ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವಳು

By Staff
|
Google Oneindia Kannada News
ತಿರುಗಿ ಬರುವವಳಿದ್ದಾಳೆ ಮನೆಗೆ
ಏನೋ ರೋಮಾಂಚನವು ಎನ್ನೆದೆಯಾಳಗೆ
ರವಿಯನ್ನೂ ಮರೆಮಾಚಿ ನಗೆಯಾಡುವಳು
ಇಣುಕಿ ಬಿಸಿಯನಾರಿಸಿ ಅಣಕಿಸುವಳು

ಮುಂಜಾವಿನ ತಂಗಾಳಿ ಹೇಳುತಿಹುದೆನಗೆ
ಬರುತ್ತಿದ್ದಾಳೆ ತಿರುಗಿ ಇಲ್ಲಿಗೆ
ಮರೆತರೆ ಅವಳನು ದಿನದೊಳು
ಇರುಳಲಿ ಓಡಿ ಬಂದು ನೆನಪಿಸುವಳು

ಇದು ಮೊದಲಲ್ಲ , ಕೊನೆಯಲ್ಲ
ತಿರುತಿರುಗಿ ಬರುವಳಿಲ್ಲಿ
ಆಡಿ ಜೊತೆಗೂಡಿ ಕಾಡಿ
ಮರೆಯಾಗುವಳು, ಮತ್ತೆ ಬರುವೆನೆಂದು ಹೇಳಿ

ನಸುಕಿನೋಳ್‌ ಮುಸುಕು ಹೊದ್ದು
ಬಂದೆನ್ನ ಮೇಲೆ ಎರಗುವಳು
ಅಡಿಯಿಂದ ಮುಡಿಯವರೆಗೂ
ಆವರಿಸಿ ತನು ನಡುಗಿಸುವಳು

ಪ್ರತಿ ಮುಂಜಾವು, ಪ್ರತಿ ಇರುಳು
ಓಡೋಡಿ ಬಂದೆನ್ನ ಅಪ್ಪುವಳು
ಕಾಡುವಳು, ಗೋಳಾಡಿಸುವಳು
ದೂರ ಓಡಿ ಹೋಗುವಂತೆ ಮಾಡುವಳು

ನನ್ನಲ್ಲೇನೋ ಕಾತರ, ಆನಂದ
ಬರುವಳೆಂದು ತಿಳಿದು
ಬರುತ್ತಿದ್ದಾಳವಳು ಎನ್ನೊಳು ಬೆರೆಯಲು
ಕಪ್ಪು ನೆನಪುಗಳನಳಿಸಲು

ಅವಳಾರು ಬಲ್ಲೆಯೇನು ಆ ಮಳ್ಳಿ,
ಅವಳೆ... ಅವಳೆ... ದೆಹಲಿಯ ಚಳಿ


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X