ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡುಗೆ ಮಾಡುತ್ತಿದ್ದೇನೆ - 1

By Staff
|
Google Oneindia Kannada News
Aduge Maduttiddene - A poem by Pratibha Nandakumarಗ್ಯಾಸು ಕುಕ್ಕರು ಮಿಕ್ಸರು ಗ್ರೈಂಡರು ಟೋಸ್ಟರು ಗ್ರೇಟರು ಹೀಟರು
ಪೀಲರು ವಾಷರು ಗೃಹಿಣಿಯೇ ಪ್ರಧಾನ ಕಂಸ್ಯೂಮರು ನಿನ್ನೆ
ಅಂಗಡಿಯಲ್ಲಿ ಇಂದು ಮನೆಯಲ್ಲಿ ನಾಳೆ? ಕ್ಲೀನ್ಡು ರೈಸು
ದಾಲು ಪ್ಯಾಕು ಮಾಡಿದ ಎಲ್ಲಾ ಪುಡಿಸಿಡಿ ಹಿಟ್ಟು ಪಟ್ಟು ಬೆಂದ
ಬೇಯಿಸದ ಹುರಿದ ಕರಿದ ಕುಟ್ಟಿದ ನೂರೆಂಟು ಪ್ಯಾಕೆಟ್ಟು
ಎಲ್ಲಾ ಇನ್ಸ್‌ ಟೆಂಟು, ನೀರು ಎರೆಸಿದರೆ ಸಾಕು, ಬರೀ ಬಿಸಿ ಮಾಡಿದರೆ
ಸಾಕು, ಕತ್ತರಿಸಿದರೆ ಸಾಕು, ಸುಮ್ಮನೆ ತಿಂದರೆ ಸಾಕು, ಅಜ್ಜಿ
ಮುತ್ತಜಿಯರ ರೆಸಿಪಿಗಳ ಮುಖ ನಿವಾಳಿಸುವಂತೆ (ಹಾಗಂದರೇನು?)
ನೂಡಲ್ಸು ಗೀಡಲ್ಸು ಪಿಜಾ ಫ್ರೆಂಛು ಫ್ರೆೃಯು, ಚಾಪುಸೂಯಿ ಷೆಜುವಾನು
ಮೇಜುವಾನು ನಾರ್ತ್‌ ಇಂಡಿಯನ್ನು ಕಾಂಟಿನೆಂಟಲ್ಲು ಬಸವನಗುಡಿಯ
ಇಟಾಲಿಯನ್‌ ಐಸ್‌ ಕ್ರೀಮು ನಮ್ಮೂರ ಹೋಟಲು ಬಿಸಿಬಿಸಿ ಸೇಲ್ಸು
ಯಾಕೆ ಸುಮ್ಮನೆ ಸೆಂಟಿಮೆಂಟೆಲ್ಲ ಹೋಗಲಿ ಬಿಡಿ ಒಂದಷ್ಟು
ಕ್ರಿಮಿನಾಶಕ ಹೊಟ್ಟೆಗೆ ಕಲಬೆರಕೆ ಪಾತಕ ಬಾಟಲು ಪಾನಕ
ಇದೇನು ಮಹಾ ನರಕ ಜಗತ್ತೇ ಬಾಯಿಹರಕ ರಿಫೈನ್ಡು ಫಿಲ್ಟರ್ಡು
ಪ್ರೋಸೆಸ್ಡು ಕಲ್ಚರ್ಡು ಆರು ತಿಂಗಳೊಳಗೆ ತಿನ್ನಿ ಮೂರು ವಾರ
ಹಾಗೇ ಇಡಬಹುದು ಎರಡು ತಿಂಗಳು ಫ್ರಿಡ್ಜಿನಲ್ಲಿಡಿ ನಾಳೆಯಾಳಗೆ
ತಿಂದು ಮುಗಿಸಿ ಹಿಮಾಲಯ ಹತ್ತುವವರು ಇದನ್ನೇ ತಿನ್ನುತ್ತಾರೆ
ಮಹಡಿ ಹತ್ತಲಾರದವರೂ ಇದನ್ನೇ ತಿಂದು ಕೊಬ್ಬುತ್ತಾರೆ ನೋಡಿ
ಇಷ್ಟೂ ಮಾಡಲಾಗದವರು ಎರಡು ಚಮಚ ಪುಡಿ ಬಾಯಿಗೆ
ಬಿಟ್ಟುಕೊಂಡು ಗಾಳಿ ಕುಡಿದೇ ಬದುಕಿ ನಾಲ್ಕು ಸಾವಿರದ ಎಂಟು
ನೂರು ರೂಪಾಯಿಗೆ ಎಲ್ಲ ವಿಟಮಿನ್ನು ಪ್ರೋಟೀನು ಜೊತೆಗೆ
ಬೆಳಗ್ಗೆ ಸಂಜೆ ಜಿಮ್ಮಿಗೆ ಆರುನೂರು ನಿಂತ ಕಡೆಯೇ ನಡಿಗೆ
ಕರೀನ ಕಪೂರು ವೇಸ್ಟು ಎಲ್ಲರಿಗೂ ಬೇಕು ಬೇಕು
ಡಾಕ್ಟರು ಇಂಜಿನಿಯರು ಆರ್ಟಿಸ್ಟು ಜರ್ನಲಿಸ್ಟು ಲೇಟೆಸ್ಟು
ಮಾಡೆಲ್ಲು ಟೀವಿಯಲ್ಲಿ ಹಾಟ್‌ ಫೇವರಿಟ್ಟು ಹಿಟ್ಟು
ಮತ್ಯ್ತಾಕೆ ಬಡಕೊಳ್ಳುತ್ತಾರೋ ಏನೋ
ಸಾಯಲೂ ಪುರುಸೊತ್ತಿಲ್ಲದ ಇವತ್ತು

ಬೆಳಗಾಗೆದ್ದು ಅಡುಗೆ ಮಾಡುತ್ತಿದ್ದೇನೆ
ಸುಡುಗಾಡು ಯಾವುದೋ ಹಬ್ಬವಂತೆ
ಏನೋ ಮಾಡಬೇಕಂತೆ.....

ಅಡುಗೆ ಮಾಡುತ್ತಿದ್ದೇನೆ - 2

ಅಡುಗೆ ಮಾಡುವುದೆಂದರೆ ಬಹಳ ಇಷ್ಟ ನನಗೆ
ಹೊರದಾರಿ ಅದು ನನ್ನೆಲ್ಲ ಆಕ್ರೋಶಗಳಿಗೆ

ತೊಳೆದು ಸಿಪ್ಪೆ ಸುಲಿದು ಕತ್ತರಿಸಿ ಜಜ್ಜಿ ಕುಟ್ಟಿ
ಹುರಿದು ಅರೆದು ರುಬ್ಬಿ ನುರಿದು ಬಾಡಿಸಿ
ಬೇಯಿಸಿ ಹಿಚಿಕಿ ಮಸೆದು ಕೊಚ್ಚಿ ಕಲೆಸಿ
ಗಸಗಸನೆ ಕಡೆದು ಎತ್ತಿ ಹಾಕಿದರೆ ತಟ್ಟೆಗೆ

ರುಚಿರುಚಿ ಅಂತ ತಿನ್ನುತ್ತಾರೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X