ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಓದುವವನಿಗೆ ನಿಮ್ಮ ಸಹಾಯ ಬೇಕಾಗಿದೆ

By Prasad
|
Google Oneindia Kannada News

What is the meaning and difference between these words
ಪದಗಳ ಜೊತೆ ದಿನನಿತ್ಯ ಆಟವಾಡುವವರಿಗೆ, ತಮ್ಮಲ್ಲಿ ಹುದುಗಿರುವ ಭಾವನೆಗಳೊಂದಿಗೆ ಕಲ್ಪನೆಗಳನ್ನು ಬೆರೆಸಿ ಪದಗಳನ್ನು ಪೋಣಿಸಿ ಮುತ್ತಿನಹಾರ ಕಟ್ಟುವವರಿಗೆ ಇಲ್ಲಿದೆ ಒಂದು ಸವಾಲು. ಸಿಕಂದರಾಬಾದಿನ ಸುನೀಲ್ ಅನ್ನುವವರನ್ನು ಬಹುದಿನಗಳಿಂದ ಕಾಡಿಸುತ್ತಿರುವ ಕವನ, ಕವಿತೆ, ಕಾವ್ಯಗಳಲ್ಲಿ ಅವಿತಿರುವ ಪದಗಳ ಅರ್ಥವ್ಯತ್ಯಾಸ ತಿಳಿಯಬೇಕಾಗಿದೆ. ಅರ್ಥ ಗೊತ್ತಿಲ್ಲದಿದ್ದರೆ ಹುಡುಕಾಟ ಪ್ರಾರಂಭಿಸಿ. ಅರ್ಥ ಗೊತ್ತಿದ್ದರೆ ಪದ್ಯದ ರೂಪದಲ್ಲಿಯೋ ಹನಿಗವನದ ರೂಪದಲ್ಲಿಯೋ ಪ್ರಬಂಧದ ರೂಪದಲ್ಲಿಯೋ ಬರೆದು ತಿಳಿಸಿ.

ಅದಕ್ಕೂ ಮುಂಚೆ ಲೇಖಕರು ಏನು ಹೇಳುತ್ತಾರೋ ಓದಿರಿ.

ನನ್ನ ಸ್ವಂತ ಊರು ನೆಲಮಂಗಲ. ಕರ್ನಾಟಕದಿಂದ ಹೊರಡುವ ನಾನಾ ಪತ್ರಿಕೆಗಳನ್ನು ತಪ್ಪದೆ ಓದುವ ಹವ್ಯಾಸ ಇಟ್ಟುಕೊಂಡಿದ್ದೇನೆ. ಪತ್ರಿಕೆಗಳು ಮತ್ತು ಬ್ಲಾಗುಗಳಲ್ಲಿ ಆಗಾಗ ಕನ್ನಡ ಸಾಹಿತ್ಯಕ್ಕೆ ಪುಸ್ತಕಗಳಿಗೆ ಪ್ರಶಸ್ತಿಗಳಿಗೆ ಸಂಬಂಧಿಸಿದ ಲೇಖನ, ವರದಿ, ವಿಮರ್ಶೆ, ವ್ಯಾಖ್ಯಾನ, ಹಾಸ್ಯ ಮುಂತಾದ ಬರವಣಿಗೆಗಳಲ್ಲಿ ಈ ಕೆಳಗೆ ಬರೆದ ಪದಗಳು ತಪ್ಪದೆ ಇಣಕುತ್ತವೆ. ಅವುಗಳನ್ನು ನಿತ್ಯ ಒಂದಲ್ಲ ಒಂದು ಕಡೆ ಓದಬೇಕಾಗುತ್ತದೆ ನನಗೆ. ನೀವು ಕೂಡ ಓದೇಓದಿರುತ್ತೀರಿ. ಈ ಪದಗಳ ನಡುವೆ ಇರುವ ಸ್ಪೆಸಿಫಿಕ್ ವ್ಯತ್ಯಾಸ ನನಗೆ ಗೊತ್ತಿಲ್ಲ. ತಿಳಿಯುವುದಕ್ಕೆ ಇಷ್ಟ. ತಿಳಿದವರು ದಯಮಾಡಿ ಅದರ ಬಗ್ಗೆ ಬರೆದು ತಿಳಿಸಿದರೆ ನನಗೆ ಗೊತ್ತಾಗುತ್ತದೆ. ಪ್ಲೀಸ್ ಹೆಲ್ಪ್, ಇದು ನನ್ನನ್ನು ತುಂಬ ವರ್ಷಗಳಿಂದ ಕಾಡುತ್ತಿರುವ ಗಂಭೀರವಾದ ಜಿಜ್ಞಾಸೆ.

ಕವನ
ಕವಿತೆ
ಕಾವ್ಯ
ಹನಿಗವನ
ಗೀತೆ
ಷಟ್ಪದಿ
ಪದ್ಯ
ವಚನ
ತ್ರಿಪದಿ
ಕೀರ್ತನೆ
ಚುಟುಕ
ಇತ್ಯಾದಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X