ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರಾವಳಿಯ ಕನ್ಯೆಯರು

By Staff
|
Google Oneindia Kannada News
  • ಮೋಹನಚಂದ ಪಾಟೀಲ, ಬಿಣಗಾ, ಉತ್ತರ ಕನ್ನಡ ಜಿಲ್ಲೆ
    [email protected]
ಕರಾವಳಿಯ ಕನ್ಯೆಯರ ಮೈಯ್ಯಲ್ಲಿ
ಉಕ್ಕುವ ಸಮುದ್ರದ ತುಡಿತವಿದೆ
ಗಾಳಿಯ ಆರ್ದ್ರತೆ ನೆಲದ ಕಾವಿದೆ
ಉಪ್ಪಿದೆ ಮುಪ್ಪದ ಯುೌವನವಿದೆ

ಇಲ್ಲಿಯ ಹೆಣ್ಣುಗಳ ಎದೆಯಲ್ಲಿ
ಕಡಲಿನ ತೆರೆಗಳ ಏರಿಳಿತವಿದೆ
ಕಾಮದ ಪ್ರೇಮದ ನಡುವೆ
ಓಲಾಡುವ ಅಲೆಗಳ ಮಿಡಿತವಿದೆ

ಇವರ ತೆರೆದ ತುಟಿಗಳ ನಗೆಯಲ್ಲಿ
ಗಂಡಸುತನ ಕೆರಳಿಸುವ ಮದವಿದೆ
ಕುಣಿಸುವ ಮಣಿಸುವ ವ್ಯಂಗ್ಯವಿದೆ
ರಮಿಸುವ ತಣಿಸುವ ಕೋಮಲತೆಯಿದೆ

ಈ ಹೆಣ್ಣುಗಳ ಅರಳಿದ ಕಣ್ಣುಗಳಲಿ
ಕನಸಿನ ಡೋಣಿಗಳು ತೇಲುತಿವೆ
ಜಾರುವ ಮೀನುಗಳ ಎಳೆಯಲು
ಬಲೆಯನು ಬೀಸುವ ಮಾಂತ್ರಿಕತೆಯಿದೆ

ಇವರು ನಡೆವ ಒಜ್ಜೆಯ ಹೆಜ್ಜೆಗಳಲಿ
ಹೊಯ್ದಾಡುವ ಅಲೆಗಳ ಚಂಚಲತೆಯಿದೆ
ನಿಂತರೂ ಕುಂತರೂ ಒರಗಿದರೂ
ಇವರ ಭಂಗಿಗಳಲಿ ಮಾದಕತೆಯಿದೆ

ಮತ್ಸ್ಯದ ಪೊರೆ ತೊರೆದ ಈ ಕನ್ಯೆಯರಲಿ
ಕರಾವಳಿಯ ಗಾಳಿಗೆ ಮಳೆಗೆ ಬಿಸಿಲಿಗೆ
ಮೈಯೊಡ್ಡಿ ಬೆಳೆದ ಮೋಹಿನಿಯರಲಿ
ಸಮುದ್ರದ ತುಡಿತ ಅಲೆಗಳ ತುಯ್ತವಿದೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X