ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ಸನಿಹದ ದಾರಿ ಗಾವುದ ದೂರ

By Staff
|
Google Oneindia Kannada News

So near but so far!
* ಎಸ್. ಕೆ. ಮಧುಸೂದನ, ಹೊಸದುರ್ಗ

ಹಾ! ತೊರೆದ ಒಲುಮೆ ಜೀವಕೆ ತಾರದ ಬಲುಮೆ?!
ಒಳಮೊರೆತ ಮೊಗೆದೊಗೆದ ಜೀವಸರಕು
ಒಳದನಿಗೆ ಕಿವಿಗೊಡದ ಅರಸಿ ತೊರೆದ ಅರಸೊತ್ತಿಗೆ
ಎನಿತೋ ಗರಿಗೆದರಿ ಕಾಲ ಕರುಣಿಸಿದ ಕರುಳದನಿ
ಮರವಾಗಿಹಿಗ್ಗಿ ದಾರಿದೂರವಹಾರಿ ಕಿವಿಗೊಲಿದ ವರವೆ!
ದನಿತೆಗೆದು ಕೋರದ ಒಳಗಣ್ಣ ಇನಿದನಿಗೆ ಸಂದ ಮನೋರಥ
ಇಹತೀರ್ಥಯಾತ್ರೆ ನೆಪ ನೇಪಥ್ಯದ ಸೂತ್ರಕಾರ!
ಮನ ಮಾತುತಿದಿಯೊತ್ತಿ ಹಾಯಿದೋಣಿಗೆ ಬಿಗಿದ ಲಂಗರು
ದಿನದಿನದ ಪಯಣಕೆ ಸಜ್ಜುಗೊಳಿಸಿದ ತಿಳಿಯೊಲವು
ಮಾಸದ ನೆನಪೆ ತುಂಬು ಒನಪೆ ದಿನಂಪ್ರತಿಯ ನೂಲು
ಒಂದೆರೆಡೆ ನಿಟ್ಟುಸಿರು ಕೆನೆತುಂಬ ಪ್ರೀತಿಹರಳು
ಸಂಪ್ರತಿಯ ಸಂವಾದ ಪಡೆದ ರಹದಾರಿ ದೂರನಡೆ ನೂರು
ಕಾಲದೇಶ ಮೇರೆಮೆರೆದ ಮನಮೂಸೆಯ ಪುಟಕ್ಕಿಟ್ಟ ಕರುಳಚಿನ್ನ
ಕೋಟಿತೀರ್ಥದ ಸಿಂಚನ ಕಡಲತಡಿಯ ವಿಹಂಗಮನ
ಸ್ಫಟಿಕರಾಮನ ಪಾದಧೂಳಿಯ ಹಣೆಬರಹ
ಪ್ರೀತಿ ಕಟ್ಟಿದ ಸೇತು ಮಣ್ಣಮಗಳು ಸೀತೆ ಸಮಾಗಮ
ಒಡಮೂಡದ ಒಕ್ಕೂರಲ ದನಿಯ ದೂರದಾರಿಗೆ ಅಡೆಯತಡೆ
ಬತ್ತಲಾರದಗಂಗೆ ದಿನದಿನದ ಕರೆ ನಿಂತು ಒಲಿದ ವಿಶ್ವ
ಅರಳಿ ನಿಂತ ಬೊಗಸೆ ತುಂಬ ಪ್ರೀತಿ ಹೂವು ಕಾತರವೆ ಫಲ?!
ಭಾವದೇಣಿಗೆ ಕಟ್ಟಡದಗೊಡವೆ ಸರಿಸಿನೋಡಬಹುದೆ ಮೊಗ?
ನಿಗಿ ಕೆಂಡ ಬಾಣಲೆ ಮುಖಕಾವು ಒರೆಸಿದ ಬೆವರಹನಿ
ಒಲಿಯಲನುವೆ ಒಡಲತುಂಗೆ ಭಾವತರಂಗ ಅಂತರಗಂಗೆ
ಒಂದು ಸನಿಹದ ಹಾದಿ ಗಾವುದ ದೂರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X