ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆನಪಿನ ಅಲೆಗಳು

By Staff
|
Google Oneindia Kannada News
ಮೆಲ್ಲನೆ ತಂಗಾಳಿಯು ಬೀಸುತ್ತಿರುವ ಸುಂದರ ಮುಸ್ಸಂಜೆಯಲಿ
ಮುಳುಗುತ್ತಿರುವ ಸೂರ್ಯನ ನೋಡುತ್ತಿರಲು ಕಡಲತೀರದಲಿ
ಸಾಗರದ ಅಲೆ ಅಲೆಯಾಗಿ ಮೂಡಿ ಬಂದವು
ಮನದಾಳದಿಂದ ಸುಂದರ ನೆನಪುಗಳು

ನೆನಪುಗಳು ನಾವು ನಡೆದು ಬಂದ ಹಾದಿಯ ಕನ್ನಡಿಯಂತೆ
ನಮ್ಮನೇ ಚಿತ್ರಿಸುವ ನಮ್ಮ ಪ್ರತಿಬಿಂಬದಂತೆ
ನೆನಪುಗಳು ನಾವು ಮುಂದೆ ನಡೆದು ಹೋಗುವ ಹಾದಿಯ ಮುನ್ನುಡಿಯಂತೆ
ಕಾಲ ಉರುಳಿದರು, ಸಾಲು ಸಾಲಾಗಿ ನಿಲ್ಲುವ ಸಾಲು ದೀಪಗಳಂತೆ

ನೆನಪುಗಳು ನಮ್ಮ ಬಾಳ ಪಯಣದಲಿ ಜೊತೆಗೂಡಿ ಬರುವ ಪಯಣಿಗನಂತೆ
ನಮ್ಮ ಬಾಳ ಹಾದಿಯುದ್ದಕ್ಕೂ ನಮಗಾಗುವ ಆಸರೆಯಂತೆ
ಸವಿಯಾದ ನೆನಪುಗಳು ಕಡಲಾಳದಂತೆ
ಅವುಗಳಿಗೆ ದೇಶ ಸಾಗರದ ಅಂತರವೇ ತಿಳಿಯದಂತೆ

ನೆನಪುಗಳು ಸದಾ ಮನದೊಳಗೆ ನೆನಪಾಗಿರಲಿ
ಎಂದು ಅಳಿಯದಂತೆ ಮನದೊಳಗೆ ಅಚ್ಚಹಸಿರಾಗಿರಲಿ
ನೂರಾರು ಸುಂದರ ನೆನಪಿನಿಂದ ತುಂಬಿದೆ ಈ ಮನವೆಂಬ ಸಾಗರ
ಈ ಸಾಗರದಲಿ ಅಲೆ ಅಲೆಯಾಗಿ ತೇಲಿಬಂದ ನೆನಪುಗಳೆ ಅಮರ ಅಮರ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X