ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸತು

By Staff
|
Google Oneindia Kannada News
ಬಂದಿದೆ ಬಂದಿದೆ ಹೊಸ ವರುಷ
ತಂದಿದೆ ತಂದಿದೆ ಹೊಸ ಹರುಷ
ಹೊಸ ನಿಮಿಷ ಹೊಸ ದಿವಸ
ಹೊಸ ತಾಸು ಹೊಸ ಕಾಲ
ಹಳೆಯದನೆಲ್ಲ ಕಾಡಿ-ಕೂಡಿ ಕಳೆದು
ಬೆಡಗು ಬಿನ್ನಾಣದಿಂದ ಬಂದಿದೆ

ಹೊಸ ಕನಸು ಹೊಸ ತವಕ
ಹೊಸ ಭಾಷೆ ಹೊಸ ಆಸೆ
ಹೊಸ ಮನಸ್ಸಿನೊಂದಿಗೆ ಕೂಡಿಕೊಳ್ಳಲು
ಹಳೆಯದೆನೆಲ್ಲ ಮರೆತು ಕಾದಿದೆ ಮನಸು

ಹೊಸ ರೂಪ ಹೊಸ ಭಾವ
ಹೊಸ ಬಂಧ ಅನುಬಂಧ
ಹೊಸತನದಿ ಬೆಸೆಯ ಬೇಕು ನಾವು
ಹಳೆಯ ನೆನಪುಗಳೊಂದಿಗೆ ಬೆಳಗಲು ಬಾಳು

ಹೊಸ ನೊಟ ಹೊಸ ನಂಟು
ಹೊಸ ಮಿಲನ ಹೊಂಗನಸು
ಹೊಸ ಹೊಂಬೆಳಕು ಬದುಕಿನಲಿದುವೆ
ಜಗದೆಲ್ಲರೆದೆಯಲ್ಲಿ ಮೂಡಲಿ ಹಸನಾಗಲು ಬದುಕು

ಹೊಸ ಪ್ರೀತಿ ಹೊಸ ಪ್ರೇಮ
ಹೊಸ ಮಮತೆ ವಾತ್ಸಲ್ಯ
ಎಲ್ಲರೆದೆಯಾಳಗೆ ಹೂವಂತೆ ಅರಳಿ
ಸೌಗಂಧದ ಕಂಪರಡಲಿ ಎಲ್ಲೆಲ್ಲಿಯು

ಹೊಸ ಜ್ಞಾನ ವಿಜ್ಞಾನಹೊಸ ಯುಗದ ಮಂತ್ರವಾಗಿಬೆಳಯಲಿ ಬೆಳಗಲಿ ಭವ್ಯವಾಗಿಭಾಂದವ್ಯವುಸಿರಾಗಲಿ ಹೊಸತನದ ನೆಪದಲಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X