ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಿರ್ಮಲೆ ಜೀವದ ಸೆಲೆ ನಮ್ಮಮ್ಮ
ಗದ್ದೆ ಕಚೇರಿ ಶಾಲೆ ಮನೆಮಠಗಳಲಿ ದುಡಿದು ಹಿಟ್ಟು ನಾದಿ ಹೊಟ್ಟೆಗ್ಹಾಕುವವಳು
ರುಂಡಗಳ
ಚೆಂಡಾಡುವ
ರಣಚೆಂಡಿಯಲ್ಲ
ರಕ್ತ
ಕುಡಿವ
ಕಾಳಿಯಲ್ಲ
ಬೊಬ್ಬಿರಿವ
ಗಾಳಿಯಲಿ
ಅಬ್ಬರದ
ಅಲೆಗಳಲಿ
ಹೂ
ನಗೆ
ಬೀರುವವಳು
ಚಂಚಲ
ಚಪಲೆಯಲ್ಲ
ವೆಂಕಟನ
ರಮಣಿಯಲ್ಲ
ವೀಣಾ
ವಾಣಿಯಲ್ಲ
ಸಂಸಾರದೀಜಲು
ನಾಲ್ಕಕ್ಷರ
ಕಲಿತವಳು
ಕಾಯಕವೇ
ಕೈಲಾಸವೆನುವವಳು
ವಿಶ್ವದ
ಒಗಟು
ಒಡೆಯುವವಳಲ್ಲ
ಅಧ್ಯಾತ್ಮ
ಅನುಭಾವವೆನುವವಳಲ್ಲ
ತನ್ನೊಡಲಲಿ
ಬೀಜ
ಮೊಳೆಸಿ
ನಮ್ಮನೆಲ್ಲ
ಹಡೆದು
ಸಾಕಿ
ಸಲಹುವವಳು
ಪಂಚಭೂತಗಳನರಿಯದೆ
ಗರ್ಭದಲಿ
ಹೊಸೆದು
ಜೀವ
ತುಂಬುವವಳಮ್ಮ
ಸಹನೆ
ಶಾಂತಲೆ
ಶೀತಲೆ
ಕೋಮಲೆ
ನಿರ್ಮಲೆ
ಜೀವದ
ಸೆಲೆ
ನಮ್ಮಮ್ಮ
Comments
Story first published: Saturday, May 8, 2010, 13:17 [IST]