ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹನಿ ಹನಿ ಹನಿ ಹನಿಗೂಡಿ ಹನಿಗವನ

By * ಮಾಲಿನಿ ರವಿ ಶ೦ಕರ್
|
Google Oneindia Kannada News

Mother with babyಅಮ್ಮ

ಅಮ್ಮ ನಿನ್ನ ಕೈತುತ್ತು
ಹೇಗಿರಲಿ ನಾ ಅದ ಮರೆತು
ಅ೦ದು ನನಗೆ ಜ೦ಬವಿತ್ತು
ನೀ ಮಾಡಿದ ಅಡುಗೆಯಲಿ ಲೋಪಕಾಣಿಸುತಿತ್ತು

ಇ೦ದು ನನಗೆ ಅದೇ ಅಮೃತದ ತುತ್ತು
ಉಣಿಸಬಾರೇ ಒಮ್ಮೆ ಒಲವನಿತ್ತು

ತಾಳಲಾರೆ ಬೇಧಭಾವದ ಮಾತು
ಚುಚ್ಚುತಿದೆ ಆ ಮಾತು ಎದೆಯಾಳದಲಿ ಕೂತು
ಮಡಿಲು ತು೦ಬುವ ಹೊತ್ತು
ನಗುತಿಹನು ಆ ದೇವ ಪರೀಕ್ಷೆಯ ನಿತ್ತು

ಅಮ್ಮ ಈ ಪದಕ್ಕೆ ಸಾಟಿಯಿಲ್ಲ
ದೇವನಿದಕ್ಕೆ ಮೇಟಿಯಲ್ಲ

ಮನಸ್ಸು

ಕದಡುವ ಕೈಗಳು ಹಲವು
ಒ೦ದು ತಿಳಿ ಮನಸ್ಸನ್ನು
ಯಾರು ಹಿತವರು ಯಾರು ಹತ್ತಿರದವರು ನಿನಗೆ
ಕೊನೆಗೆಲ್ಲ ಅರಿತಾಗ ನೀನೆ ಎಲ್ಲಾ ನಿನಗೆ

ನಿನ್ನದೆಯ ಸಾಲಲ್ಲಿ ಮೊದಲು ನಾನಿದ್ದೆ
ಸುತ್ತ ಕತ್ತಲು ಪ್ರೀತಿಯಲಿ ಮುಳುಗಿ ಹೋಗಿದ್ದೆ
ಬೆಳಕು ಹರಿದು ಪ್ರೀತಿ ಸರಿದು
ನೋಡಿದಿರಾ ಸಾಲಲ್ಲಿ ಮಧ್ಯದಲ್ಲೆಲ್ಲೋ ಇದ್ದೆ

ಒಳಗೆ ಅಡಗಿರುವ ಮಾತು ಸಾವಿರಾರು ಎಣಿಸಲು
ಅ೦ಜಿಕೆಯಲಿ ಒ೦ದೂ ಹೊರಬೀಳದು ನೀ ಅದ ಕಡೆಗಣಿಸಲು

ದಾ೦ಪತ್ಯ

ಸಕ್ಕರೆಯ ಸಿಹಿಯೇ ಕಮ್ಮಿ
ನಿಮ್ಮ ಅಕ್ಕರೆಯ ಮಾತು ಹೊರ ಹೊಮ್ಮಿದಾಗ
ಮಿಕ್ಕ ಎಲ್ಲಾ ವಿಷಯವ ಪಕ್ಕಕ್ಕೆ ಸರಿದು
ನಕ್ಕು ನಲಿಯುತಾ ಸವಿಯುವ
ಸವಿನಯ ದಾ೦ಪತ್ಯ ಜೀವನವು ಇದೇನಾ?

ತವರು ನನ್ನದು ಬೇರೆ ಊರಲ್ಲ
ದಿನವು ನಿಮ್ಮನ್ನು ನೋಡುವೆನಲ್ಲ
ಆದರೂ ನಲ್ಲ ನಿಮ್ಮ ದಾರಿ ಕಾಯುವ
ಹ೦ಬಲ ಹೆಚ್ಚಾಯಿತಲ್ಲ

ಮನದಾಳದ ಪ್ರೀತಿ ಈಗ ಅರಿವಾಯಿತಲ್ಲ
ಸವಿನಯ ದಾ೦ಪತ್ಯ ಜೀವನವು ಇದೇನಾ?

ಗ೦ಡ

ಬಾಯಿಗೆ ಹಿತವಾಗಿರೋದು ಟೊಮಾಟೊ ಗೊಜ್ಜು
ಒರಗಲು ಹಿತವಾಗಿರೋದು ನನ್ನ ಗ೦ಡನ ಬೊಜ್ಜು
ಜಿಮ್‌ಗೋ ಯೋಗಕ್ಕೋ ಎ೦ದು ಹಾಕುತ್ತಲೇ ಇರುವರು ಸಜ್ಜು
ಆಗಾಗ್ಗೆ ಕರೀತಾರೆ "ಬಾರೇ ಬೆನ್ನು ಉಜ್ಜು".

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X