ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಯ್ಕಿಣಿ ಸರ್, ನನ್ಮೇಲೂ ಒಂದು ಕವಿತೆ ಗೀಚಿ ಬಿಡಿ!

By ಶುಭಾಶಯ ಜೈನ್
|
Google Oneindia Kannada News

ನಿಮ್ಮ ಬರವಣಿಗೆಯ ಪಯಣದಲ್ಲಿ ಜತೆಯಾಗ ಬಯಸುವ ಪಕ್ಷಿಯ ಪ್ರೇಮಪತ್ರ.. ಹೇಗಾದರೂ ಸೈ. ನಿಮ್ಮ ಕವನಗಳಲ್ಲೊಂದು ಸ್ಥಾನ ನನಗೂ ಬೇಕು. ನಿಮ್ಮ ಧ್ಯಾನದಲ್ಲಿ ನಾನು ಮತ್ತಷ್ಟು ಸೊಗಸಾಗಿ ಮೈದಳೆಯಬೇಕು. ಸಾಹಿತ್ಯದ ಇರೋ ಬರೋ ಪದಗಳನ್ನೆಲ್ಲಾ ಜಾಲಾಡಿಬಿಡುವ ನಿಮ್ಮ ಶತಪ್ರಯತ್ನದಲ್ಲಿ ನನ್ನ ಕುರಿತಾದ ಹಾಡಿಗೆ ಒಂದಷ್ಟು ನವೀನ ಪದಗಳು ಶೋಧವಾಗಬೇಕು. ಇದು ಕಾಯ್ಕಿಣಿ ಕವಿತೆಗಳ ಜತೆ ಪ್ರಣಯ. ನೀವು ಬರೆದ ಕವಿತೆಗಳನ್ನು ಓದುವಾಗ, ಹೀಗನಿಸ್ತಿದೆ ಮತ್ತೆ ಮತ್ತೆ ಮೋಹವಾಗಿ...

ನಿಮ್ಮ ಕವಿತೆಗಳ ಸಾಲುಗಳೇ ಒಂದಕ್ಕಿಂದ ಒಂದು ಸೊಗಸು. ಅಲ್ಲಾ ಅಷ್ಟಕ್ಕೂ ನಿಮ್ಮ ಪದಪ್ರಯೋಗಗಳ ಚಮತ್ಕಾರಕ್ಕೆ ಹಸಿಯಾಗದ ಮನಸುಗಳುಂಟಾ? ನೀವು ಕಟ್ಟಿಕೊಡುವ ಕವನದ ಧಾಟಿಗೆ ಮಧುರ ಯಾತನೆಯಲ್ಲಿ ನಲುಗಲು ಇಚ್ಛಿಸದ ಹೃದಯಗಳುಂಟಾ?

Jayanth Kaikini, write a poem on me

ಕಾಯ್ಕಿಣಿ ಸೃಷ್ಟಿಯಲ್ಲಿ ರೂಪಸಿಯ ಜನನವಾಗಿದೆ.. ಮುಗುಳು ನಗುತ್ತಿದ್ದಾಳೆ ಮೋಹಕವಾಗಿ..... ಹುಚ್ಚು ಹಿಡಿಸುತಿದೆ ಕಾಯ್ಕಿಣಿ ಪದಪ್ರಯೋಗ.. ನಾನಂತೂ ನಿಮ್ಮ ಸಾಲುಗಳಲ್ಲೇ ಅಲೆಮಾರಿಯಾಗಿಬಿಡುತ್ತೇನೆ...
ಸಂಗಾತಿಯ ಅಪ್ಪುಗೆಯಲ್ಲಿದ್ದುಕೊಂಡು ಆ ಹಾಡುಗಳನ್ನು ಕೇಳುವ ಮಜಾನೇ ಬೇರೆ..

ಭಾಷೆ ಮತ್ತು ಸಾಹಿತ್ಯದಿಂದ ಅದ್ಭುತ ಸೃಷ್ಟಿ: ಜಯಂತ್ ಕಾಯ್ಕಿಣಿಭಾಷೆ ಮತ್ತು ಸಾಹಿತ್ಯದಿಂದ ಅದ್ಭುತ ಸೃಷ್ಟಿ: ಜಯಂತ್ ಕಾಯ್ಕಿಣಿ

ನಿಮ್ಮ ಕವನಗಳು ಹೇಗಿವೆ ಗೊತ್ತಾ? ಅವನ್ನು ಕೇಳ್ತಾ ಇದ್ರೆ..
ಇಷಾರೆಯಾ ನೀನೀಡು ಹುಷಾರಾಗುವೆ.. ಅಂತ ಬೇಡಿಕೆ ಇಡುವ ಇಲ್ಲೇ ಸಮೀಪವಿರಬಹುದಾ ಅನ್ನೋ ಅನುಮಾನ...

ನಾಚಿವೆ ನಿನ್ನನೂ ನೋಡಿ ಹೂವಿನಾ ಅಂಗಡಿ..
ಮೆಲ್ಲಗೆ ಕಣ್ಣಲಿ ಗೀಚು ಮುತ್ತಿನ ಮುನ್ನುಡಿ ಅಂತ ಬೇಡಿಕೆಯೊಂದು ಬಂದಾಗ ತೋಚಿದ್ದು ಗೀಚುವ ಗೀಳು.. ಆದ್ರೆ ಅವ ಬಂದೇ ಬರುವನೆಂಬ ನಿರೀಕ್ಷೆ...

ಹಾಗೆ ಕನವರಿಸುವ ಹುಡುಗನಿಗೆ ತಂಗಾಳಿಯಲ್ಲಿ ಬಂದು ಪಿಸುಗುಡುವ ಆಸೆ...
ಹೊಗಳಿಕೆಗೆ ಮನಸೋಲುವ ಪರಿಯೇ ಇಷಾರೆಯಲ್ಲವೇ

ಬಡಪಾಯಿಯ ಮನರಂಜನೆ ಬರೀ ಇಂಥವೇ...
ಹುಚ್ಚು ಪ್ರೀತಿಯ ನಶೆಯೇರಿಸಿಕೊಂಡ ಬಡಪಾಯಿ ಹುಡುಗನಿಗೆ ಅದೇ ಮನರಂಜನೆ..

ಮನದಲ್ಲಿ ಹುದುಗಿದ್ದ ಕವನ ಅರಳಿಸಿದ ಸಿಂಗಪುರಮನದಲ್ಲಿ ಹುದುಗಿದ್ದ ಕವನ ಅರಳಿಸಿದ ಸಿಂಗಪುರ

ನಡು ಬೀದಿಯಾ ಜ್ಞಾನೋದಯ... ಬರೀ ಇಂಥವೇ
ಹಾಗೇ ನಡುಬೀದಿಯಲ್ಲೇ ಜ್ಞಾಪಿಸಿಕೊಳ್ಳುವ ಬುದ್ಧನ ಮರುಳೇನು.. ಅದು ಸೊಗಸು ಹುಡುಗಾ...

ಇನ್ನು ಅವನದು ಅಂಥಾ ಭಾವನಾ ಲೋಕ ಅಷ್ಟೊಂದು ತಾಜಾ ತಾಜಾ ಆಗಿರಬೇಕಾದ್ರೆ, ಹೆಣ್ಣು ಹಸಿಯಾಗದೇ ಇರ್ತಾಳಾ? ನನಗೂ ಇಂಥಾ ಕನವರಿಕೆಗಳು ಬೀಳೋದ್ರಲ್ಲಿ ಅಚ್ಚರಿಯೇನಿದೆ?

Jayanth Kaikini, write a poem on me

ಕನ್ನಡಿ ಇಲ್ಲದ ಊರಿನಲಿ ಕಣ್ಣಿಗೆ ಬಿದ್ದವ ನೀನು..
ಅಚ್ಚರಿಯೇನಿದೆ ಈ ಕ್ಷಣವೇ ನಿನ್ನವಳಾದರೆ ನಾನು..
ಕುತೂಹಲ ಒಂದಲ್ಲ, ನೂರಾರಿವೆ..
ತಲುಪಿಲ್ಲದಾ ಕರೆಯೆಲ್ಲವೂ ನಿಂದೇ ಅಲ್ಲವೇ..

ಪ್ರೀತಿಯಲ್ಲಿ ಮೂಡುವ ಕುತೂಹಲವೇ ಅಂಥವು.. ಪೂರ್ಣವಿರಾಮವಿಲ್ಲದ, ಕೊನೆಚುಕ್ಕೆಯಿಲ್ಲದ ಕುತೂಹಲಗಳವು.. ನಿನಗರ್ಥವಾದೀತೇ ಗೆಳೆಯಾ?

ಮುಂಗಾರಿನ ಅಭಿಷೇಕಕ್ಕೆ ಕಾದಿದೆ ನನ್ನ ಮೈಮನಮುಂಗಾರಿನ ಅಭಿಷೇಕಕ್ಕೆ ಕಾದಿದೆ ನನ್ನ ಮೈಮನ

ನನ್ನ ಸ್ವಪ್ನದಾ ಬೀದಿಯಲ್ಲಿಯಾ ಜಾಹಿರಾತು ನೀನು..
ದಾರಿತಪ್ಪಿಸುವ ಜಾಹಿರಾತುಗಳೇ ಅಚ್ಚುಮೆಚ್ಚು ಈ ಹುಡುಗಿಗೆ...

ಎಷ್ಟೇ ರೀತಿಯಿಂದ ಪ್ರೀತಿಯ ಹೊರಹೊಮ್ಮಿಸಿದ್ರೂ ಕೊನೆಗುಳಿವ ಶೇಷವೊಂದೇ ಗೆಳೆಯಾ...
ಅನುರಾಗದ ಅನುವಾದವು ಕಷ್ಟ ಅಲ್ಲವೇ...

ಕಾಯ್ಕಿಣಿ ರೂಪಸಿ ಹಾಡಿಗೆ ಮನಸೋತಿದ್ದೇನೆ. ಕನ್ನಡದ ಅಂದಗೆಡಿಸುವ ವಿವಸ್ತ್ರಗೊಳಿಸುವ ಅದೆಷ್ಟೋ ಹುಚ್ಚು ಸಾಹಿತ್ಯಗಳಿಗೆ ಹೆಜ್ಜೆ ಹಾಕ್ತೇವೆ. ಅಂಥಾದ್ದರ ಮಧ್ಯೆ ಅಪರೂಪಕ್ಕೊಮ್ಮೆ ಹಾಯಾಗಿ ಬೀಸುವ ಮಂದಮಾರುತ ಕಾಯ್ಕಿಣಿ ಸಾಹಿತ್ಯ.. ಕನ್ನಡವನ್ನು ಪ್ರೀತಿಸುವ ಪ್ರತಿಯೊಬ್ಬರಿಗೂ ಆಪ್ತವಾಗುವ, ಇದು ನನ್ನದೇ ಭಾವನೆಗಳಾ ಅಂತನಿಸುವ ಹಾಡುಗಳಿವು... ಅದಕ್ಕೇ ಅಂಥಾ ಒಂದು ಬಯಕೆ ಮೂಡಿದ್ದು ಕಾಯ್ಕಿಣಿ ಸರ್, ಹಾಗೇ ನನ್ಮೇಲೂ ಒಂದು ಕವಿತೆ ಗೀಚಿ ಬಿಡಿ.

English summary
Jayanth Kaikini's poems are ever green and ever refreshing. It is a pleasure to recite his Kannada poems. It gives us a feeling that he has written the poem on everyone of us. A lovely bird asks him to write a beautiful poem in it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X