ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಲ್ಲೆ ನಿನ್ನ ಪ್ರೀತಿ

By Staff
|
Google Oneindia Kannada News
Mallikarjuna Sannappanavarಬಾ ನಲ್ಲೆ ಬಾ ನಲ್ಲೆ ಓ ನಲ್ಲೆ
ಬಾ ನಮ್ಮ ಪ್ರೀತಿಗೆ ಒಂದು ನೆಲೆ

ನಿನ್ನ ಪ್ರೀತಿ ನನಗೆ ವಸಂತಮಾಸ ಬಲ್ಲೆಯಾ ನಲ್ಲೆ
ನಾನು ಆ ಮಾಸದಲ್ಲಿ ಚಿಗುರಿದ ಹಸಿರು ಮಾವಿನ ಎಲೆ

ನಿನ್ನ ಪ್ರೀತಿ ನನಗೆ ಸಿಹಿ ಸವಿ-ಜೇನು ಬಲ್ಲೆಯಾ ನಲ್ಲೆ
ಈ ದುಂಬಿಗೆ ಮಾತ್ರ ಗೂತ್ತು ನಿನ್ನಂತಹ ಹೂವ್ವಿನ ಬೆಲೆ

ಎಂದಿಗೂ ತೀರದು ನಿನ್ನ ಪ್ರೀತಿಯ ದಾಹ ಬಲ್ಲೆಯಾ ನಲ್ಲೆ
ಅದು ಮರುಭೂಮಿಯಲ್ಲಿ ಸಂಚರಿಸುವ ಸಂಚಾರಿಯ ನೀರಿನ ಸೆಲೆ

ನಿನ್ನ ಸೌಂದರ್ಯ ಕಾಣಲು ಸದಾ ತವಕ ನನ್ನಲ್ಲಿ ಬಲ್ಲೆಯಾ ನಲ್ಲೆ
ರವಿವರ್ಮನ ಕಣ್ಣಿಗೆ ಬಿದ್ದಿದ್ದರೆ ಆಗುತ್ತಿದ್ದೆ ನೀನು ಅವನ ಕುಂಚದ ಕಲೆ

ನಿನ್ನ ಪ್ರೀತಿಗಾಗಿ ಯಾವ ತ್ಯಾಗಕ್ಕೂ ಸಿದ್ದ ಬಲ್ಲೆಯಾ ನಲ್ಲೆ
ನಿನ್ನಂತ ಜೂಲಿಯಟ್ಟಳ ಪ್ರೀತಿಗಾಗಿ ಕೊಟ್ಟ ನನ್ನಂತ ರೋಮಿಯಾ ತಲೆ

ಈ ಕವಿತೆ ಬಗೆಗೆ ನಿಮ್ಮ ಅನ್ನಿಸಿಕೆಗಳೇನು ?

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X