ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರಿವಳಿಕೆಯಿಂದಾಚಿನ ಅರಿವು

By Staff
|
Google Oneindia Kannada News

ಇದರಾಚೆ ಇನ್ನೊಂದು ಲೋಕವಿದೆ.. ಆ ಲೋಕ ಮತ್ತು ಈ ಲೋಕದ ವ್ಯವಹಾರಗಳು ಎಷ್ಟೊಂದು ಭಿನ್ನ?Anjali Ramanna

ಕರುಳ ಬಳ್ಳಿಯಲ್ಲಿನ್ನೂ ಬಿರಿಯಹೊರಟ್ಟಿದ್ದ ಮೊಗ್ಗುಗಳ ಕಲರವ. . .
ಹಿಂದಿನವರು ಮುಂದಿನವರೇ ಆಗಿ ನೆತ್ತಿ ಆಘ್ರಾಣಿಸಿದ ಅನುಭವ. . .
ಹೃದಯದ ಬಾಗಿಲಲ್ಲಿ ಹೆಜ್ಜೆಗಳ ಸಪ್ಪಳ ಯಾರದ್ದು?
ಯಾರು ಯಾರದ್ದೋ. . .
ಹುಲ್ಲುಗಾವಲಿನಲ್ಲಿ ಕಾಲ್ಗುರುತ ನೀಡಬಯಸಿದ್ದೆ
ಓಡುತ್ತಲೇ ಇದ್ದೆ. . .
ತಿರುಗಿ ನೋಡುತ್ತಲೂ ಇದ್ದೆ ಹಸಿರು ಹುಟ್ಟುತ್ತಲೇ ಇತ್ತು. . .
ಮಾತುಗಳು ನನ್ನವು ಆದರೆ ನನ್ನವಲ್ಲ ಶಬ್ಧ. . .
ಒಂದರೆನಿಮಿಷ ಎಲ್ಲವೂ ಸ್ತಭ್ದ. . .
ಅರೆ, ಇದೇ ಮೌನವನ್ನಲ್ಲವೇ ನಾ ಬಯಸಿದ್ದು. . .
ಆದರೆ ಈ ಏಕಾಂತದಲ್ಲಲ್ಲವಲ್ಲ. . .
ದೇಹದೊಳಗೆಲ್ಲಾ ಕತ್ತರಿಯ ಗುಡು ಗುಡು. . .
ಬಂದಿತ್ತು
ಆ ಜಗತ್ತಿನ ಕೊಂಡಿ ಕಳಚಿತ್ತು. . .
ನನ್ನತನವೆಲ್ಲಾ ಸತ್ತೂ ಸುತ್ತುವರೆದಿತ್ತು ನನ್ನನ್ನೇ. . .
ಮೂಲೆಯಲ್ಲನ್ನಿಸಿತ್ತು ‘ನ ’ ಕಾರಗಳೆಲ್ಲಾ ಈ ಜಗತ್ತಿನ ಸ್ವತ್ತು ತಾನೆ?. . .
ಅದಕ್ಕೇ ಇರಬೇಕು ಅಲ್ಲಿ ನಾನು ನಾನಾಗಿರಲಿಲ್ಲ. . .
ಇಲ್ಲಿ ನಾನು ನಾನಾಗಲೇ ಇಲ್ಲ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X