ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆಯ ಮಾಧುರ್ಯ ಮತ್ತು ಕೌಟುಂಬಿಕ ಬಂಧನ

By Shami
|
Google Oneindia Kannada News

Prabhuprasad Naduthota, Sringeri
ಮೇ 15, ಶನಿವಾರ ವಿಶ್ವ ಕುಟುಂಬ ದಿನ. ತನ್ನಿಮಿತ್ತ ಒಂದು ಕವನ.

* ಪ್ರಭುಪ್ರಸಾದ್ ನಡುತೋಟ, ಶೃಂಗೇರಿ

ಆತನ ಮೌನವಾದ ಕಣ್ಣೋಟದ ಹಿಮ್ಮೇಳದಲಿ ಸಾವಿರ ಮಾತುಗಳ ಮೆರವಣಿಗೆ
ಆಕೆಯ ಕಣ್ಣಂಚಿನಲಿ ಜಾರುತಿರುವ ಹನಿಯಲಿ ನೋವು-ನಲಿವಿನ ದೀವಳಿಗೆ
ಹುಡುಕಹೋದರೆ ಪ್ರತಿ ಮಾತು-ನೋಟಗಳ ಹಿಂದಡಗಿರುವ ಅರ್ಥ
ತೆಪ್ಪದಲಿ ವಿಶಾಲವಾದ ಸಾಗರವ ದಾಟಹೋದಂತೆ ವ್ಯರ್ಥ

"ನಾತಿಚರಾಮಿ" ವಚನದೊಡನೆ ಪ್ರಕೃತಿಯ ಕೈಪಿಡಿವ ಪುರುಷ
ನಡುವೆ ಮಂಗಳಘೋಷ, ಬಂಧುಮಿತ್ರರ ಸಂತೋಷ
"ಸಮ್ರಾಜ್ಞೀ ಭವ" ಹಾರೈಕೆಯೊಡನೆ ನವಜೀವನಕೆ ಕಾಲಿರಿಸಿಹಳು ಯುವತಿ
ಅವಳಾಗಲಿ ಪತಿಯ ಒಡತಿ, ನಲುಮೆಯ ಸಂಗಾತಿ, ಜಗಮೆಚ್ಚುವ ಗರತಿ

ಸರಸ ಜನನ, ವಿರಸ ಮರಣ, ಸಮರಸವೇ ಜೀವನವೆಂಬ ಕವಿವಾಣಿಯನು
ಅರಿತು ನೆಡೆದಾಗ ಸಲೀಸಾಗಿ ದಾಟಿಬಿಡಬಹುದು ಸಂಸಾರದ ಸಂತೆಯನು
ನಗುತ, ನಗಿಸುತ, ಅವುಗಳಿಂದಲೇ ನೋವ ಮರೆಸುತ
ಬಾಳುವುದರಲ್ಲಿಯೇ ಅಡಗಿದೆ ಜೀವನನದಿಯ ಮೂಲಸ್ರೋತ

ಒಬ್ಬರನೊಬ್ಬರು ಅರಿತು ನೆಡೆದಾಗ ಮದುವೆಯು ಬಂಧನವಲ್ಲ
ಪ್ರೀತಿಯಿಂದ ಜೊತೆಜೊತೆಯಲಿ ಸಾಗಿದಾಗ ಬಾಳಹಾದಿಯೆಂದೂ ರೂಕ್ಷವಲ್ಲ
ದೈಹಿಕದಿಂದ ದೈವಿಕದೆಡೆಗಿನ ಭಾವಲೀಲೆಯ ದಿವ್ಯಪರಿವರ್ತನೆ
ಆದಾಗ ನೆಚ್ಚಿ ಪರಮಾನಂದದಲಿರಿರೆಂದು ಹರಸುವನು ಭಗವಂತನೇ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X