ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಯಕ್ತಿಚಿತ್ರಣ ಕಟ್ಟಿಕೊಡುವಲ್ಲಿ ನಿಸಾರ್ ಸಾಧಿಸಿದ ಕೌಶಲ್ಯ

By Prasad
|
Google Oneindia Kannada News

K.S. Nisar Ahmed
ಕೆ.ಎಸ್.ನಿಸಾರ್ ಅಹಮದ್ ತಮ್ಮ ಸಮಕಾಲೀನ ಹಿರಿಯ ಲೇಖಕ ಮಾಸ್ತಿ ವೆಂಕಟೇಶ ಆಯ್ಯಂಗಾರ್ ಅವರನ್ನು ಕುರಿತು ಬರೆದ ಕವಿತೆ “ಮಾಸ್ತಿ”. ವ್ಯಕ್ತಿ ಚಿತ್ರಣ ಕಟ್ಟಿ ಕೂಡುವಲ್ಲಿ ನಿಸಾರ್ ಸಾಧಿಸಿದ ಕೌಶಲ್ಯವನ್ನು ಈ ಕವಿತೆಯಲ್ಲಿ ಕಾಣಬಹುದು. ಇದು ಮಾಸ್ತಿಯವರ ಒಂದು ದಿನದ ದಿನಚರಿಯನ್ನು ಹಿನ್ನೆಲೆಯಾಗಿಟ್ಟುಕೊಂಡ ಕವಿತೆ.

ಕೇವಲ ದಿನದ ದಿನಚರಿಗೆ ಮಾತ್ರ ಸೀಮಿತಗೊಳ್ಳದೆ ಮಾಸ್ತಿಯವರ ಸಂಪೂರ್ಣ ಬದುಕು, ಸ್ವಭಾವ, ವ್ಯಕ್ತಿತ್ವ, ನಡೆನುಡಿಗಳ ರೂಪ ಸ್ವರೂಪವನ್ನು ವಿವಿಧ ಕೋನಗಳಿಂದ ಅಳೆದು ಕವಿ ನಿಸಾರ್ ಕೊಡುತ್ತಾರೆ. ಈ ಕವಿತೆಯ ನಿರೂಪಕನಿಗೆ ಮಾಸ್ತಿ ಗಾಂಧಿಬಜಾರಿನಲ್ಲಿ ಎದುರಾಗುವ ಪ್ರಕ್ರಿಯೆಯು ಸೋಜಿಗದಂತಿದೆ. ಅವರ ಸಮಯ ಪರಿಪಾಲನೆಯಲ್ಲಿ ತೋರಿಸಿಕೊಡುತ್ತದೆ. ಮಾಸ್ತಿ ಎದುರಾಗಿ ಹಾದು ಹೋದಾಗಲೆಲ್ಲ ಹಳ್ಳಿಗಾಡಿನ ಕಡೆಯ ಸುಪ್ರಸನ್ನತೆ ನಗರಕ್ಕೆ ಸಂದಂತೆ ಭಾಸವಾಗುವುದನ್ನು ಸೂಚಿಸುತ್ತಾರೆ.

ಮಾಸ್ತಿ ವಾಸವಾಗಿದ್ದ ಬೆಂಗಳೂರಿನ ಗವಿಪುರಂ ಹಾಗೂ ಸಂಜೆ ಅವರ ತಮ್ಮ ಗೆಳೆಯರ ಸಂಸರ್ಗಕ್ಕಾಗಿ ನಡೆದು ಬರುತ್ತಿದ್ದ ಗಾಂಧಿಬಜಾರಿನ ಕ್ಲಬ್ಬನ್ನು ಈ ಕಾಲದ ಓದುಗನ ಕಣ್ಣಿಗೆ ಕಟ್ಟುವಂತೆ ಕವಿ ಚಿತ್ರಿಸುತ್ತಾರೆ. ಮಾಸ್ತಿಯವರನ್ನು ನೋಡುವುದೆಂದರೆ ಕಳೆದುಹೋದ ಜೀವನದೊಂದು ರೀತಿಯನ್ನು ಹಾಗೂ ಸರಳ ಸದಭಿರುಚಿಯ ಖ್ಯಾತಿಯನ್ನು ಸ್ಪರ್ಶಿಸಿದಂತೆ ಎಂದು ಹೇಳುವ ಮೂಲಕ ಅವರ ಬಗೆಗಿನ ಗೌರವ ಇಮ್ಮಡಿಗೊಳ್ಳುವಂತೆ ನಿಸಾರ್ ಈ ಕವಿತೆಯನ್ನು ಬರೆದಿದ್ದಾರೆ.

English summary
Pen portrait of Masti Venkatesh Iyengar in poetic way by Nisar Ahmed. It is absolute pleasure to read Nisar's poem on Masti and how he gives picture of Gandhi Bazaar, Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X