ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನಾದರೇನು ನಾನು?ನನ್ನೊಳಗೇತಾನೆ ನಾನು?

By ಅಂಜಲಿ ರಾಮಣ್ಣ, ಬೆಂಗಳೂರು
|
Google Oneindia Kannada News

Anjali Ramannaನಾನು ಏನು? ನಾನು ಅದೇನು? ಹೂಂ, ನಾನು ಇದೇನು? ಓಹ್, ನಾನು ಏನು?
ನಾನು ನನ್ನ ಅಮ್ಮನ ಹಾಗೇನು? ಎಣ್ಣೆ ಸವರಿದ ಬೆರಳುಗಳ ನೆಟಕೆ ಮುರಿವನೇನು?
ರಾತ್ರಿ ಅನ್ನದಲ್ಲಿ ಕಲೆಸಿಟ್ಟ ಮೊಸರನ್ನ ಹುಳಿಯಾದರೇನು? ಹಸಿವಿಗಿಂತಿನ್ನ್ಯಾವ ರುಚಿ ಎನ್ನುವೆನೇನು?

ಕಾಡುಮೇಡು ಎಂದರೆ ಡಿಸ್ಕವರಿ ಚ್ಯಾನಲ್ ಅನ್ನುವ ಮಗನ ಅಮ್ಮನೇನು?
ತೋಳಿನ ಬಿಸಿಯೂ ಬಿಗಿಯುವ ಬಂಧ-ಬಂಧನ ಎಂದುಕೊಳ್ಳುವ ಮಡದಿಯೇನು?
ಮುಡಿ ಹಿಡಿಯದೆಯೂ ಜಿಗಿಯಲು ಬಿಡದೆ ಜಗ್ಗಾಡುವ ಅತ್ತೆಮಾವರ ಸೊಸೆಯೇನು?

ಮೋಹಕ್ಕೆ ಸಾವಿರ ಕಣ್ಣು,ನವಿಲಗರಿಯೊಳಗೆ ಒಂದೇ ನೀಲಿ ಕಣ್ಣು ಎಂದು ಅರಿತವಳೇನು?
ಇಲ್ಲಇಲ್ಲಗಳ ಬಾಲಂಗೋಚಿ ಹಿಡಿದೆಳೆದಾಗ ಕೊನೆಗೊಮ್ಮೆ ಏನೂ ಇಲ್ಲ ಎಂದು ತಿಳಿದವಳೇನು?
ಸುಖೀ ಸಂಸಾರದ ಸ್ಪರ್ಧೆಯ ಸ್ಪರ್ಧಾಳುವೇನು?

ನಾನು ಏನು? ಹುಡುಕಾಟ ತಡಕಾಟಗಳ ಗೊಡವೆ ಬೇಡ; ನಾನು ಏನು? ಅದೂ ಬೇಡ
ರಸ್ತೆಯ ಎದೆಮೇಲೆ ಕನ್ನಡಿ ಸರಿ ಮಾಡುವ ದೂರ್ವಾಸನಿಂದ ಬೆಚ್ಚಗೆ ಬಚಾವು ಮಾಡುವ;
ಮಿತ್ರನ, ಮಿತ್ರನ ಪತ್ರದ ನಾಸ್ಟ್ಯಾಲ್ಜಿಯಾ ನಾನು?

ನಾನು ಏನು? ನಾನು ಏನು? ಏನಾದರೇನು ನಾನು? ನನ್ನೊಳಗೇತಾನೆ ನಾನು?
ಕಡಲತಳಕ್ಕೆ ಹುಟ್ಟುವ ಮುತ್ತಿನ ಕಥೆ ಆದೀತಾದರೂ ಹೇಗೆತಾನೆ ವ್ಯಥೆ?!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X