ಹೇಳ್ಕೊಳೋಕೊಂದೂರು,ಹೇಳ್ ಕ್ಕೊಳ್ಳೋಕ್ ಒಂಚೂರು
1
ಲಕಲಕಿಸುವ
ಈ
ನಗರಕ್ಕೊಂದು
ಬೆದರಿದ
ಬೆದರುಗೊಂಬೆ
ಬೇಕು.
ಇಲ್ಲಾ
ದೃಷ್ಟಿಯಾದೀತು
ಅಥವಾ
ನಿಮ್ಮ
ದೃಷ್ಟಿ
ಹೋದೀತು
.
ಕಣ್ಣುಜ್ಜಿ
ನೋಡಿಕೊಳ್ಳಿ
,
ಅಗೋ
...
ಆ
ಗೊಂಬೆಯೂ
ಮಾರಾಟವಾಯಿತು
!
2
ಇದು
ಉದ್ಯೋಗ
ಪರ್ವದ
ಭಾಗ
.
ದ್ಯೂತ
ಪ್ರಸಂಗ
.
ತನ್ನನ್ನೇ
ಒತ್ತೆಯಿಟ್ಟು
ಸೋತ
ರಾಯನಿಗೆ
ಇನ್ನೊಬ್ಬಳ
ಒತ್ತೆಯಿಡಲು
ಅಧಿಕಾರವಿದೆಯೆ?
ಓಲೇಲಯ್ಯಾ
ಐಸಾ,
ಎಳೀರಿ
ಸೀರೆ,
ಎಸೆಯಿರಿ
ಪೈಸಾ
'ಗಿನ್ನಿಸ್
ದಾಖಲೆಗೆ
ಇನ್ನೊಂಚೂರು'
ಅಂದ
ಕೃಷ್ಣಾ
ಮಾಲ್
ಸೀರೆ
ಸೆರಗು
ಎಷ್ಟು
ಚೆಂದ
!
ಹೋ
ಅದೋ
ಮತ್ತೆ
ದಾಳ,
ಗಾಳ,
ಗೆದ್ದೆವು
,
ಮನೆಹಾಳ.
ಸೋತವರಿಗೆ
ಹನ್ನೆರಡು
ವರ್ಷ
ಹಳ್ಳಿವಾಸ
ಗೆದ್ದವರಿಗೊಂದು
ವರ್ಷ
ನಗರದಜ್ಞಾತವಾಸ
!
3
ಗಲಗಲ
ಅಲುಗುತ್ತಿದೆ
ಈ
ನಗರ
ಬೆಳೆದು
ಅಗಲಗಲ
ಜಗದಗಲ.
ಇವತ್ತು
ಬರ್ಲಾ,
ನಾಳೆ
ಆಗಲ್ಲ
ಪೈನ್ಕಿಲ್ಲರ್
ಮಾತ್ರೆ
ತರ್ಲಾ,
ಸಂಬಳ
ಸಾಕಾಗಲ್ಲ
ಆ
ಓನರ್
ಸರಿಯಿಲ್ಲ,
ನೆಟ್
ಕನೆಕ್ಟ್
ಆ..ಗ್ತಿ..ಲ್ಲಾ..
ಅಮ್ಮ
ಫೋನ್
ಮಾಡಿ
ಅಂದಳು,
ಚೆನ್ನಾಗಿ
ಬೆಳೆದಿದೆ
ಹಾಗಲ,
ಕಳಿಸಲಾ?
4
ಮೊನ್ನೆ
ಬಂದವಳು
ಅಂದಳು-
ಹೌದು,
ಗದಗುಡುತ್ತಿದೆ
ಶಹರ
ನಗ
ತುಂಬಿದ
ನಗರ
ತುಯ್ಯುತಿರುವ
ಸಾಗರ.
ಈ
ನಗರಿಗೆ
ಹತ್ತಾರು
ಕಂಪನಾಂಕ
ಅಂಕ,
ಬಿಂಕ,
ಎಲ್ಲದಕ್ಕೂ
ಸುಂಕ
ಇಲ್ಯಾಕೆ
ಊದ್ತೀಯೋ
ಶಂಖ?
ನಾನಂದೆ-
ಇದೋ
ಮೂಗು
ಹಿಡಿದೆ
ಅಮ್ಮಾ,
ಕಣ್ಮುಚ್ಚು
ಈ
ನಗರವ
ಕೊಂಚ
ಕಲಕಿಸಿದೆ
ಕುಡಿದುಬಿಡು.