ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಹಸೀಲ್ದಾರನ ಜೀಪ್‌

By Staff
|
Google Oneindia Kannada News

Tahasildar's jeep
ಕಂದಾಯ ಇಲಾಖೆಯಿರಲಿ, ಪೊಲೀಸ್‌ ಇಲಾಖೆಯಿರಲಿ, ಶಿಕ್ಷಣ ಇಲಾಖೆಯಿರಲಿ ಉನ್ನತ ಹುದ್ದೆಯ ಸಾರ್ವಜನಿಕ ಅಧಿಕಾರಿಗಳಿಗೆ ಸರಕಾರದ ವತಿಯಿಂದಲೇ ಜೀಪು, ಚಾಲಕ, ಸಹಾಯಕ ಇತ್ಯಾದಿ ಇರುತ್ತವೆ. ಈ ಎಲ್ಲ ಸೌಲಭ್ಯಗಳೇನೊ ಮಂಜೂರಾಗಿರುತ್ತವಾದರೂ ಅವನ್ನು ಪಡೆಯುವಾಗಿಂದ ಆರಂಭವಾಗಿ, ದಿನಾ ಬಳಸುವ ವಿಚಾರದಲ್ಲಿನ ಬವಣೆ ಸಂಕಷ್ಟಗಳು ಒಂದೆರಡಲ್ಲ. ನೋಡುವವರಿಗೆ, 'ಆಹಾ, ಸರ್ಕಾರಿ ವಾಹನದಲ್ಲಿ ಗತ್ತಿನಿಂದ ತಿರುಗುತ್ತಾನೆ..." ಅಂತನಿಸಿದರೂ ಒಳಗಿನ ಗುಟ್ಟು ಈ ಬಡಪಾಯಿ ಅಧಿಕಾರಿಯೇ ಬಲ್ಲ! ಅದರಲ್ಲೂ ಇಲಾಖೆಯಿಂದ ಹೊಸದೇನಾದರೂ ಸಾಂಕ್ಷನ್‌ ಆದಾಗ 'ದೇವರು ಕೊಟ್ಟರೂ ಪೂಜಾರಿ ಬಿಡ" ಎಂಬಂತೆ ಮೇಲಧಿಕಾರಿ ಅದನ್ನು ಕಬಳಿಸದೇ ಇರುತ್ತಾನೆಯೆ? ಈ ಪರಿಯ 'ತುಕ್ಕು ಹಿಡಿದ ಸರಕಾರಿಯಂತ್ರ"ದ ವಿಷಯವನ್ನು ಹತ್ತಿರದಿಂದ ಬಲ್ಲವರು ಒಬ್ಬ ಸರಕಾರಿ ಅಧಿಕಾರಿಯೂ ಆಗಿರುವ ಈ ಕವಿ. ದ.ಕ ಜಿಲ್ಲೆಯ ಬಂಟ್ವಾಳದಲ್ಲಿ ತಹಸೀಲ್ದಾರ್‌ ಆಗಿರುವ ಶಾಂತಾರಾಮ್‌ ಚಿಪಳೂಣ್ಕರ್‌, ಸದ್ಯಕ್ಕೆ ವೈಯಕ್ತಿಕ ರಜೆಯಲ್ಲಿ ದೂರದ ಅಮೆರಿಕೆಗೆ ಮಗಳ ಮನೆಗೆ ಹೋಗಿ ಅಲ್ಲಿ ಖುಶಿಯಾಗಿದ್ದಾರೆ. ಅಮೆರಿಕದಲ್ಲಿ ಪ್ರತಿಯಾಬ್ಬ ಸಾಮಾನ್ಯ ಪ್ರಜೆಯೂ ಸ್ವಂತ ವಾಹನವನ್ನು ಹೊಂದಿರುವುದನ್ನು ನೋಡಿದಾಗ, ಸ್ವದೇಶದಲ್ಲಿ ತನ್ನ ಇಲಾಖೆಯ ಜೀಪು ಮತ್ತದರ ಸ್ಥಿತಿಗತಿ ನೆನಪಾದಾಗಿನ ಲಹರಿ ಇದು.

ಶಾಂತಾರಾಮ ಚಿಪಳೂಣ್ಕರ್‌, ಬಂಟ್ವಾಳ
(ಕ್ಯಾಂಪ್‌: ಫೀನಿಕ್ಸ್‌, ಅರಿಜೋನಾ)

ತಹಸೀಲ್ದಾರನ ಜೀಪ
ಕೆಟ್ಟು ನಿಂತಿದೆ ಅದೊಂದು
ಮಹಾ ಶಾಪ
ಸಿಡುಕ ಡ್ರೈವರ
ಕುಡುಕ ಕ್ಲೀನರ
ವಾಕರಿಕೆ ಬರುವಂಥ ರೂಪ

ರಿಪೇರಿ ಮಾಡಿಸಲು ಇಲ್ಲ ಅನುಮತಿ
ಅನುಮತಿ ಸಿಕ್ಕಾಗ ಬಜೆಟ್‌ ಕೊರತೆ
ಅದೂ ಇದೂ ಕಿತಾಪತಿ
ಬಜೆಟ್‌ ಸ್ಯಾಂಕ್ಷನ್‌ ಆಗಿ
ಗ್ಯಾರೇಜಿಗೆ ಹೋದಾಗ
ಅಲ್ಲಿ ಮೆಕ್ಯಾನಿಕನದು ಅದೇ ರಾಗ
"ಹಳೇ ಬಾಕಿ" ಕೊಡಿ ಎಂಬುವನು ಆಗ

ಹೊಸ ಜೀಪು ಖರೀದಿಯ ಯೋಜನೆ
ಅರ್ಜಿಯ ಬಗ್ಗೆ ಮೇಲಿಂದಮೇಲೆ ವಿಚಾರಣೆ
ಕೆಂಪುಪಟ್ಟಿಯ ಒಳಗೇ ಬೆಳೆಯಿತು ಕಡತ
ಬೆಳೆದು ಬಲಿಯಿತು ಬಲಿತು ಬೆಳೆಯಿತು
ಬೆಳೆದ ಕಡತವ ಹೊರಲು
ಮತ್ತೊಂದು ಜೀಪೇ ಬೇಕು ಖಂಡಿತ!

ಕೊನೆಗೊಮ್ಮೆ ಹೊಸ ಜೀಪು ಬಂದಾಗ
ತಹಸೀಲ್ದಾರನಿಗೆ ಹತ್ತಿ ಹೊರಡುವ ತವಕ
ಆಗಲೇ ಎ.ಸಿ (ಅಸಿಸ್ಟೆಂಟ್‌ ಕಮಿಷನರ್‌) ಹೇಳಿಕಳಿಸಿದ....
ಹೊಸ ಜೀಪು ನನಗಿರಲಿ... ವರ್ಗವಾಗುವ ತನಕ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X