ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಡುಗಿ ಬೇಕಾಗಿದ್ದಾಳೆ,ಸಿಕ್ಕರೆ ತಿಳಿಸಿ

By Staff
|
Google Oneindia Kannada News

ಇದೇನು ತಮಾಷೆಯ ಕವನವಲ್ಲ. ಸಿಂಗಲ್ ಪ್ರೊಫೈಲ್ ಹೊಂದಿರುವ ಲಲನೆಯೋರ್ವಳು ಹೈಲಿ ಡಿಸ್ ಆರ್ಗನೈಜ್ಡ್ ಸೆಕ್ಟರ್ ಗೆ ಸೇರಿದ ಗಂಡಿಗೆ ತತ್ ಕ್ಷಣ ಬೇಕಾಗಿದ್ದಾಳೆ. ಅವಳ ಫುಲ್ ಪ್ರೊಫೈಲ್ ಅನ್ನು ವರ್ಣಿಸಲು ತೆರೆದಿರುವ ಎಲ್ಲ ಫೀಲ್ಡ್ ಗಳನ್ನು ಭರ್ತಿ ಮಾಡಲಾಗಿದೆ. ಆಸಕ್ತರು ಇಮೇಲ್ ಮಾಡಿ - ಸಂಪಾದಕ

*ಮಲ್ಲಿಕಾರ್ಜುನ ಸಣ್ಣಪ್ಪನವರ


ಹುಡುಗಿ
ಬೇಕಾಗಿದ್ದಾಳೆ
ಇರಬೇಕು ತುಂಬಾ
ಸಿಂಪಲ್ !

ನಕ್ಕರೆ
ಗಲ್ಲದ ಮೇಲೆ
ಬೀಳಬೇಕು
ಡಿಂಪಲ್ !

ಅವಳ
ತಲೆಯಲ್ಲಿ ಇರಬೇಕು
ಪುಟ್ಟ ಪ್ರೊಸೆಸರ್
ಇಂಟೆಲ್ !

ಅವಳ
ರೂಪ-ಲಾವಣ್ಯ ಕಂಡು
ಬಾಯಿಬಿಡಬೇಕು
ಪಕ್ಕದ್ಮನೆ ಅಂಕಲ್ !

ಅವಳು
ಸ್ನಾನಕ್ಕೆ ಹಚ್ಚಬೇಕು
ದಿನಾ ಸೋಪು
ಸಿಂಥಾಲ್ !

ಅವಳ
ಅಂದ ಹೊಗಳುತ್ತಾ
ಕವಿಯಾಗಬೇಕು
ಮೆಂಟಲ್ !

ಎತ್ತರದಲ್ಲಿ
ಅವಳಾಗಿರಬೇಕು
ರಾಜಸ್ತಾನದ
ಕ್ಯಾಮೆಲ್ !

ಅವಳ
ಗಲ್ಲ ನೋಡಿ ನೆನಪಾಗಬೇಕು
ಕಾಶ್ಮೀರದ ಸಿಹಿ
ಆಪಲ್ !

ಅವಳು
ಬೀದಿಯಲ್ಲಿ ನಡೆದರೆ
ಕಾಮೆಂಟ್ರಿ ಹೇಳಬೇಕು
ಇಯಾನ್ ಚಾಪೆಲ್ !

ಮುಖದ ಮೇಲೆ
ಇರಲಿ ಒಂದೇ
ಒಂದು ಹರೆಯದ
ಪಿಂಪಲ್ !

ನಮ್ಮ ಪ್ರೀತಿಯೆಂಬ
ಧರ್ಮಕ್ಕೆ ಅವಳಾಗಬೇಕು
ಗೀತಾ-ಕುರಾನ್
ಬೈಬಲ್ !

ಅವಳು ಪ್ರೀತಿ
ಮೆಚ್ಚಿ ನಾ ಕಟ್ಟಬೇಕು
ಇನ್ನೊಂದು
ತಾಜ್ಮಹಲ್ !

ಎಲ್ಲದಕ್ಕೂ ಮೊದಲ
ಅವಶ್ಯಕತೆ
ಅವಳಾಗಿರಬೇಕು
ಸಿಂಗಲ್ !

ಇವಳೇನಾದರು
ನಿಮಗೆ ಸಿಕ್ಕರೆ
ನನ್ನ ಅಡ್ರೆಸ್‌ಗೆ ಮಾಡಿ
ಈ-ಮೇಲ್ !!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X