ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಂಡ-ತಿ

By Staff
|
Google Oneindia Kannada News
ಕೆಂಚಿಯ ಕಂಡ ಮೊದಲ ಕ್ಷಣ
ಪಡಖಾನೆ ಕಂಡ ಕುಡುಕನ ಮನ
ಕೈ ತುಂಬ ಕಾಸು, ಹೆಂಡ ನೆನೆದುದೆಲ್ಲ
ಕೆಂಚಿಯ ರೂಪವೇ ಕಂಡದ್ದು ಕನಸಲೆಲ್ಲ

ಅವಳ ಕಣ್ಣಿನಾಳವ ಹಂಬಲಿಸಿದರೆ
ಹದವಾದ ಹೆಂಡ, ತಿಳಿಸದೆ, ನಶೆಯೇರಿಸಿದಂತೆ
ಕೆಂಚಿಯ ಕಿರುನಗುವ ಸ್ವಾದಿಸಿದರೆ
ಸುಕ್ಕಾ ಕುಡಿದು ಜಿಗಿದಾಡಿದಂತೆ

ಪಟ-ಪಟನೆ ಆಕೆ ನುಡಿದರೆ
ಗಟ-ಗಟನೆ ಹೆಂಡವ ಹೀರಿದಂತೆ
ನನ್ನ ನೋಟಕೆ ಆಕೆ ನಾಚಿದರೆ
ನಡುವೆ ಉಪ್ಪಿನಕಾಯಿ ನೆಕ್ಕಿದಂತೆ

ಕೈ ಹಿಡಿದು ನನ್ನೊಡನೆ ಆಕೆ ನಡೆದರೆ
ಕಂಠಪೂರ್ತಿ ಕುಡಿದು ತಂಗಾಳಿಯಲಿ ತೇಲಿದಂತೆ
ಕೆಂಗಣ್ಣಿನಿಂದ ನನ್ನಾಕೆ ನನ್ನ ಕಂಡರೆ
ಕುಡಿದದ್ದೆಲ್ಲ ನಾ ಕಕ್ಕಿ ನರಳಿದಂತೆ

ಯಲ್ಲೂ ಇದೆ ಹೆಂಡ
ಅರಿಯದಿದ್ದರೆ ನೀನೇ ಹೆಡ್ಡ
ಒಡಲ ಸುಡಲು ಹೆಂಡ
ಒಲವಿನ ನಶೆಯಲ್ಲಿ ಸಾಕ್ಷಾತ್ಕಾರಕ್ಕೆ ಹೆಂಡತಿ


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X