ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೋಗ ಜಲಧಾರೆ ಮತ್ತು ದಿನಕರ ದೇಸಾಯಿ!

By Staff
|
Google Oneindia Kannada News

(ಜೋಗ ಜಲಧಾರೆಯ ಸೊಬಗು, ಈಗ ಮನಮೋಹಕ. ಶರಾವತಿ ನದಿಯ ಪಾತ್ರದಲ್ಲಿ ರಭಸದ ಮಳೆ ಬೀಳುತ್ತಿದ್ದು ಲಿಂಗನಮಕ್ಕಿ ಜಲಾಶಯ ತನ್ನ ಗರಿಷ್ಟ ಮಟ್ಟ 1819 ಅಡಿ ಮುಟ್ಟಿದೆ. ಒಳಹರಿವಿನ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದ್ದು ಜಲಪಾತವು ಸುಮಾರು 3 ದಶಕದ ನಂತರ ಮೈ ದುಂಬಿ ಹರಿಯುವುದರೊಂದಿಗೆ, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ರಾಜಾ, ರಾಣಿ ಜಲಧಾರೆಗಳು ಒಂದಾಗಿ ಶಿಲೆಯೇ ಜಲವಾಗಿ ಧುಮ್ಮಿಕ್ಕಿ ಹರಿಯುವ ಭ್ರಮೆ ಮೂಡಿಸುತ್ತಿದೆ. ಮಳೆ ಬಿಸಿಲಿಗೆ ಕಾಮನ ಬಿಲ್ಲು ಜಲಧಾರೆಗೆ ಅಡ್ಡಲಾಗಿ ಹೊಸ ನೋಟವನ್ನು ನೀಡುತ್ತಿದೆ. ಮೋಡವೇ ಹಸಿರ ಕಣಿವೆಯ ಆಕರ್ಷಣೆಗೆ ಮನಸೋತು ಇಳಿದೋಡುವ ಕಲ್ಪನೆ ಉಂಟಾಗುತ್ತದೆ. ಈ ದೃಶ್ಯವು ಉತ್ತರ ಕನ್ನಡದ ಹೆಮ್ಮೆಯ ಕವಿ ದಿನಕರ ದೇಸಾಯಿಯವರ ಕವನವನ್ನು ನೆನಪಿಸುತ್ತದೆ ಎನ್ನುವ ಶಿರಸಿಯ ‘ವಿನಯ ಅಡಿ’, ಆ ಕವನವನ್ನು ಎಲ್ಲರಿಗೂ ನೆನಪು ಮಾಡಿದ್ದಾರೆ. ಜೋಗದ ಈಗಿನ ರಮ್ಯನೋಟವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ನಮಗೆ ಕಳುಹಿಸಿದ್ದಾರೆ.)Jog Falls and Dinakara Desaiತಡಸಲು ತಡಸಲು ಅದೋ ಅಲ್ಲಿ
ಧಡ ಧಡ ಎನುತಿದೆ ಎದೆಯಲ್ಲಿ
ದಿಡುಗದೊ ಗುಡುಗುಡು ಗುಡುಗುತಿದೆ
ಗಿಡಮರ ಜನಮನ ನಡುಗುತಿದೆ
ಗುಡುಗೇ ನೀರಾಗಿಹುದಿಲ್ಲಿ
ಮೋಡ ಹುಟ್ಟುತಿದೆ ಮಳೆಯಲ್ಲಿ
ತುಂತುರು ಮಳೆ-ಹೊಳೆ ಅಂಚಿಗಿದೆ
ನೀರೇ ಮಿರಿ ಮಿರಿ ಮಿಂಚುತಿದೆ
ಮುತ್ತಿನ ಸರಗಳು ಹರಿಯುತಿವೆ
ಗಾಜು ಗಂಬಗಳು ಸುರಿಯುತಿವೆ
ಕಾಮನ ಬಿಲ್‌ ಮಣಿದಾಡುತಿದೆ
ನೀರಿನ ಹೂ ಕುಣಿದಾಡುತಿದೆ
ನೆಲ ಮುಗಿಲ್‌ಗಳ ನಡುವಿನ ಬೆಡಗು
ರಮ್ಯ ಭಯಂಕರ ವೀದಿಡುಗು
ಅಧ್ಭುತ ಕರೆವುದು ಬಾ ಇಲ್ಲಿ
ಭಯ ಗದರಿಸುತಿದೆ ನಿಲ್ಲಲ್ಲಿ
ನಿಂತಲ್ಲಿಯೇ ಕಾಲಂಟಿತ್ತು
ಊಹೆ ದಿಗಂತಕೆ ಹೊಂಟಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X