.

ಟೈಪಿಂಗ್ ಇನ್ಸ್ಟಿಟ್ಯೂಟು, ಕಾಲೇಜ್ ಕ್ಯಾಂಪಸ್ ಗೇಟು
ಬಸ್ ಸ್ಟ್ಯಾಂಡು-ಸೀಟು,
ಆಫೀಸಿನ ಇನ್ ಅಂಡ್ ಔಟು
ಅಲ್ಲಿ ಮುಟ್ಟು...ಇಲ್ಲಿ ಮುಟ್ಟು... ಎಲ್ಲೆಲ್ಲೋ ನೋಟ ನೆಟ್ಟು
ಕೆಕ್ಕರಿಸಿ ನೋಡುವಾಗಲೇ ಏಟುಕೊಟ್ಟು
ಕಿರುಚಬೇಕಿತ್ತು 'ಮೀ ಟೂ"

ಹೈಪ್ರೊಫೈಲ್ ಕಾಮುಕರಿಗೆ ಹೆಡೆಮುರಿಕಟ್ಟಲು ಸಜ್ಜಾಗಿದೆ ಸಮಿತಿಹೈಪ್ರೊಫೈಲ್ ಕಾಮುಕರಿಗೆ ಹೆಡೆಮುರಿಕಟ್ಟಲು ಸಜ್ಜಾಗಿದೆ ಸಮಿತಿ

ಸ್ಟ್ರೀಟುಗಳಲ್ಲಿ ಒಂಟಿಯಾಗಿ ನಡೆಯುವಾಗ ಕೇಳಿದ್ರು ಎಷ್ಟು ರೇಟು?
ತೋರಿಸಿದ್ರು ನೋಟು...
ಕೊರಳ ತಾಳಿ, ಕಾಲಿನ ಉಂಗುರವೂ ಅವರ ಪಾಲಿಗೆ ನೆಗ್ಲೆಟ್ಟು!
ಹೃದಯದ ಢವಗುಟ್ಟು ಅದುಮಿಟ್ಟು
ಕೆನ್ನೆಮೇಲಿಳಿದ ಕಣ್ಣೀರ ಒರೆಸಿಟ್ಟು
ಅರಚಬೇಕಿತ್ತು 'ಮೀ ಟೂ'

Me Too movement : Poem by Kumudavalli Arun Kumar

ಸಿನಿಮಾ-ಡ್ರಾಮಾ ಯೂನಿಟ್ಟು, ಸ್ಟುಡಿಯೋ ಮೈಕ್ಸೆಟ್ಟು
ಎಲ್ಲಿದ್ದರೂ ಫಸ್ಟು ನೋಡೋದೇ ನಮ್ಮ ಬ್ಯಾಕು-ಫ್ರಂಟು!
ಸ್ವಲ್ಪ ನಕ್ಕರೆ ಕೆನ್ನೆ ತಟ್ಟು...
ಸುಮ್ಮನಿದ್ದರೆ ಸೊಂಟ ಚಿವುಟು...
ಮಾತನಾಡದಿದ್ದರೆ ಹಗ್ಸು, ಕಿಸ್ಸು ಕೊನೆಗೆ ಕಾಲಿಂಗ್ ಫಾರ್ ಕಾಟು!
ಆಗಲೇ ಹೇಳಬೇಕಿತ್ತು 'ಪ್ಲೀಸ್ ಟಚ್ ಮಿ ನಾಟು'
ಕೂಗಬೇಕಿತ್ತು 'ಮೀ ಟೂ'

#MeToo ಪ್ರಕರಣ ನಿರ್ವಹಿಸಲು ನ್ಯಾಯಾಧೀಶರ ಸಮಿತಿ ರಚನೆ: ಮೇನಕಾ ಗಾಂಧಿ#MeToo ಪ್ರಕರಣ ನಿರ್ವಹಿಸಲು ನ್ಯಾಯಾಧೀಶರ ಸಮಿತಿ ರಚನೆ: ಮೇನಕಾ ಗಾಂಧಿ

ಅಪರಿಚಿತರಿಗಿಂತಾ...ಪರಿಚಿತರದ್ದೇ ಜಾಸ್ತಿ ಪರ್ಸೆಂಟು!
ಇನ್ಬಾಕ್ಸು, ವಾಟ್ಸಾಪು, ಮೆಸೆಂಜರುಗಳಲ್ಲಿ ಕಮೆಂಟು
ಕೆಲವರದಂತೂ ಡೈರೆಕ್ಟ್ ರಿಕ್ವೆಸ್ಟು...
ಜಸ್ಟು.. ಟ್ರೈ ಮಾಡಿ ನೋಡುವ ಟೆಸ್ಟು!
ಬೈಯ್ದರೆ ಫ್ರೆಂಡ್ಶಿಪ್ ಕಟ್ಟು,
ಸೈಲೆಂಟಾದ್ರೆ ಕಚಡಾ ಪದಗಳ ಸಾನೆಟ್ಟು!
ಇವೆಲ್ಲಾ ಓದಿ ಅಳೋದು ಬಿಟ್ಟು
ಹೇಳಬೇಕಿತ್ತು 'ಮೀ ಟೂ'

#ಮಿಟೂ ಎನ್ನುತ್ತಿರುವ ಪತ್ರಕರ್ತೆಯರು ಮುಗ್ಧರೇನಲ್ಲ: ಬಿಜೆಪಿ ನಾಯಕಿ #ಮಿಟೂ ಎನ್ನುತ್ತಿರುವ ಪತ್ರಕರ್ತೆಯರು ಮುಗ್ಧರೇನಲ್ಲ: ಬಿಜೆಪಿ ನಾಯಕಿ

ಏಜು ಎಷ್ಟಾದರೇನು, ಅವರಿಗೆ ಮೋಜೇ ಪ್ರಾಮಿನೆಂಟು!
ಫೀ'ಮೇಲ್' ಮೇಲಿನ ಹೆರಾಸ್ಮೆಂಟು
ಆಗಬಾರದು ಪರ್ಮನೆಂಟು...
ಅನ್ನೋ ಹಾಗಿದ್ರೆ,
ಹೇಳಿ ಬಾಯಿಬಿಟ್ಟು
ಮೀ ಟೂ...ಮೀ ಟೂ...ಮೀ ಟೂ!

English summary
Me Too movement in India has brought our many big names from all the industry, who raped, sexually harassed, mentally tortured many women who worked under them. Kumudavalli Arun Kumar has written a beautiful and powerful poem on entire movement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X