• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅವಳಲ್ಲಿಗೆ ಬರಲೇ ಇಲ್ಲ ಆ ಬೆಳಕು...

By Staff
|
ಪದ್ಯವೊಂದರಲ್ಲಿ - ‘ಸರಳ ರೇಖೆಯಲ್ಲಿ ಚಲಿಸುತ್ತದೆ ಬೆಳಕು/ಬಾಗು ವಕ್ರ ತಿರುವು ಸಾಧ್ಯವಿಲ್ಲ ಬೆಳಕಿಗೆ’ ಎನ್ನುವ ಪ್ರತಿಭಾ ನಂದಕುಮಾರ್‌ ಮಾತು ಎಷ್ಟೊಂದು ನಿಜ!Anjali Ramanna
  • ಅಂಜಲಿ ರಾಮಣ್ಣ, ಬೆಂಗಳೂರು

anjaliramanna@yahoo.com

ಅತ್ತ ಕಡೆ ದ್ರಾಕ್ಷಿ ಚಪ್ಪರ ಸೀಮೆಬದನೆ ಬಳ್ಳಿ

ಇತ್ತ ಕಡೆ ತಿಪ್ಪೆ ಗುಂಡಿ ಅದಕ್ಕಾತುಕೊಂಡ ಕೋಣೆಯ ಮೂಲೆಯಲ್ಲಿ

ಮಂಡಿ ಮುದುರಿ ತಲೆ ಕೆದರಿ ಕೆಂಪಾಗಿ ಕುಳಿತಿದ್ದ ಅವಳಲ್ಲಿಗೆ

ಬರಲೇ ಇಲ್ಲ ಆ ಬೆಳಕು. . .

ಗುಂಡಿಗೆ ಬಿದ್ದು ಚಪ್ಪರದಲ್ಲಿ ಹರಡಿ ಬಳ್ಳಿಯಲ್ಲಿ ಹರಿಯಲು

ಕಲಿತಿಲ್ಲವಲ್ಲ ಆ ಬೆಳಕು. . .

ಮುಂಬಾಗಿಲೇನೂ ಅಲ್ಲವಲ್ಲ ಸರಳ ರೇಖೆ

ನಾಲ್ಕೇ ಆದರೂ ಹತ್ತ ಬೇಕು ಮೆಟ್ಟಿಲು

ವರಾಂಡದಲ್ಲಿನ ಚಪ್ಪಲಿಯ ನಾತವನ್ನು ಮೆಟ್ಟಿ

ಲಿವಿಂಗ್‌ ರೂಮಿನ ಸೋಫಾ ಮೇಲೆ ಬಿದ್ದು ಒದ್ದಾಡಿ

ಡೈನಿಂಗ್‌ ಟೇಬಲ್‌ನ ಘಮಕ್ಕೆ ಮೂಗರಳಿಸಿ

ಓಹ್‌, ನಾನು ಬೆಳಕು ಬೆಡ್‌ರೂಮಿನಲ್ಲಿ ನನಗೇನು ಕೆಲಸ

ಎಂದು ಕೊರಳು ಕೊಂಕಿಸಿ

ಅಡುಗೆ ಮನೆಯ ಘಾಟಿಗೆ ಕೆಮ್ಮಾಗಿ

ಬಚ್ಚಲಲ್ಲಿ ಒಂದೆರಡು ಹಂಡೆ ಬರಿದು ಮಾಡಿ

ಹಿತ್ತಲ ಬಾಗಿಲ ಅಗಳಿ ತೆಗೆದು

ಒಗೆಯೋಕಲ್ಲಿನ ಮೇಲೆ ಮೈ ಕಾಯಿಸಿಕೊಂಡು

ಅವಳಿದ್ದ ಕೋಣೆಯ ಬಾಗಿಲ ಬಡಿಯಲೇ ಇಲ್ಲ

ಆ ಬೆಳಕು. . .

ಅದಕ್ಕೇ ಇರಬೇಕು ಅವರು ಹೇಳಿದ್ದು

ಬಾಗು ವಕ್ರ ತಿರುವು ಸಾಧ್ಯವಿಲ್ಲ ಬೆಳಕಿಗೆ ಎಂದು. . .

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more