ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀವನ ಚಕ್ರ

By Staff
|
Google Oneindia Kannada News
ಬಂತಿದೋ ಮತ್ತೊಂದು ವರುಷವದು ಹೊಸತು
ಹಳೆಯ ಕಾಲೆಂಡರನ್ನು ಎಸೆದು
ನೇತು ಹಾಕುವುದು ಅದರ ಜಾಗದಲ್ಲಿ ಹೊಸತು
ತಿಂಗಳೆಲ್ಲ ಗೋಡೆಯ ಮೇಲೆ ಬಿಟ್ಟು
ಒಂದು ಹಾಳೆ ಹರಿಯುವುದು
ಮತ್ತದರತ್ತ ಗಮನ ಹರಿಸುವುದು ತಿಂಗಳ ನಂತರ

ಹನ್ನೆರಡನೆಯ ಹಾಳೆಯನ್ನು ಹರಿಯುವ ಸಮಯಕ್ಕೆ
ಹೊಸತೊಂದು ತರುವುದು
ನೇತು ಹಾಕುವುದು

ಕೆಲವರಿಗೆ ಹೊಸ ವರ್ಷವೆಂದರೆ
ಗುಂಡು ಹಾಕುವುದು
ವರ್ಷವಿಡೀ ಹಾಕಿದ್ದಕ್ಕಿಂತ ತುಸ ಹೆಚ್ಚು
ಮತ್ತೆ ಕೆಲವರಿಗೆ ಅವರಿವರ ಬೇಡಿ ತಂದ
ಬಣ್ಣ ಬಣ್ಣದ ಚಿತ್ರಗಳಿರುವ, ತಾರೀಖು ತೋರದ
ಕಾಲೆಂಡರುಗಳ ಗೋಡೆ ನಿರ್ಮಿಸುವುದು

ಮೊಬೈಲ್‌ ಯುಗದಲ್ಲಿ ಸಂದೇಶಗಳ ಸಂತೆ
ಕೈಯಲ್ಲಿ ಹಿಡಿದ ಮೊಬೈಲನ್ನು ಬೆರಳುಗಳಲಿ ಕುಟ್ಟುತ
ಬೇಕಾದವರಿಗೆ, ಬೇಡದವರಿಗೆ, ನಮ್ಮಿರವ ತಿಳಿಪಡಿಸುವುದು

ಇದಾವುದರ ಪರಿವೆಯಿಲ್ಲದೆ
ಓದಲು ಕಲಿಯಲು ಶಾಲೆಗೆ ಹೋಗಲಾರದೆ
ಬೆಳಗಿನ ಕೂಳು ಸಿಗುವ ಭರವಸೆಯಿಲ್ಲದೆ
ಪರದಾಡುವ ಪಾಪಿಗೆ

ಹೊಸ ವರ್ಷ ಬಂದಿದ್ದೇ
ಗೊತ್ತಾಗಲಿಲ್ಲ!!!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X