ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಲೆಯ ಮೇಲೊಂದು ಸೂರು ಬೇಕೆಂದು

By * ಮೋಹನಚಂದ್ ಪಾಟೀಲ್
|
Google Oneindia Kannada News

Mohanchand Patil
ಹಾಗೂ ಹೀಗೂ ಒಂದು ನೌಕರಿ ಗಳಿಸಿ
ದೇಹ ದಂಡಿಸಿ ಒಂದಿಷ್ಟು ಹಣ ಕೂಡಿಸಿ
ಸುತ್ತಾಡಿದೆ ಊರೆಲ್ಲ ಬಡಾವಣೆಗಳೆಲ್ಲ
ಕೇಳುತ್ತ ಕಂಡ ಕಂಡ ದಳ್ಳಾಳಿಗಳಿಗೆಲ್ಲ
ಇಷ್ಟಿದ್ದರೆ ಬೇಕು ಅಷ್ಟಿದ್ದರೆ ಬೇಡ
ಕಾಲು ಹಾಸಿಗೆ ಹೊರಗೆ ಹಾಕಿಸಬೇಡ
ಕೂಡಿಟ್ಟ ಗಂಟಿಗೆ ಎಲ್ಲ ಹೊಂದಿಸುತ್ತ
ಎಲ್ಲ ಕಡೆ ಹಗಲಿರುಳು ಹುಡುಕುತ್ತ
ತಲೆಯ ಮೇಲೊಂದು ಸೂರು ಬೇಕೆಂದು
ಸಿಕ್ಸಟೀ ಬೈ ಫಾರ್ಟಿ ಸೈಟ್ ಸಾಕೆಂದು

ಅಂತೂ ಇಂತೂ ಕೊನೆಗೊಂದು ಕಡೆ ಸಿಕ್ಕಿತು
ಕೊಂಡು ಕಾಲಿಟ್ಟ ಕೂಡಲೆ ನೋಡಿ ನಕ್ಕಿತು
ಇಲ್ಲಿ ಹಜಾರ ಅಲ್ಲಿ ಮಲಗು ಕೋಣೆ
ಇಲ್ಲಿ ಬಚ್ಚಲು ಮನೆ ಅಲ್ಲಿ ಅಡುಗೆ ಕೋಣೆ
ಗಾಳಿಯಲಿ ಕೈ ಮಾಡಿ ಇಲ್ಲಿ ಪಂಖ ಅಲ್ಲಿ ಲೈಟು
ಇಲ್ಲಿ ಮಾಡು ಕಿಡಕಿ ಅಲ್ಲಿ ಕಪಾಟು
ಇಲ್ಲಿ ದೇವರ ಕೋಣೆ ಎನುತ ಮಕ್ಕಳು ಮಡದಿ
ಈ ನೆಲದಮೇಲೋಡಿದಾಗ ಅದಕೇನೋ ನೆಮ್ಮದಿ
ಇಲ್ಲಿ ಅದು ಬೇಡ ಅಲ್ಲಿ ಇದು ಬೇಕು ಎಂದು
ಅವರು ಹಟಹಿಡಿದಾಗ ಸುಮ್ಮನಿರುವುದು ನೊಂದು

ಕಾಯುತಿದೆ ನಮಗಾಗಿ ಮಳೆಗಾಳಿ ಬಿಸಿಲೆನದೆ
ನೆರೆಯವರು ಚೆಲ್ಲಿದ ಕಸದಲಿ ಬಳಲದೆ
ಅಲ್ಲಲ್ಲಿ ಹಸಿರು ಹುಲ್ಲಿನಲಿ ನಳನಳಿಸುತ
ನಮ್ಮನೆಯನು ಹೊತ್ತೇನೆಂದು ಕಾಯುತ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X